ಚೆನ್ನೈ: ದೀಪಾವಳಿ ಹಬ್ಬ ಎಂದರೆ ಪಟಾಕಿಗಳನ್ನು ಸಿಡಿಸಿ ಸಂಭ್ರಮ ಪಡುವುದು, ಹೊಸ ಬಟ್ಟೆಗಳನ್ನು ಧರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲಾ ಕಡೆ ಪಟಾಕಿಗಳದ್ದೆ ಸದ್ದು, ಪಟಾಕಿ ಸದ್ದು ಕೇಳದೆ ಹೋದರೆ ದೀಪಾವಳಿ ಅಪೂರ್ಣ ಎಂಬಂತೆ ಆದರೆ ತಮಿಳುನಾಡಿನ ಈ ಏಳು ಗ್ರಾಮದ ಜನರು ಈ ಬಾರಿ ದೀಪಾವಳಿಗೆ ಒಂದೇ ಒಂದು ಪಟಾಕಿಯನ್ನು ಸಿಡಿಸಲಿಲ್ಲವಂತೆ. ಇದರ ಹಿಂದೆ ಒಂದು ಒಳ್ಳೆಯ ಉದ್ದೇಶವೂ ಇದೆಯಂತೆ ಹಾಗಾದರೆ ಯಾವುದು ಆ ಉದ್ದೇಶ ಜನ ಯಾಕೆ ಪಟಾಕಿ ಸಿಡಿಸುವುದನ್ನು ಬಿಟ್ಟಿದ್ದು ಇಲ್ಲಿದೆ ಮಾಹಿತಿ.
ತಮಿಳುನಾಡಿನ ಈರೋಡ್ ಜಿಲ್ಲೆಯ ಏಳು ಗ್ರಾಮಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಬಾರಿ ದೀಪಾವಳಿಗೆ ಪಟಾಕಿ ಸಿಡಿಸದಿರಲು ನಿರ್ಧರಿಸಿದ್ದಾರೆ ಅದಕ್ಕೆ ಕಾರಣ ಈರೋಡ್‌ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ವಡಮುಗಮ್ ವೆಲ್ಲೋಡ್‌ನಲ್ಲಿರುವ ಪಕ್ಷಿಧಾಮ. ಹೌದು ಇಲ್ಲಿರುವ ಪಕ್ಷಿಧಾಮದಲ್ಲಿ ಸುಮಾರು ನೂರಾರು ಹಕ್ಕಿಗಳು ವಾಸವಿದೆಯಂತೆ ಅವುಗಳನ್ನು ನೋಡುವುದೇ ಈ ಗ್ರಾಮದ ಜನರಿಗೆ ಏನಿಲ್ಲದ ಸಂತಸ. ಪಕ್ಷಿಗಳ ಮೇಲಿರುವ ವ್ಯಾಮೋಹವೇ ಈ ಬಾರಿಯ ದೀಪಾವಳಿಗೆ ಪಟಾಕಿ ಸಿಡಿಸದಿರಲು ಈ ಗ್ರಾಮದ ಜನ ನಿರ್ಧರಿಸಿರುವುದು. ಒಂದು ವೇಳೆ ಪಟಾಕಿ ಸಿಡಿಸಿದರೆ ಪಟಾಕಿ ಸದ್ದಿಗೆ ಪಕ್ಷಿಗಳು ಹೆದರಿ ಬೇರೆ ಕಡೆಗೆ ಓಡಿ ಹೋಗುತ್ತವೆ ಎಂಬ ಕಾರಣಕ್ಕೆ ಪಟಾಕಿಯನ್ನಾದರೂ ಬಿಡುತ್ತೇವೆ ಆದರೆ ನಮ್ಮ ಗ್ರಾಮಕ್ಕೆ ಬಂದಿರುವ ಅತಿಥಿಗಳನ್ನು ಬಿಡಲು ತಾವು ತಯಾರಿಲ್ಲ ಎಂಬ ನಿರ್ಧಾರಕ್ಕೆ ಊರಿನ ಜನ ಬಂದು ಬಿಟ್ಟಿದ್ದಾರೆ.
ಇಲ್ಲಿನ ಕಾಡುಗಳು ಅಕ್ಟೋಬರ್‌ನಿಂದ ಜನವರಿ ವರೆಗೆ ಹಕ್ಕಿಗಳ ಸಂತಾನವೃದ್ಧಿ ಅವಧಿಯಾಗಿರುತ್ತದೆ, ಈ ಸಮಯದಲ್ಲಿ ಅಭಯಾರಣ್ಯವು ತಮ್ಮ ಮೊಟ್ಟೆಗಳನ್ನು ಇಡಲು ಮತ್ತು ಮರಿ ಮಾಡಲು ಆಗಮಿಸುವ ಸಾವಿರಾರು ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗುತ್ತದೆ.
ಅಷ್ಟು ಮಾತ್ರವಲ್ಲದೆ ಸಂತಾನಾಭಿವೃದ್ಧಿಗೆ ಹಕ್ಕಿಗಳಿಗೂ ಈ ಪ್ರದೇಶ ಅಚ್ಚುಮೆಚ್ಚಿನ ಹಾಗೂ ಸುರಕ್ಷಿತ ತಾಣವಾಗಿ ಪರಿಣಮಿಸಿರಬಹುದು ಹಾಗಾಗಿ ಕಳೆದ 22 ವರ್ಷಗಳಿಂದ ಹಕ್ಕಿಗಳು ಈ ಸಮಯದಲ್ಲಿ ವಲಸೆ ಬರುತ್ತವೆ ಅದಕ್ಕಾಗಿ ಸೆಲ್ಲಪ್ಪಂಪಳಯಂ, ವಡಮುಗಂ ವೆಲ್ಲೋಡೆ, ಸೆಮ್ಮಂಡಂಪಳಯಂ, ಕರುಕ್ಕಂಕಟ್ಟು ವಲಸು, ಪುಂಗಂಪಾಡಿ ಮತ್ತು ಇತರ ಎರಡು ಗ್ರಾಮದ ಜನರೂ ಕೂಡ ದೀಪಾವಳಿ ಸಮಯದಲ್ಲಿ ಪಟಾಕಿಗೆ ಹಾಕುವ ದುಡ್ಡಿನಿಂದ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸಿ ಕೊಡುತ್ತಾರೆ ಈ ರೀತಿಯಾಗಿ ದೀಪಾವಳಿ ಆಚರಣೆ ಮಾಡುತ್ತಾರೆ.
ಹಕ್ಕಿಗಳ ಮೇಲಿರುವ ಈ ಗ್ರಾಮದ ಜನರ ಕಾಳಜಿಗೆ ಮುಚ್ಚುಗೆ ಸಲ್ಲಿಸಲೇ ಬೇಕು…
ಇದನ್ನೂ ಓದಿ: Hyderabad ನಲ್ಲಿ ಭಾರಿ ಅಗ್ನಿ ಅವಘಡ: 6 ಮಂದಿ ಸಜೀವ ದಹನ, ಮೂವರ ಸ್ಥಿತಿ ಗಂಭೀರ