Advertisement

ಕಾರ್ ನ ಬ್ರೇಕ್ ವೈಫಲ್ಯ: ಬುರಾರಿ ಮೇಲ್ಸೇತುವೆಯಲ್ಲಿ ಪರಸ್ಪರ ಢಿಕ್ಕಿಯಾದ ಏಳು ವಾಹನಗಳು!

10:42 AM Dec 06, 2020 | keerthan |

ಹೊಸದಿಲ್ಲಿ: ಕಾರೊಂದರ ಬ್ರೇಕ್ ವೈಫಲ್ಯವಾದ ಪರಿಣಾಮ ಏಳು ವಾಹನಗಳು ಪರಸ್ಪರ ಢಿಕ್ಕಿಹೊಡೆದು ಕೊಂಡ ಘಟನೆ ದಿಲ್ಲಿಯ ಬುರಾರಿ ಮೇಲ್ಸೇತುವೆಯಲ್ಲಿ ನಡೆದಿದೆ.

Advertisement

ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಬುರಾರಿ ಫ್ಲೈ ಓವರ್ ನಲ್ಲಿ ವೇಗದಿಂದ ಬರುತ್ತಿದ್ದ ಕಾರೊಂದರ ಬ್ರೇಕ್ ವೈಫಲ್ಯವಾಗಿ ಅದು ಎದುರಿದ್ದ ವಾಹನಕ್ಕೆ ಢಿಕ್ಕಿಯಾಗಿದೆ. ಹೀಗೆ ಪರಸ್ಪರ ಏಳು ವಾಹನಗಳು ಢಿಕ್ಕಿಯಾಗಿದೆ. ಅದರಲ್ಲಿ ಒಂದು ಕಾರು ಫ್ಲೈ ಓವರ್ ನ ಡಿವೈಡರ್ ನ ಮೇಲೆ ಚಲಿಸಿ ನಿಂತಿದೆ.

ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಪೊಲೀಸರ ಮೇಲೆ ಡ್ರಾಗರ್ ನಿಂದ ಹಲ್ಲೆ: ತುಮಕೂರು ಬಳಿ ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಗುಂಡು

Advertisement

ಸಂಜೆಯ ವೇಳೆ ಈ ಅಪಘಾತ ನಡೆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ಗಂಟೆಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next