Advertisement

7 ಸಾವಿರ ರೂ. ಒಳಗಿನ ಬೆಸ್ಟ್‌ ಮೊಬೈಲ್‌ಗ‌ಳು, ನಿಮ್ಮ ಖರೀದಿಗೆ ಇಲ್ಲಿದೆ ಗೈಡ್‌

10:02 AM Nov 04, 2019 | sudhir |

ಪ್ರತಿಯೊಬ್ಬ ಗ್ರಾಹಕನ ಉದ್ದೇಶ ಕಡಿಮೆ ಬೆಲೆಯಲ್ಲಿ ಉತ್ತಮ ಗುಣ್ಣಮಟ್ಟದ ಉತ್ಪನ್ನಗಳನ್ನು ಅಥವಾ ವಸ್ತುಗಳನ್ನು ಖರೀದಿ. ಇಷ್ಟಪಟ್ಟ ವಸ್ತು ಅಗ್ಗದ ಬೆಲೆಯಲ್ಲಿ ನಮ್ಮ ಕೈ ಸೇರಿದ್ದಾರೆ ಸಾಕಪ್ಪಾ ಎಂದಿರುತ್ತದೆ. ಈ ಪಟ್ಟಿಯಲ್ಲಿ ಮೊಬೈಲ್‌ ಪ್ರಮುಖ ವಸ್ತುವಾಗಿದ್ದು, ಫೋನ್‌ ಖರೀದಿಸುವ ಪ್ರತಿಯೊಬ್ಬ ಗ್ರಾಹಕನೂ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್‌ನ್ನು ಕೊಳ್ಳ ಬಯಸುತ್ತಾನೆ. ಈ ಹಿನ್ನೆಲೆಯಲ್ಲಿ 7 ಸಾವಿರ ರೂ. ಒಳಗಿನ ಆಕರ್ಷಕ ಮೊಬೈಲ್‌ಗ‌ಳ ಮಾಹಿತಿ ಇಲ್ಲಿದೆ.

Advertisement

ಶಿಯೋಮಿ ರೆಡ್ಮಿ 8 ಎ
ಶಿಯೋಮಿ ‘ರೆಡ್ಮಿ 8 ಎ’ ಸ್ಮಾರ್ಟ್‌ಫೋನ್‌ ಆಕರ್ಷಕವಾಗಿದ್ದು, ಇದರಲ್ಲಿ ವಾಟರ್‌ಡ್ರಾಪ್‌-ಶೈಲಿಯ ಡಿಸ್‌ಪ್ಲೇ ನೋಚ್‌ ಇದೆ. ರೆಡ್ಮಿ 8 ಎ 720ಪಿ ರೆಸಲ್ಯೂಶನ್ನೊಂದಿಗೆ 6.22 ಡಿಸ್‌ಪ್ಲೇ, ವೀಡಿಯೊ ಪ್ಲೇಬ್ಯಾಕ್‌ ಮತ್ತು ಗೊರಿÇÉಾ ಗ್ಲಾಸ್‌ 5 ಅನ್ನು ಅಳವಡಿಸಿಲಾಗಿದೆ. ಜತೆಗೆ 5,000 ಎಂಎಹೆಚ್‌ ಬ್ಯಾಟರಿ ಇದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ಕೇವಲ 6,499 ರೂ.ಗಳು.

“ಇನ್ಫಿನಿಕ್ಸ್‌ ಹಾಟ್‌ 8′
ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಪೈಕಿ “ಇನ್ಫಿನಿಕ್ಸ್‌ ಹಾಟ್‌ 8′ ಕೂಡಾ ಒಂದಾಗಿದ್ದು, ಪ್ರಸ್ತುತ ಟ್ರೆಂಡಿಂಗ್‌ ಅಲ್ಲಿರುವ 3 ಕೆಮರಾಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ. ಜತೆಗೆ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ನ್ನು ಇದ್ದು, 4 ಜಿಬಿ ರ್ಯಾಮ್‌, 64 ಜಿಬಿ ಸ್ಟೋರೇಜ್‌ ಹಾಗೂ 5000ಎಂಎಹೆಚ್‌ ಬ್ಯಾಟರಿ ಸಾಮರ್ಥ್ಯವಿದೆ. ಆಕರ್ಷಕ ಫೀಚರ್ಗಳಿರುವ ಈ ಮೊಬೈಲ್‌ನ ಬೆಲೆ 6,999 ರೂ.

ಶಿಯೋಮಿ ರೆಡ್ಮಿ 7ಎ
ಶಿಯೋಮಿಯ ಇನ್ನೊಂದು ಫೋನ್‌ ರೆಡ್ಮಿ 7ಎ. 5.45 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 16 ಜಿಬಿ ಸ್ಟೋರೇಜ್‌ ಸಾಮರ್ಥ್ಯವಿದ್ದು, 2ಜಿಬಿ ರ್ಯಾಮ್‌ ಇದೆ. ಜತೆಗೆ ಇದರಲ್ಲಿ 4000ಎಂಎಹೆಚ್‌ ಬ್ಯಾಟರಿ ಇದೆ. 12 ಮೆಗಾಫಿಕ್ಸೆಲ್‌ ಬ್ಯಾಕ್‌ ಕೆಮರಾ ಹಾಗೂ 5 ಫಿಕ್ಸೆಲ್‌ ಫ್ರಂಟ್‌ ಕೆಮರಾ ಇದೆ. ಇಷ್ಟೆಲ್ಲಾ ವಿಶೇಷ ಗುಣಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ಬೆಲೆ 5,265 ರೂ.

ಇನ್ಫಿನಿಕ್ಸ್‌ ಸ್ಮಾರ್ಟ್‌ಫೋನ್‌ 3 ಪ್ಲಸ್‌
ಈ ಕಂಪನಿಯು ತನ್ನ ಕೆಲವು ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿದ್ದು, ಇದೀಗ ಮತ್ತೆ ಭಾರತೀಯ ಮಾರುಕಟ್ಟೆಗೆ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ಬಿಟ್ಟಿದೆ. 720/1520 ಪಿಕ್ಸಲ್‌ ರೆಸಲ್ಯೂಶನ್‌ ಇದ್ದು, 6.21 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಜತೆಗೆ 2ಜಿಬಿ ರ್ಯಾಮ್‌ ಇದ್ದು, 32ಜಿಬಿ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. 3500ಎಂಎಹೆಚ್‌ ಬ್ಯಾಟರಿ ಕೆಪಾಸಿಟಿ ಇರುವ ಈ ಫೋನ್‌ಗೆ 6,999 ರೂ. ದರವಿದೆ.

Advertisement

ರಿಯೇಲ್‌ ಮಿ ಸಿ2
ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳ ಪೈಕಿ ವಿಶೇಷತೆಗಳಿಂದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕಂಡುಕೊಂಡ ರಿಯೇಲ್‌ಮಿ ಸಿ2 ಡಿಸ್‌ಪ್ಲೇ 6.10 ಇಂಚಿನದ್ದಾಗಿದ್ದು 4000 ಎಂಎಹೆಚ್‌ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಜತೆಗೆ ಇದರಲ್ಲಿ 2 ಜಿಬಿ ರ್ಯಾಮ್‌ ಹಾಗೂ 16 ಜಿಬಿ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಈ ಫೋನ್‌ 6,099 ರೂ. ಗೆ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next