Advertisement
ವೈರಿಂಗ್ ಇದೆ, ವಿದ್ಯುತ್ತಿಲ್ಲಬಡತನದ ಕಾರಣ 7 ಕುಟುಂಬಗಳ ಸದಸ್ಯರೂ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹೆಚ್ಚಿನವರು ರಸ್ತೆ ಸರಿಯಿಲ್ಲದೆ ಅರ್ಧದಲ್ಲೆ ಶಾಲೆ ಬಿಟ್ಟವರು. ಶೌಚಾಲಯ ಇರುವುದು ಒಂದು ಮನೆಯಲ್ಲಿ ಮಾತ್ರ. ವಿದ್ಯುತ್ ಸಂಪರ್ಕವೂ ಇಲ್ಲ. ಎರಡು ವರ್ಷಗಳ ಹಿಂದೆ ರಾಜೀವ್ ಗಾಂಧಿ ವಿದ್ಯುತ್ ಯೋಜನೆಯಡಿ 40 ಕಂಬ ನೆಟ್ಟು ವಿದ್ಯುತ್ ತಂತಿ ಎಳೆದಿದ್ದರು. ಮನೆಗೆ ವೈರಿಂಗ್ ಮಾಡಿಸಿದ್ದರು. ಒಂದು ಬಾರಿ ಕರೆಂಟ್ ಬಂತು. ಮತ್ತೆಂದೂ ಉರಿಯಲಿಲ್ಲ. ತಂತಿ ಮತ್ತು ಕಂಬಗಳು ನೆಲಕ್ಕೆ ಉರುಳಿವೆ.
ಮಳೆಗಾಲಕ್ಕೆ ಬೇಕಾದ ಆಹಾರ ವಸ್ತುಗಳನ್ನು ಮೊದಲೇ ಸಂಗ್ರಹಿಸಬೇಕು. ಅನಾರೋಗ್ಯಕ್ಕೆ ತುತ್ತಾದಾಗ ಸುಳ್ಯಕ್ಕೆ ನಡೆದು ಬಂದು ಔಷಧ ಒಯ್ಯುತ್ತಾರೆ. ಕಾಯಿಲೆ ತೀವ್ರವಾಗಿದ್ದರೆ ಕಂಬಳಿಯಲ್ಲಿ ಹೊತ್ತು ತರುತ್ತಾರೆ. ಸೌಲಭ್ಯಗಳಿಗೆ ಆಗ್ರಹಿಸಿ ಎರಡು ವರ್ಷಗಳ ಹಿಂದೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದಾಗ ತಹಶೀಲ್ದಾರ್ ಗ್ರಾಮಸ್ಥರ ಮನವೊಲಿಸಿ, ರಸ್ತೆ ನಿರ್ಮಿಸಲು ಅಡ್ಡಿಪಡಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
Related Articles
ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಅಕ್ಕಿ, ಮೊಟ್ಟೆ, ಹೆಸರುಕಾಳು, ಅಲಸಂಡೆ ಬೀಜ, ಕಡಲೆ ಸಿಗುತ್ತವೆ. ಆದರೆ, ಆರೋಗ್ಯ ತಪಾಸಣೆ ಮಾಡುತ್ತಿಲ್ಲ. 13 ವರ್ಷಗಳ ಹಿಂದೆ ಮಂಗನ ಕಾಯಿಲೆ ಕಾಡಿತ್ತು. ಕ್ಯಾನ್ಸರ್‌ಪೀಡಿತೆ ಜಾನಕಿ ಎಂಬ ಯುವತಿ, ಪಕ್ಷವಾತಕ್ಕೆ ತುತ್ತಾಗಿದ್ದ ವ್ಯಕ್ತಿಯೊಬ್ಬರು ಸೂಕ್ತ ಆರೈಕೆಯಿಲ್ಲದೆ ಮೃತಪಟ್ಟಿದ್ದರು. ಕಾಯಿಲೆಗಳಿಗೆ ತುತ್ತಾದಾಗ ಆರೈಕೆ ಸಿಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
Advertisement
ಸಾವಿನ ದವಡೆ ಸೇರಿದರುಹಿಡಿ ಉಪ್ಪು ತರಬೇಕಿದ್ದರೂ ಮೂರು ತಾಸು ನಡೆದೇ ಸಾಗಬೇಕು. ಕಷ್ಟಗಳಿಂದ ನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಕೊಚ್ಚಿ ಹೋದ ಜಲ್ಲಿ
ವಿದ್ಯುತ್ ಹಾಗೂ ರಸ್ತೆಯದೇ ಇಲ್ಲಿ ಪ್ರಮುಖ ಸಮಸ್ಯೆ. ರಸ್ತೆ ಬಳಕೆಗೆ ಅರಣ್ಯ ಇಲಾಖೆ ಅಡ್ಡಿ ಇತ್ತು. ಈಗ ಇಲಾಖೆ ಒಪ್ಪಿಗೆ ಸೂಚಿಸಿದ್ದರಿಂದ ಇದ್ದ ಅಡ್ಡಿ ನಿವಾರಣೆಗೊಂಡಿದೆ. ರಸ್ತೆ ನಿರ್ಮಾಣಕ್ಕೆ ಜಲ್ಲಿ ತಂದು ರಾಶಿ ಹಾಕಿದ್ದಾರೆ. ಆದರೆ, ಜಡಿ ಮಳೆಗೆ ಜಲ್ಲಿಕಲ್ಲುಗಳು ಕೊಚ್ಚಿ ಹೋಗುತ್ತಿವೆ. ಬೇಗನೆ ರಸ್ತೆ ಕೆಲಸ ಆರಂಭಿಸಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸಮನ್ವಯದ ಮೂಲಕ ಅಭಿವೃದ್ಧಿ
ಮೀಸಲು ಅರಣ್ಯದೊಳಗೆ ಬದನಕಜೆ ಕಾಲನಿಗೆ ರಸ್ತೆ ಹಾದುಹೋಗಿದೆ. ಅರಣ್ಯ ಇಲಾಖೆ ಜತೆ ಸಮನ್ವಯ ಸಾಧಿಸಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ನಡೆಸುತ್ತೇವೆ. ಈಗ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದ್ದು, ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಜಿಗಣೆ ಕಾಟದಿಂದಾಗಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಕೆಲಸಕ್ಕೆ ನಿಲ್ಲುತ್ತಿಲ್ಲ.
– ಹರೀಶ್ ರೈ, ಉಬರಡ್ಕ ಗ್ರಾ.ಪಂ. ಅಧ್ಯಕ್ಷ — ಬಾಲಕೃಷ್ಣ ಭೀಮಗುಳಿ