Advertisement

ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಟ್ರಕ್‌: 7 ಮಂದಿ ಮೃತ್ಯು

11:26 AM Mar 04, 2023 | Team Udayavani |

ಚಂಡೀಗಢ: ಬಸ್‌ ಗೆ ಟ್ರೇಲರ್‌ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ಶುಕ್ರವಾರ ( ಮಾ. 3 ರಂದು) ನಡೆದಿದೆ.

Advertisement

ಶಹಜಾದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಯಮುನಾ ನಗರ-ಪಂಚಕುಲ ಹೆದ್ದಾರಿಯ ಅಂಬಾಲಾದಲ್ಲಿ ಈ ಘಟನೆ ನಡೆದಿದ್ದು,ಸರಕುಗಳನ್ನು ತುಂಬಿಕೊಂಡಿದ್ದ ಟ್ರೇಲರ್‌ ಟ್ರಕ್‌ ಮುಂದೆ ಹೋಗುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಸಂಪೂರ್ಣ ಹಾನಿಯಾಗಿದ್ದು, ಅಪಘಾತದ ತೀವ್ರತೆಗೆ ರಾಂಗ್‌ ಸೈಡ್‌ ಗೆ ಟ್ರಕ್‌ ಹೋಗಿ ಉರುಳಿದೆ.

ಈ ಭೀಕರ ಅಪಘಾತದಲ್ಲಿ 7 ಮಂದಿ ಮೃತಪಟ್ಟು, 4 ಗಾಯಗೊಂಡಿದ್ದಾರೆ. ಟ್ರಕ್‌ ಚಾಲಕ ನಿದ್ರಾಸ್ಥಿತಿಯಲ್ಲಿ ಟ್ರಕ್‌ ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಎರಡೂ ವಾಹನದ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next