Advertisement

ಈ ತಿಂಗಳು 7 ಹೊಸ ಮೊಬೈಲ್‌ಗ‌ಳು ಮಾರುಕಟ್ಟೆಗೆ

11:25 AM Apr 14, 2021 | Team Udayavani |

ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆ ಇದ್ದರೂ, ಭಾರತದಲ್ಲಿ ಸ್ಮಾರ್ಟ್‌ ಫೋನ್‌ ಮಾರಾಟಕ್ಕೆ ಅದರಿಂದ ಯಾವುದೇ ಅಡಚಣೆ ಉಂಟಾದಂತೆ ಕಾಣುತ್ತಿಲ್ಲ. ಹೆಚ್ಚೆಂದರೆ ಮೊಬೈಲ್‌ ಕಂಪೆನಿಗಳು ಕಳೆದ ಒಂದು ವರ್ಷದ ಅವಧಿಯಲ್ಲಿ  ಬಿಡುಗಡೆಗೆ ವೇದಿಕೆಯ ಕಾರ್ಯ ಕ್ರಮಗಳನ್ನು ನಡೆಸುತ್ತಿಲ್ಲ. ವರ್ಚುವಲ್‌ ಈವೆಂಟ್‌ ಮೂಲಕ ಬಿಡುಗಡೆ ಮಾಡುತ್ತಿವೆ.

Advertisement

ಈ ಏಪ್ರಿಲ್‌ ತಿಂಗಳಲ್ಲೇ ಶಿಯೋಮಿ, ಸ್ಯಾಮ್‌ಸಂಗ್‌, ರಿಯಲ್‌ ಮಿ, ಒಪ್ಪೋ ಕಂಪೆನಿಗಳು ಒಟ್ಟು 7 ಸ್ಮಾರ್ಟ್‌ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿವೆ. ಶಿಯೋಮಿ ಮಿ11 ಅಲ್ಟ್ರಾ ಏಪ್ರಿಲ್‌ 23ರಂದು ಶಿಯೋಮಿ ಕಂಪೆನಿ ಮಿ11 ಅಲ್ಟ್ರಾ ಫೋನನ್ನು ಬಿಡುಗಡೆ ಮಾಡುತ್ತಿದೆ. ಈ ಫೋನು ಈಗಾಗಲೇ ವಿಶ್ವ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಇದರ ದರ 1.199 ಯೂರೋಸ್‌ (ಅಂದಾಜು, 1 ಲಕ್ಷ ರೂ.) ಇದು 6.81 ಇಂಚಿನ ಡಬ್ಲೂ ಕ್ಯೂ ಎಚ್‌ಡಿ ಪ್ಲಸ್‌ ಡಿಸ್‌ ಪ್ಲೇ ಹೊಂದಿದೆ. ಸ್ನಾಪ್‌ ಡ್ರಾಗನ್‌ 888 ಪ್ರೊಸೆಸರ್‌ ಹೊಂದಿದೆ. ಹಿಂಬದಿ ಕ್ಯಾಮರಾ ಸೆಟಪ್‌ನಲ್ಲಿ 1.1 ಇಂಚಿನ ಅಮೋಲೆಡ್‌ ಪರದೆ ಹೊಂದಿದೆ. ಇದು ನೋಟಿಫಿಕೇಷನ್‌ ಗಳನ್ನೂ ಪ್ರದರ್ಶಿಸುತ್ತದೆ. 5000 ಎಂಎಎಚ್‌ ಬ್ಯಾಟರಿಯಿದೆ. ಸಂಪೂರ್ಣ ಜಲ ನಿರೋಧಕ ರಕ್ಷಣೆ ಹೊಂದಿದೆ.

ಒಪ್ಪೋ ಎಫ್‌ 19 ಏಪ್ರಿಲ್‌ 6 ರಂದು ಬಿಡುಗಡೆ. ಇದು ಕಂಪೆನಿಯ ಅತಿ ತೆಳು ಮೊಬೈಲ್‌ ಅಂತೆ. 5000 ಎಂಎಎಚ್‌ ಬ್ಯಾಟರಿ. ಎಫ್‌ಎಚ್‌ ಡಿ ಪ್ಲಸ್‌ ಅಮೋಲೆಡ್‌ ಪರದೆ. 33 ವ್ಯಾಟ್‌ ಚಾರ್ಜರ್‌ ಇದೆ. ಬೆಲೆ ಅಂ ದಾಜು 20 ಸಾವಿರ ರೂ. ಇರಲಿದೆ. ಸ್ಯಾಮ್‌ ಸಂಗ್‌ ಗೆಲಾಕ್ಸಿ ಎಫ್‌12 ಏಪ್ರಿಲ್‌ 5 ರಂದು ಬಿಡುಗಡೆ. ಇದು ಬಜೆಟ್‌ ಸ್ಮಾರ್ಟ್‌ ಫೋನ್‌. 48 ಮೆ.ಪಿ. ಕ್ಯಾಮರಾ, 6.5 ಇಂಚಿನ ಎಚ್‌ಡಿ ಪ್ಲಸ್‌ ಡಿಸ್‌ ಪ್ಲೇ ಇರಲಿದೆ. 6000 ಎಂಎಎಚ್‌ ಬ್ಯಾಟರಿ, ಎಕ್ಸಿನಾಸ್ 850 ಪ್ರೊಸೆಸರ್‌ ಹೊಂದಿದೆ.

ಸ್ಯಾಮ್‌ ಸಂಗ್‌ ಗೆಲಾಕ್ಸಿ ಎಫ್‌ ಓ2ಎಸ್
ಇದು ಏಪ್ರಿಲ್‌ 5ರಂದೇ ಬಿಡುಗಡೆಯಾಗಲಿದ್ದು, ಇನ್ನೊಂದು ಬಜೆಟ್‌ ಫೋನ್‌ ಆಗಿದೆ. 6.5 ಎಚ್‌ ಡಿ ಪ್ಲಸ್‌ ಡಿಸ್‌ ಪ್ಲೇ, 5000 ಎಂಎಎಚ್‌ ಬ್ಯಾಟರಿ, 13 ಮೆ.ಪಿ. ಮುಖ್ಯ ಸೆನ್ಸರ್‌ ಉಳ್ಳ ತ್ರಿವಳಿ ಕ್ಯಾಮರಾ ಇರಲಿದೆ.

Advertisement

ರಿಯಲ್‌ಮಿ ಸಿ20
ಏಪ್ರಿಲ್‌ 8ರಂದು ಬಿಡುಗಡೆ. ಇದರಲ್ಲಿ ಮೀಡಿಯಾಟೆಕ್‌ ಹೀಲಿಯಾ ಜಿ35 ಪ್ರೊಸೆಸರ್‌ 2ಜಿಬಿ ರ್ಯಾಮ್‌ 6.5 ಇಂಚಿನ ಎಚ್‌ ಡಿ ಪ್ಲಸ್‌ ಪರದೆ, 8 ಮೆ.ಪಿ.ಕ್ಯಾಮರಾ ಇರಲಿದೆ.  ಸ್ಪೆಸಿಫಿಕೇಷನ್‌ಗಳನ್ನು ಗಮನಿಸಿದಾಗ ಇದು 7 ಸಾವಿರ ರೂ. ಒಳಗಿನ ದರದಲ್ಲಿ ದೊರಕಬಹುದು.

ರಿಯಲ್‌ಮಿ ಸಿ21
ಏಪ್ರಿಲ್‌ 8ರಂದು ಬಿಡುಗಡೆ. 13 ಮೆ.ಪಿ. ಮುಖ್ಯ ಕ್ಯಾಮರಾ, 5000 ಎಂಎಎಚ್‌ ಬ್ಯಾಟರಿ, 10 ವ್ಯಾಟ್‌ ವೇಗದ ಚಾರ್ಜರ್‌ ಇರಲಿದೆ. 10 ಸಾವಿರದೊಳಗಿನ ದರದಲ್ಲಿ ದೊರಕಬಹುದು.

ರಿಯಲ್‌ಮಿ ಸಿ 25
ಇದು ಸಹ ಏಪ್ರಿಲ್‌ 8ರಂದೇ ಬಿಡುಗಡೆಯಾಗಲಿದೆ. 6.5 ಇಂಚಿನ ಎಚ್‌ಡಿ ಪ್ಲಸ್‌ ಪರದೆ. ಮೀಡಿಯಾಟೆಕ್‌ ಹೀಲಿಯೋ ಜಿ70 ಪ್ರೊಸೆಸರ್‌ . 48 ಮೆ.ಪಿ. ಮುಖ್ಯ ಕ್ಯಾಮರಾ, 5000 ಎಂಎಎಚ್‌ ಬ್ಯಾಟರಿ ಇರಲಿದೆ. 10 ರಿಂದ 12 ಸಾವಿರ ರೂ. ಬೆಲೆಗೆ ದೊರಕುವ ಸಾಧ್ಯತೆ ಇದೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next