Advertisement

ಉಡುಪಿಯ ಮಹಿಳಾ, ಮಕ್ಕಳ ಆಸ್ಪತ್ರೆ ತಾತ್ಕಾಲಿಕ ಸೇವೆಗೆ 7 ವೈದ್ಯರ ನಿಯೋಜನೆ

02:11 AM May 12, 2020 | Sriram |

ಉಡುಪಿ: ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ವಿವಿಧ ಸಮುದಾಯ ಆರೋಗ್ಯ ಕೇಂದ್ರಗಳ 7 ಮಂದಿ ತಜ್ಞ ವೈದ್ಯರನ್ನು ತಾತ್ಕಾಲಿಕವಾಗಿ ನಿಯೋ ಜಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿದೆ.

Advertisement

ಬಿ.ಆರ್‌.ಎಸ್‌. ಹೆಲ್ತ್  ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಆಸ್ಪತ್ರೆ ಯ ನಿರ್ವಹಣೆ ಕಷ್ಟ ಎಂದು ಮನವಿ ಸಲ್ಲಿಸಿತ್ತು. ಹಾಗಾಗಿ ರೋಗಿಗಳ ಹಿತದೃಷ್ಟಿಯಿಂದ ಮೇ 5 ರಂದು ಇಲಾಖೆ ಆದೇಶ ಹೊರಡಿಸಿದೆ.

ನಿಯೋಜಿತ ವೈದ್ಯರು
ಬೈಂದೂರು ಕೇಂದ್ರದಿಂದ ಡಾ| ಫಾತಿಮಾ ಮತ್ತು ಬ್ರಹ್ಮಾವರ ಕೇಂದ್ರ ದಿಂದ ಡಾ| ದೀಕ್ಷಿತಾ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾಗಿ, ಜಿಲ್ಲಾಸ್ಪತ್ರೆಯ ಡಾ| ವೇಣುಗೋಪಾಲ್‌ ಯು. ಮತ್ತು ಕಾರ್ಕಳ ಕೇಂದ್ರದ ಡಾ| ಕೇಶವ ಅವರು ಮಕ್ಕಳತಜ್ಞರಾಗಿ, ಶಿರ್ವ ಕೇಂದ್ರದ ಡಾ| ಗಣಪತಿ ಹೆಗ್ಡೆ, ಬ್ರಹ್ಮಾವರ ಕೇಂದ್ರದ ಡಾ| ಅಜಿತ್‌ ಹೆಗ್ಡೆ, ಕೋಟ ಕೇಂದ್ರದ ಡಾ| ಸಂದೀಪ ಅವರನ್ನು ಅರಿವಳಿಕೆ ತಜ್ಞರಾಗಿ ನಿಯೋಜನೆಗೊಂಡವರು.

6 ತಜ್ಞ ವೈದ್ಯರ ಹುದ್ದೆಗಳಿಗೆ ಎನ್‌ಆರ್‌ಎಚ್‌ಎಂ ನಡಿ ಗುತ್ತಿಗೆ ಆಧಾರದ ನೇಮಕಕ್ಕೆ ಮೇ 11ರಂದು ವೈದ್ಯರ ಸಂದರ್ಶನ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಸೆಂಟ್ರಲ್‌ ಎಸಿ ಇರುವ ಕಾರಣ ತಿಂಗಳಿಗೆ 18 ಲ.ರೂ. ವಿದ್ಯುತ್‌ ಬಿಲ್‌ ಬರುತ್ತಿದ್ದು, ಅದನ್ನು ಭರಿಸಲು ಸರಕಾರಕ್ಕೆ ಅಸಾಧ್ಯ. ಆದರೂ ರೋಗಿಗಳ ದೃಷ್ಟಿಯಿಂದ ಬಿ.ಆರ್‌.ಎಸ್‌. ಸಂಸ್ಥೆಗೆ ಸಹಕರಿಸಲಾಗುತ್ತಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

Advertisement

ಕಾಮಗಾರಿ ಸ್ಥಗಿತ
ಸಂಸ್ಥೆಯು ಈಗಿನ ಆಸ್ಪತ್ರೆ ಅಲ್ಲದೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಕಾಮಗಾರಿ ಆರಂಭಿ ಸಿತ್ತು. ಆದರೆ ಅದು ನಿಯಮಕ್ಕೆ ವಿರುದ್ಧವಾದ ಕಾರಣ ನಗರಸಭೆ ಅನುಮತಿ ನೀಡಿರಲಿಲ್ಲ. ಹಾಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಹಳೆಯ ಆಸ್ಪತ್ರೆ ಕಟ್ಟಡವನ್ನು ಕೆಡವಿರು
ವುದರಿಂದ ಹೊಸ ಆಸ್ಪತ್ರೆಯ ನಿರ್ಮಾಣವನ್ನು ಸಂಸ್ಥೆಯೇ ಮುಂದುವರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next