ಹೊಸದಿಲ್ಲಿ: ವಿಮಾನ ಪ್ರಯಾಣಿಕರಿಗೆ ಆ.8ರಿಂದ ಅನ್ವಯವಾಗುವಂತೆ ನಿಯಮಗಳನ್ನು ಪರಿಷ್ಕರಿಸಲಾಗಿದೆ. ವಿದೇಶಗಳಿಂದ ಭಾರತಕ್ಕೆ ಬಂದಿಳಿಯುವ ಪ್ರಯಾಣಿಕರಿಗೆ 7 ದಿನಗಳ ಪಾವತಿ ಮಾದರಿಯ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರು ರಿಯಲ್ ಟೈಮ್ ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮೆರೇಜ್ ಚೇನ್ ರಿಯಾಕ್ಷನ್ ಫಲಿತಾಂಶವನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ. ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಕೇಂದ್ರ ಎಚ್ಚರಿಸಿದೆ.
ನಿಬಂಧನೆಗಳೇನು: –ಹೊರ ದೇಶಗ ಳಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ. ಅದರಲ್ಲಿ 7 ದಿನಗಳು ಪಾವತಿ ಮಾದರಿಯ ಸಾಂಸ್ಥಿಕ ಕ್ವಾರಂಟೈನ್, ಉಳಿದ 7 ದಿನ ಮನೆಯಲ್ಲಿ ಐಸೋಲೇಷನ್.
-ಗುರುತರ ಕಾರಣವಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ. ಪ್ರಸವ, ಕುಟುಂಬ ಸದಸ್ಯರ ಸಾವು, 10ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತಂದೆ-ತಾಯಿ ಗಳು ಗಂಭೀರ ಕಾಯಿಲೆಗೆ ತುತ್ತಾಗಿದ್ದರೆ ಅಂಥವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ.
-ಪ್ರಯಾಣಿಕರು ಸಲ್ಲಿಸಿರುವ ಪ್ರಮಾಣ ಪತ್ರ ಸರಿ ಎಂಬ ಮತ್ತೂಂದು ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಸುಳ್ಳು ಪ್ರಮಾಣ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.
-ಪ್ರಮಾಣ ಪತ್ರಗಳ ಬಗೆಗಿನ ಸ್ವ ಷೋಷಣಾ ಪತ್ರಗಳನ್ನು ಪ್ರಯಾಣ ಆರಂಭಿಸುವ 72 ಗಂಟೆಗಳ ಮುನ್ನ newdelhiairport.in ವೆಬ್‌ಸೈಟ್‌ಗೆ ಸಲ್ಲಿಸಬೇಕು.