Advertisement
ಮಾನದಂಡವೇನು?ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕ್ರೀಡಾ ಸಾಧಕರಿಗೆ ಕೊಡಮಾಡುವ ಅತ್ಯುನ್ನತ ಗೌರವ, ಕಳೆದ 4 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕೂಟಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇರೆಗೆ ಕೇಂದ್ರ ಸರ್ಕಾರದ ತಜ್ಞರ ಸಮಿತಿ ಪ್ರಶಸ್ತಿಗೆ ಅರ್ಹ ಕ್ರೀಡಾಪಟುವನ್ನು ಆಯ್ಕೆ ಮಾಡಲಿದೆ. ಅರ್ಜುನ ಪ್ರಶಸ್ತಿಯ ಆಯ್ಕೆಗೂ ನಾಲ್ಕು ವರ್ಷಗಳ ಹಿಂದಿನ ಕ್ರೀಡಾ ಸಾಧನೆ ಪರಿಗಣನೆಯಾಗುತ್ತದೆ, ಜತೆಗೆ ನಾಯಕತ್ವ ಕೌಶಲ್ಯ, ಶಿಸ್ತು ಹಾಗೂ ಕ್ರೀಡಾ ಸ್ಫೂರ್ತಿಯನ್ನೂ ಪರಿಗಣಿಸಲಾಗುತ್ತದೆ.
● ಬಾಕ್ಸಿಂಗ್: ಮನೀಷ್ ಕೌಶಿಕ್, ಲೌಲೀನಾ, ಸಿಮ್ರಾನ್‌ಜಿತ್
● ಅಥ್ಲೆಟಿಕ್ಸ್: ಅರ್ಪಿಂದರ್, ದ್ಯುತಿ ಚಂದ್
● ಶೂಟಿಂಗ್: ಸೌರಭ್ ಚೌಧರಿ, ಮನು ಭಾಕರ್, ಅಭಿಷೇಕ್ ವರ್ಮ
● ಲಾನ್ ಟೆನಿಸ್: ದಿವಿಜ್ ಶರಣ್, ಅಂಕಿತಾ ರೈನಾ ಖೇಲ್ ರತ್ನಕ್ಕೆ ಶಿಫಾರಸುಗೊಂಡವರ ಪಟ್ಟಿ
Related Articles
Advertisement
ನೀರಜ್ ಚೋಪ್ರಾ (ಜಾವೆಲಿನ್): ನೀರಜ್ ಚೋಪ್ರಾ ಭಾರತದ ಅಪ್ರತಿಮ ಜಾವೆಲಿನ್ ತಾರೆ. ಹಲವಾರು ಕೂಟಗಳಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದಾರೆ, ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಭರವಸೆಯಾಗಿದ್ದಾರೆ. 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ಅದೇ ವರ್ಷ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲೂ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದರು.
ವಿನೇಶ್ ಪೊಗಟ್ (ಕುಸ್ತಿ): ಹರ್ಯಾಣದ ವೀರ ವನಿತೆ, 48/50/53 ಕೆ.ಜಿ ವಿಭಾಗಗಳ ಕುಸ್ತಿ ಸ್ಪರ್ಧೆಯಲ್ಲಿ ಪ್ರಚಂಡ ಸಾಧಕಿ, 2018 ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 2019 ವಿಶ್ವ ಚಾಂಪಿಯನ್‌ಶಿಪ್‌ನ 53 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮಣಿಕಾ ಬಾತ್ರಾ (ಟಿಟಿ): ಟೇಬಲ್ ಟೆನಿಸ್ ನಕ್ಷತ್ರ ಮಣಿಕಾ ಬಾತ್ರಾ, 2018 ಕಾಮನ್ವೆಲ್ತ್ ಗೇಮ್ಸ್ ಕ್ರೀಡಾ ಕೂಟದ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ, ಅದೇ ಕೂಟದ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
ವಿಕಾಸ್ ಕೃಷ್ಣನ್ (ಬಾಕ್ಸಿಂಗ್): ಹರ್ಯಾಣದ ಪಂಚ್ ಮಾಸ್ಟರ್ ಬಾಕ್ಸರ್ ವಿಕಾಸ್ ಕೃಷ್ಣನ್ ಭಾರತದ ಹೆಮ್ಮೆ. 2018ರ ಕಾಮನ್ವೆಲ್ತ್ ಗೇಮ್ಸ್‌ನ ಮಿಡಲ್‌ವೇಟ್ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದರು. ಅದೇ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಬಾಕ್ಸಿಂಗ್ ಕೂಟದ ಮಿಡಲ್‌ವೇಟ್ ವಿಭಾಗದಲ್ಲಿ ಕಂಚು ಜಯಿಸಿದ್ದರು.
ಅಮಿತ್ ಪಾಂಗಲ್ (ಕುಸ್ತಿ): 2019ರಲ್ಲಿ ವಿಶ್ವ ಚಾಂಪಿಯನ್ ಶಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಅಮಿತ್ ಪಾಂಗಲ್ ಗೆದ್ದುಕೊಂಡಿದ್ದರು, ಅದೇ ವರ್ಷ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಫ್ಲೈವೇಟ್ ವಿಭಾಗದಲ್ಲಿ ಚಿನ್ನದ ಪದಕವನ್ನು ಅಮಿತ್ ಜಯಿಸಿದ್ದರು. 52 ಕೆ.ಜಿ ವಿಭಾಗದಲ್ಲಿ ಭವಿಷ್ಯದಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲಬಲ್ಲ ಸಾಮರ್ಥ್ಯ ಅಮಿತ್‌ರಲ್ಲಿ ಇದೆ.
ಅಂಜುಮ್ ಮೌದ್ಗಿಲ್: ಚಂಡೀಗಢದ 26 ವರ್ಷದ ಮಹಿಳಾ ಶೂಟರ್ ಅಂಜುಮ್ ಮೌದ್ಗಿಲ್ 2018 ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 10 ಮೀ. ಏರ್ ರೈಫಲ್ ಹಾಗೂ 10 ಮೀ. ಏರ್ ರೈಫಲ್ ತಂಡ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಪದಕ ಜಯಿಸಿದ್ದರು. 2018 ಕಾಮನ್ವೆಲ್ತ್ ಗೇಮ್ಸ್‌ನ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.