Advertisement

7 ಖಂಡಗಳಿಗೆ ಇನ್ನೊಬ್ಬ ಜತೆಗಾರ?

07:46 AM Feb 19, 2017 | |

ಲಂಡನ್‌: ಪ್ರಪಂಚದ 7 ಖಂಡಗಳಿಗೆ ಇನ್ನೊಬ್ಬ ಜತೆಗಾರ ಸಿಕ್ಕಿ­ದ್ದಾನೆ! ಆಸ್ಟ್ರೇಲಿಯಾ ಖಂಡದ ನ್ಯೂಜಿಲೆಂಡಿನಿಂದ ತುಸು ಆಚೆಗೆ, ಅಂದರೆ ಪೆಸಿಫಿಕ್‌ ಸಾಗರದ ನೈಋತ್ಯ ಭಾಗದಲ್ಲಿ ಈ ಭೂ ಭಾಗ ಪತ್ತೆ­ಯಾ­ಗಿದೆ. “ಝೀಲಾಂಡಿಯಾ’ ಹೆಸರಿನ ಈ ಭೂ ಪ್ರದೇಶದಲ್ಲಿ ವಿಜ್ಞಾ­ನಿಗಳು ಈಗಾಗಲೇ ಸಂಶೋಧನೆ ಕೈಗೊಂಡಿದ್ದು, 8ನೇ ಖಂಡ­ವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದಿದ್ದಾರೆ. 

Advertisement

ಎಲ್ಲಿದೆ? ಹೇಗಿದೆ?: ನ್ಯೂಜಿಲೆಂಡಿನ ಪಶ್ಚಿಮ ಭಾಗದಲ್ಲಿ ಪತ್ತೆಯಾಗಿರುವ “ಝೀಲಾಂಡಿಯಾ’ದ ಶೇ.94 ಭೂಭಾಗ ಪೆಸಿಫಿಕ್‌ ಸಾಗರದಲ್ಲಿ ಮುಳುಗಿದೆ. 50 ಲಕ್ಷ ಚದರ ಕಿ.ಮೀ. ನ್ಯೂಜಿಲೆಂಡ್‌ ಸಮೀಪದ ಗೊಂಡ್ವಾನಾ ಭೂಭಾಗದಿಂದಲೇ ಈ ಖಂಡ ಬೇರ್ಪಟ್ಟಿದ್ದು, 60ಧಿ-80 ಮಿಲಿಯನ್‌ ವರ್ಷಗಳ ಹಿಂದೆಯೇ ಇದು ನೀರಿನಲ್ಲಿ ಮುಳುಗಿದೆ ಎಂಬ ವಾದ ಕೇಳಿಬಂದಿದೆ. “ಝೀಲಾಂಡಿಯಾ’ ಕುರಿತು “ಜಿಯೋಲಜಿಕಲ್‌ ಸೊಸೈಟ್‌ ಆಫ್ ಅಮೆರಿಕ’ ಲೇಖನ ಪ್ರಕಟಿಸಿದೆ.

22 ವರ್ಷದ ಹಿಂದೆಯೇ ಹೆಸರು!: ಪೆಸಿಫಿಕ್‌ ಸಾಗರದ ನೈಋತ್ಯದಲ್ಲಿ ಇಂಥ ಭೂಭಾಗ ಇರುವ ಸಾಧ್ಯತೆಯ ಬಗ್ಗೆ ಅಮೆರಿಕದ ಭೂಗರ್ಭಶಾಸ್ತ್ರಜ್ಞ ಬ್ರೂಸ್‌ ಲುಯೆಂಡಿಕ್‌ 1995ರಲ್ಲಿ ಮೊದಲು ಪ್ರಸ್ತಾವಿಸಿ, “ಝೀಲಾಂಡಿಯಾ’ ಎಂಬ ಹೆಸರನ್ನಿಟ್ಟಿದ್ದರು. ಈ ಪ್ರದೇಶವನ್ನು ನ್ಯೂಜಿಲೆಂಡ್‌, ನ್ಯೂ ಕ್ಯಾಲೆಡೊನಿಯಾ, ಎಲಿಜಬೆತ್‌ ಮತ್ತು ಮಿಡಲ್‌ಟನ್‌ ಹವಳದ ದಂಡೆಗಳು ಸುತ್ತುವರಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next