ವಾಷಿಂಗ್ಟನ್: ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಭಾರತದ ಸಹೋದ್ಯೋಗಿಗಳೊಂದಿಗೆ ಮಾತನಾಡಬೇಕು ಎಂದು ಭಾರತ ಮೂಲದ ಅಮೆರಿಕನ್ ಕಾಂಗ್ರೆಸ್ ನ ಪ್ರಮಿಲಾ ಜಯಪಾಲ್ ಅವರನ್ನು ಒಳಗೊಂಡಂತೆ ಒಟ್ಟು 7 ಮಂದಿ ಪ್ರಭಾವಿ ಸಂಸದರ ಗುಂಪೊಂದು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತಾದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ, ಇದು ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು, ಈ ಹೇಳಿಕೆಯು ಅನಪೇಕ್ಷಿತ ಹಾಗೂ ಅನಗತ್ಯವಾದದ್ದು ಎಂದಿದೆ.
ಇದನ್ನೂ ಓದಿ:ರಾತ್ರಿ ಕರ್ಫ್ಯೂನಿರ್ಧಾರ ಮಾಡಿದ್ದು ಆ ಸಚಿವ, ಅವರಿಗೇನಾದರೂ ಪರಿಜ್ಞಾನ ಇದೆಯೇ? ಡಿಕೆಶಿ ತರಾಟೆ
ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕುರಿತಾಗಿ ನಾವು ಅನವಶ್ಯಕವಾದ ಹೇಳಿಕೆಗಳನ್ನು ನೋಡುತ್ತಿದ್ದೇವೆ. ಪ್ರಜಾಪ್ರಭುತ್ವ ರಾಷ್ಟ್ರವೊಂದರ ಆತಂರಿಕ ವಿಚಾರದ ಕುರಿತಾದ ಈ ವಿಧದ ಹೇಳಿಕೆಗಳು ಅನಗತ್ಯವಾದವುಗಳು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀ ವಾಸ್ತವ್ ಹೇಳಿದ್ದರು.
ಇದು ಪಂಜಾಬ್ ಗೆ ಸಂಬಂಧಿಸಿರುವ ಸಿಖ್ ಅಮೆರಿಕನ್ನರ ಸಮಸ್ಯೆಯಾಗಿದೆ, ಇಷ್ಟೇ ಅಲ್ಲದೇ ಭಾರತದ ವಿವಿಧ ರಾಜ್ಯಗಳಿಗೆ ಸೇರಿದ ಭಾರತೀಯ ಅಮೆರಿಕನ್ನರ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಸಂಸದರು ಪೊಂಪಿಯೊಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:838 ಕೋಟಿ ಹಗರಣ: ಸಿಐಡಿ ತನಿಖೆಗೆ ಆಗ್ರಹ
ಅಮೆರಿಕಾದಲ್ಲಿರುವ ಹಲವಾರು ಭಾರತೀಯರು ಪಂಜಾಬ್ ನಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಹೊಂದಿದ್ದಾರೆ. ಮತ್ತು ಅಲ್ಲಿ ತಮ್ಮ ಪೂರ್ವಾರ್ಜಿತ ಆಸ್ಥಿಯನ್ನು ಹೊಂದಿದ್ದಾರೆ. ಹೀಗಾಗಿ ಪಂಜಾಬ್ ನಲ್ಲಿ ಇರುವ ತಮ್ಮ ಕುಟುಂಬಸ್ಥರ ಕ್ಷೇಮದ ಕುರಿತಾಗಿ ಯೋಚಿಸುತ್ತಿದ್ದಾರೆ. ಈ ಚಳುವಳಿಯು ಅಮೇರಿಕಾದಲ್ಲಿರುವ ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.