Advertisement

ಪ್ರವಾಸೋದ್ಯಮಕ್ಕೆ 7 ಕೋ.ರೂ. ಬಿಡುಗಡೆ: ಡಾ|ಭರತ್‌ ಶೆಟ್ಟಿ

09:52 AM Jan 21, 2020 | sudhir |

ಪಣಂಬೂರು: ಗೋವಾ, ಕೇರಳಗಳಂತೆ ಕರ್ನಾಟಕದಲ್ಲೂ ಉತ್ತಮ ಸಮುದ್ರ ತೀರದ ತಾಣಗಳಿದ್ದು, ಅಭಿವೃದ್ಧಿ ಪಡಿಸಿ ಪ್ರವಾಸೋ ದ್ಯಮಕ್ಕೆ ಉತ್ತೇಜನ ನೀಡಲು ಸರಕಾರ 7 ಕೋ. ರೂ. ಮೀಸಲಿರಿಸಿದೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ಹೇಳಿದರು.

Advertisement

ಕರಾವಳಿ ಉತ್ಸವ ಪ್ರಯುಕ್ತ ಪಣಂಬೂರು ಬೀಚ್‌ನಲ್ಲಿ ಮೂರು ದಿನಗಳಿಂದ ಆಯೋಜಿಸಲಾದ ಬೀಚ್‌ ಉತ್ಸವದ ಸಮಾರೋಪ ಸಮಾರಂಭ ದಲ್ಲಿ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ ಅಭಿವೃದ್ಧಿಗೆ ಚಿಂತಿಸಲಾಗಿದೆ. ನಮ್ಮ ಬೀಚ್‌ಗಳಲ್ಲಿ ಅಭಿವೃದ್ಧಿಗೆ ಸ್ಥಳಾವ ಕಾಶದ ಕೊರತೆ ನಮಗೆ ಹಿನ್ನಡೆ ತಂದಿದೆ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರಕಾರ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಿದೆ ಎಂದರು.

ಮನೋಹರ್‌ ಪ್ರಸಾದ್‌ಗೆ ಪ್ರಶಸ್ತಿ ಪ್ರದಾನ
ಉದಯವಾಣಿ ಸಹಾಯಕ ಸಂಪಾದಕ ಮನೋಹರ್‌ ಪ್ರಸಾದ್‌ ಅವರಿಗೆ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮನೋಹರ ಪ್ರಸಾದ್‌ ಮಾತನಾಡಿ, ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳು ಬಂದಿವೆ. ಈ ಬಾರಿ ಮಹತ್ವದ ಗೌರವಕ್ಕೆ ಜಿಲ್ಲಾಡಳಿತ ಆರಿಸಿರುವುದಕ್ಕೆ ಸಂತಸವಾಗಿದೆ ಎಂದರು.

Advertisement

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಅಪರ ಜಿಲ್ಲಾಧಿಕಾರಿ ಎಂ.ಜಿ. ರೂಪಾ, ಮನಪಾ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ, ಮುಡಾ ಆಯುಕ್ತ ಶ್ರೀಕಾಂತ್‌ ರಾವ್‌, ಅರಣ್ಯಾಧಿಕಾರಿ ಶ್ರೀಧರ್‌, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಕಾ.ನಿ. ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಅಧಿಕಾರಿಗಳಾದ ಖಾದರ್‌ ಶಾ, ವೆಂಕಟೇಶ್‌, ಮಧು, ರಾಜೇಶ್‌, ನವೀನ್‌, ಪಣಂಬೂರು ಬೀಚ್‌ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್‌ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ರಾಜೇಂದ್ರ ಕಲಾºವಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next