Advertisement

ಮಂಗಳೂರಿನ 10 ತಿಂಗಳ ಮಗುವಿಗೆ ಕೋವಿಡ್-19 ಸೋಂಕು: ರಾಜ್ಯದಲ್ಲಿ 62ಕ್ಕೇರಿದ ಸೋಂಕಿತರ ಸಂಖ್ಯೆ

09:41 AM Mar 28, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಇಂದು ಏಳು ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸಂಖ್ಯೆ 62ಕ್ಕೇರಿದೆ. ಕೇರಳದಿಂದ ಆಗಮಿಸಿದ್ದ ಹತ್ತು ತಿಂಗಳ ಮಗುವಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

Advertisement

ಯಾವುದೇ ಸೋಂಕು ಬಾಧಿತ ದೇಶಕ್ಕೆ ಪ್ರಯಾಣ ಮಾಡಿದ ಇತಿಹಾಸವಿರದ ದಕ್ಷಿಣ ಕನ್ನಡದ ಹತ್ತು ತಿಂಗಳ ಮಗುವಿಗೆ ಸೋಂಕು ಪತ್ತೆಯಾಗಿದೆ. ಮಗುವಿನ ಹೆತ್ತವರು ಇತ್ತೀಚೆಗೆ ಕೇರಳಕ್ಕೆ ಹೋಗಿ ಬಂದಿದ್ದರು. ಮಗುವಿನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಆರು ಜನರ ಮೇಲೆ ನಿಗಾ ಇಡಲಾಗಿದೆ.

ರಾಜ್ಯದ 57ನೇ ಪ್ರಕರಣ 20 ವರ್ಷದ ಬೆಂಗಳೂರು ನಿವಾಸಿಯಾಗಿದ್ದು, ಮಾರ್ಚ್ 15ರಂದು ಶ್ರೀಲಂಕಾದ ಕೊಲಂಬೋದಿಂದ ಬೆಂಗಳೂರಿಗೆ ಆಗಮಿಸಿದ್ದರು.

58ನೇ ಪ್ರಕರಣದ ಸೋಂಕಿತ ಮಹಿಳೆ ಮಾರ್ಚ್ 18ರಂದು ಲಂಡನ್ ನಿಂದ ಆಗಮಿಸಿದ್ದರು. 25 ವರ್ಷದ ಈಕೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

25ನೇ ಪ್ರಕರಣದ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ 33 ವರ್ಷದ ಬೆಂಗಳೂರಿನ ಮಹಿಳೆಗೆ ಸೋಂಕು ದೃಢವಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

60 ವರ್ಷದ ತುಮಕೂರಿನ ವ್ಯಕ್ತಿಗೆ ಇಂದು ಮುಂಜಾನೆ ಸೋಂಕು ದೃಢವಾಗಿತ್ತು. ಆದರೆ ಇಂದು ಬೆಳಗ್ಗೆ 10.45ರ ಸುಮಾರಿಗೆ ವ್ಯಕ್ತಿ ಸಾವನ್ನಪ್ಪಿದ್ದಾರೆ.

25ನೇ ಪ್ರಕರಣದ ವ್ಯಕ್ತಿಯ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ 33 ವರ್ಷದ ಮತ್ತೋರ್ವ ಮಹಿಳೆಗೆ ಸೋಂಕು ದೃಢವಾಗಿದೆ. 33 ವರ್ಷದ ಮಹಿಳೆಯನ್ನು ಐಸಲೋಟ್ ಮಾಡಲಾಗಿದೆ.

ದುಬೈನಿಂದ ಆಗಮಿಸಿದ್ದ ಉತ್ತರ ಕನ್ನಡ 22 ವರ್ಷದ ಯುವಕನಿಗೆ ಸೋಂಕು ತಗಲಿರುವುದು ದೃಢವಾಗಿದೆ.

ರಾಜ್ಯದಲ್ಲಿ ಒಟ್ಟು 62 ಪ್ರಕರಣ ದೃಢವಾಗಿದ್ದು ಅದರಲ್ಲಿ ಐವರು ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next