ಕರೌಲಿ: ಜಸ್ಥಾನದ ಕರೌಲಿ ಜಿಲ್ಲೆಯ ಸಪೋತ್ರಾ ಪ್ರದೇಶದಲ್ಲಿ ಭೀಕರ ದುರಂತ ಸಂಭವಿಸಿದ್ದು,17 ಮಂದಿ ಚಂಬಲ್ ನದಿಯಲ್ಲಿ ಮುಳುಗಿದ್ದು, ಆ ಪೈಕಿ 10 ಜನರನ್ನು ಗ್ರಾಮಸ್ಥರು ರಕ್ಷಿಸಿದ್ದು, ಉಳಿದ ಏಳು ಮಂದಿಗಾಗಿ ಶೋಧ ಮುಂದುವರಿದಿದೆ.
ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ಜರೂರ್ ಗ್ರಾಮದ 17 ಯಾತ್ರಿಕರ ತಂಡವು ಕೈಲಾದೇವಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ವೇಳೆ ಜಗದಾರ್ ಘಾಟ್ನಿಂದ ದಾರಿಯಲ್ಲಿ ನದಿಯಲ್ಲಿ ಅವಘಡ ಸಂಭವಿಸಿದೆ. ಮೊಸಳೆಯೊಂದು ದಾಳಿ ಮಾಡಲು ಮುಂದಾಗಿದ್ದು ಈ ವೇಳೆ ಎಲ್ಲರೂ ನೀರಿನ ಹರಿವು ಹೆಚ್ಚಿದ್ದ ಪ್ರದೇಶಕ್ಕೆ ತೆರಳಿದ ಕಾರಣ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಡೈವರ್ಗಳ ಪ್ರಯತ್ನಗಳ ಹೊರತಾಗಿಯೂ, ಎರಡು ದೇಹಗಳು ಮಾತ್ರ ಪತ್ತೆಯಾಗಿದ್ದು ಉಳಿದ ಐವರಿಗಾಗಿ ಶೋಧ ಮುಂದುವರಿಸಲಾಗಿದೆ.