Advertisement

ಮನೆಯಲ್ಲೇ ಸಂಪಾದನೆ ಎಂದು ಯುವಕನಿಗೆ 7 ಲಕ್ಷ ರೂ. ವಂಚನೆ

10:29 AM Jul 30, 2023 | Team Udayavani |

ಬೆಂಗಳೂರು: ಯುವಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಸೈಬರ್‌ ಕಳ್ಳರು 6.9 ಲಕ್ಷ ರೂ. ವಂಚಿಸಿದ್ದಾರೆ.

Advertisement

ಜೆ.ಪಿ.ನಗರ ನಿವಾಸಿ ರವಿ (32) ವಂಚನೆ ಗೊಳಗಾದವರು.

ರವಿ ಅವರಿಗೆ ಇತ್ತೀಚೆಗೆ ವಾಟ್ಸ್‌ ಆ್ಯಪ್‌ ಸಂದೇಶ ಬಂದಿತ್ತು. ಮನೆಯಲ್ಲಿ ಕುಳಿತುಕೊಂಡು ದುಡ್ಡು ಸಂಪಾದಿಸಬಹುದು ಎಂದು ಸಂದೇಶದಲ್ಲಿ ಉಲ್ಲೇಖೀಸಿದ್ದರು. ಅದರಂತೆ ರವಿ ಲಿಂಕ್‌ ಕ್ಲಿಕ್‌ ಮಾಡಿದಾಗ ಟೆಲಿಗ್ರಾಂ ಐಡಿವೊಂದು ಬಂದಿತ್ತು. ಕೆಲ ವೊಂದು ಟಾಸ್ಕ್ ಅನ್ನು ಪೂರ್ಣಗೊಳಿಸಿದರೆ ಹಣ ಬರುತ್ತದೆ ಎಂದು ಹಂತ-ಹಂತವಾಗಿ 6.9 ಲಕ್ಷ ರೂ. ಅನ್ನು ಆನ್‌ಲೈನ್‌ ಮೂಲಕ ಹಾಕಿಸಿಕೊಂಡಿ ದ್ದರು. ನಂತರ ಸಂಪರ್ಕಕ್ಕೆ ಸಿಗದೇ ವಂಚಿಸಿ ದ್ದಾರೆ. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next