Advertisement
ಜಿಲ್ಲೆಯಲ್ಲಿ ಒಟ್ಟು 7 ಅಗ್ನಿ ಶಾಮಕ ಠಾಣೆಗಳಿದ್ದು, ಒಟ್ಟು 150 ಅಧಿಕಾರಿ ಮತ್ತು ಸಿಬಂದಿ ವರ್ಗದವರು ಇದ್ದಾರೆ. ಪ್ರತಿ ತಾಲೂಕಿಗೆ ಒಂದರಂತೆ ಅಗ್ನಿ ಶಾಮಕ ಠಾಣೆ ಇದ್ದು, ಮಂಗಳೂರು ನಗರದಲ್ಲಿ ಎರಡು (ಪಾಂಡೇಶ್ವರ ಮತ್ತು ಕದ್ರಿ) ಹಾಗೂ ಮೂಡಬಿದಿರೆಯಲ್ಲಿ ಒಂದು ಠಾಣೆ ಇದೆ.
Related Articles
Advertisement
ಮನೆ, ಕಟ್ಟಡ, ರಸ್ತೆ, ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಬಿದ್ದರೆ, ಅವುಗಳನ್ನು ಮೇಲೆತ್ತಿ ಜನರನ್ನು ರಕ್ಷಿಸಲು ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿವಿಧ ಅಗ್ನಿ ಶಾಮಕ ಠಾಣೆಗಳ ಅಧಿಕಾರಿಗಳಿಗೆ ಮತ್ತು ಸಿಬಂದಿಗೆ ಕಟ್ಟೆಚ್ಚ ರದಿಂದ ಇರುವಂತೆ ಹಾಗೂ ರಜಾ ದಿನಗಳ ಲ್ಲಿಯೂ ತುರ್ತು ಆವಶ್ಯಕತೆ ಇದ್ದರೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಎಲ್ಲ ಠಾಣೆಗಳಲ್ಲಿ ಸಾಕಷ್ಟು ಸಿಬಂದಿ ಇದ್ದರೂ, ತುರ್ತು ಸಂದರ್ಭಗಳಲ್ಲಿ ಅಗತ್ಯ ಬಿದ್ದರೆ ಅಕ್ಕ ಪಕ್ಕದ ಠಾಣೆಗಳ ಸಿಬಂದಿ ಜತೆ ಕೈಜೋಡಿಸಿ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ.
ಜನರೂ ಸಹಕಾರ ನೀಡುತ್ತಿದ್ದಾರೆಇಲಾಖೆಗೆ ಜನರು ಮತ್ತು ಪೊಲೀಸರು ಮಾಹಿತಿ ನೀಡುತ್ತಾರೆ. ಅನಾಹುತ ನಡೆಯುವ ಸ್ಥಳಕ್ಕೆ ತೆರಳುವ ಅಧಿಕಾರಿಗಳು ಸಂದರ್ಭದ ಮಹತ್ವವನ್ನು ಅರಿತು ಅಗತ್ಯ ಬಿದ್ದರೆ ಸ್ಥಳೀಯ ಜನರ ಮತ್ತು ಸಂಘ ಸಂಸ್ಥೆಗಳ ಹಾಗೂ ಪೊಲೀಸರ ಸಹಕಾರದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಏರಿಯಲ್ ಲ್ಯಾಡರ್ ಪ್ಲಾಟ್‌ಫೋರ್ಮ್
ಬಹು ಮಹಡಿ ಕಟ್ಟಡಗಳಲ್ಲಿ ಸಂಭವಿಸುವ ದುರಂತಗಳ ನಿರ್ವಹಣೆಗೆ ಸಂಬಂಧಿಸಿ ಏರಿಯಲ್ ಲ್ಯಾಡರ್ ಪ್ಲಾಟ್‌ಫೋರ್ಮ್ ಎಂಬ ಅತ್ಯಾಧುನಿಕ ಯಂತ್ರೋಪಕರಣವನ್ನು ಇಲಾಖೆ ಹೊಂದಿದೆ. ಇದರ ಮೂಲಕ 32 ಮೀಟರ್ ಎತ್ತರದಲ್ಲಿ ನಿಂತು ರಕ್ಷಣಾ ಕಾರ್ಯ ನಿರ್ವಹಿಸಲು
ಸಾಧ್ಯವಾಗುತ್ತದೆ ತುರ್ತು ಸಂದರ್ಭಗಳಲ್ಲಿ ಈ ನಂಬರ್‌ಗೆ ಸಂಪರ್ಕಿಸಿರಿ
1. ಪಾಂಡೇಶ್ವರ ಅಗ್ನಿ ಶಾಮಕ ಠಾಣೆ: 08242423333
2.ಕದ್ರಿ ಅಗ್ನಿ ಶಾಮಕ ಠಾಣೆ: 08242211085/ 2213192
3. ಮೂಡಬಿದಿರೆ ಅಗ್ನಿ ಶಾಮಕ ಠಾಣೆ: 08258237021
4. ಬಂಟ್ವಾಳ ಅಗ್ನಿ ಶಾಮಕ ಠಾಣೆ: 08255230101
5.ಬೆಳ್ತಂಗಡಿ ಅಗ್ನಿ ಶಾಮಕ ಠಾಣೆ: 08256232621
6. ಪುತ್ತೂರು ಅಗ್ನಿ ಶಾಮಕ ಠಾಣೆ: 08251232101
7.ಸುಳ್ಯ ಅಗ್ನಿ ಶಾಮಕ ಠಾಣೆ: 08257230900 ಎಚ್ಚರಿಕೆ ಸಂದೇಶ
ಮೂರು ತಿಂಗಳಿಂದ ಚಂಡ ಮಾರುತದ ಬಗ್ಗೆ ಜಿಲ್ಲಾಡಳಿತದಿಂದ ಆಗಿಂದಾಗ್ಗೆ ಎಚ್ಚರಿಕೆ ಸಂದೇಶ ಬರುತ್ತಿದೆ. ಅಂತಹ ಮಾಹಿತಿ ಬಂದಾಗ ವಿಶೇಷವಾಗಿ ಉಳ್ಳಾಲ, ಸೋಮೇಶ್ವರ ಬೀಚ್‌ಗಳಿಗೆ ಠಾಣೆಯ ಆಧಿಕಾರಿಗಳನ್ನು ಮತ್ತು ಸಿಬಂದಿಯನ್ನು ವಾಹನದೊಂದಿಗೆ ಕಳುಹಿಸಿ ಕೊಡಲಾಗುತ್ತಿದೆ. ಈಗಾಗಲೇ ಹಲವು ಬಾರಿ ನಮ್ಮ ಅಧಿಕಾರಿ ಮತ್ತು ಸಿಬಂದಿ ಅಲ್ಲಿಗೆ ಹೋಗಿ ಮುಂಜಾಗ್ರತಾ ಕ್ರಮ ಕೈಗೊಂಡು ಬಂದಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಒಂದು ಸಭೆ ನಡೆಸಿದೆ. ಸೋಮವಾರ ಇನ್ನೊಂದು ಸಭೆ ನಡೆಯಲಿದೆ.
– ಶಿವ ಶಂಕರ ಟಿ.ಎನ್.
ಮುಖ್ಯ ಅಗ್ನಿ ಶಾಮಕ ಅಧಿಕಾರಿ,
ಮಂಗಳೂರು ವಿಭಾಗ ಹಿಲರಿ ಕ್ರಾಸ್ತಾ