ಶಿರಸಿ: ನೂರು ವರ್ಷ ಪೂರ್ಣಗೊಳಿಸಿ ನೂರೊಂದನೇ ವರ್ಷದ ಸಂಭ್ರಮದಲ್ಲಿರುವ ಇಲ್ಲಿನ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 7.72 ಕೋ. ರೂ. ನಿವ್ವಳ ಲಾಭ ಗಳಿಸಿದೆ. ರೈತಪರವಾಗಿ ಅನೇಕಕಾರ್ಯ ಚಟುವಟಿಕೆಗಳ ಜೊತೆಗೆ ಅನ್ನದಾತರಹೆಗಲಿಗೆ ಹೆಗಲು ನೀಡಿದೆ ಎಂದು ಸಚಿವ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಟಾರ್ ಹೇಳಿದರು.
ಅವರು ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸಂಘದ ವಾರ್ಷಿಕ ವರದಿ ವಿವರ ನೀಡಿ, ಪ್ರತೀ ಎಕರೆಗೆ ಒಂದೂವರೆ ಲಕ್ಷ ರೂ. ಮಣ್ಣಿನ ಬದುಕುಹಾಗೂ ಹೊಸ ತೋಟ ನಿರ್ಮಾಣಕ್ಕೆ ಹೆಚ್ಚುವರಸಾಲವನ್ನು ಶೂನ್ಯ ಬಡ್ಡಿಯಲ್ಲಿ ನೀಡಲೂ ಯೋಜಿಸಿ ಅನುಷ್ಠಾನಕ್ಕೆ ಬಂದಿದ್ದೇವೆ. ರಾಜ್ಯದಲ್ಲೇ ಅತಿ ಹೆಚ್ಚು ಬೆಳೆ ಸಾಲ ವಿತರಿಸುವ ಬ್ಯಾಂಕ್ ಆದ ಕೆಡಿಸಿಸಿ ಈ ಬಾರಿ ಸರಕಾರದಿಂದ ಸಿಗಬೇಕಿದ್ದ ಬೆಳೆಸಾಲ ಮನ್ನಾ ಬಾಪ್ತನ್ನೂ ಅಧಿಕಗೊಳಿಸಿ ಕೊಡುವಲ್ಲಿ ಮುಂದಿದೆ. ನಬಾರ್ಡ್‌ಸೂಚನೆಯಂತೆ ಬ್ಯಾಂಕ್ ಕಾರ್ಯ ಮಾಡುತ್ತಿದ್ದು, ರೈತರಿಗೆ, ಠೇವಣಿ ಇಟ್ಟವರಿಗೆ ಹಿತ ಕಾಯುವ ಕಾರ್ಯ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.
ಶೇರು ಬಂಡವಾಳ 69.87 ಕೋ.ರೂ ದಿಂದ 74.92 ಕೋ.ರೂಗೆ ಏರಿಕೆಯಾಗಿ ಶೇ.7.23ರಷ್ಟು ಏರಿಕೆಯಾಗಿದೆ. ನಿಧಿಗಳು 122.06 ಕೊ.ರೂ.ದಿಂದ137.19 ಕೋ.ರೂ.ಗೆ ಏರಿಕೆಯಾಗಿ ಶೇ.12.40 ರಷ್ಟು ವೃದ್ಧಿಯಾಗಿದೆ. ಠೇವುಗಳು 2021.41 ಕೋ.ರೂ. ದಿಂದ 2336.66 ಕೋ.ರೂ.ಗೆ ಏರಿಕೆಯಾಗಿಶೇ.15.60 ದಷ್ಟು ಅಭಿವೃದ್ಧಿಯಾಗಿದೆ. ಇದೇಜಿಲ್ಲಿಗರಿಗೆ ಬ್ಯಾಂಕಿನ ಮೇಲೆ ಇರುವ ವಿಶ್ವಾಸತೋರಿಸುತ್ತದೆ. ಈ ವಿಶ್ವಾಸ ಉಳಿಸಿಕೊಂಡು ಬ್ಯಾಂಕ್ ಹೋಗಲಿದೆ ಎಂದರು.
ಬ್ಯಾಂಕಿನ ಒಟ್ಟೂ ಆದಾಯ 228.28 ಕೋ. ರೂ. ಆಗಿದೆ. ಸಾಲ ಬಾಕಿ 1784.46 ಕೋ.ರೂ.ಇದ್ದು, ದುಡಿಯುವ ಬಂಡವಾಳ 3128.15 ಕೋ.ರೂ. ಆಗಿದೆ. 53 ಶಾಖೆಗಳ ಮೂಲಕ ಕಾರ್ಯಮಾಡುತ್ತಿರುವ ಬ್ಯಾಂಕ್ ಈ ವರ್ಷದಿಂದ ನಾಲ್ಕುಗಾಲಿ ವಾಹನ ಪಡೆಯುವವರಿಗ 24 ಗಂಟೆಯೊಳಗೆಸಾಲ ನೀಡಲೂ ಯೋಜನೆ ರೂಪಿಸಿದೆ. ಶಾಖಾ ವ್ಯವಸ್ಥಾಪಕರಿಗೆ ಮಂಜೂರಾತಿ ಜವಾಬ್ದಾರಿ ಕೂಡ ನೀಡಲಾಗಿದೆ. ಬೆಳೆ ಸಾಲದ ನೀಡಿಕೆ ಮಿತಿಯನ್ನೂ ಏರಿಕೆ ಮಾಡಲಾಗಿದೆ ಎಂದ ಹೆಬ್ಟಾರ್, ರಾಜ್ಯ ಕೇಂದ್ರ ಸರಕಾರದ ರಿಯಾಯತಿ ಬಾಬತ್ತಿನಲ್ಲಿ 54 ಕೋ.ರೂ.ಹಣ ಬಿಡುಗಡೆ ಆಗಬೇಕಿದ್ದು, ಈ ಪೈಕಿ ಕೆಲ ಮೊತ್ತ ಗುರುವಾರ ಬಿಡುಗಡೆ ಆಗಿದೆ ಎಂದೂ ತಿಳಿಸಿದರು.
ಕಳೆದ ಜೂನ್ 30ಕ್ಕೆ ಹೋಲಿಸಿದರೆ ವ್ಯವಸಾಯ ಸಾಲ ವಸೂಲಿ ಪ್ರಮಾಣ ಶೇ.97.73ರಷ್ಟಿದ್ದು, ಬೆಳೆವಿಮೆ ಭಾಗವಾಗಿ ಫಸಲ ಭೀಮಾ, ಹವಾಮಾನಆಧರಿತ ಬೆಳೆವಿಮೆ ಕೂಡ ಮಾಡಲಾಗುತ್ತಿದೆ. ಹಣ ಸೊಸೈಟಿಗಳ ಮೂಲಕ ಬ್ಯಾಂಕ್ ಕಟ್ಟಿಸಿಕೊಂಡು ವಿಮಾ ಕಂಪನಿಗೆ ಪಾವತಿಸಿದ ಬಳಿಕ ಬ್ಯಾಂಕ್ ಗೆ ವಿಮಾ ಪರಿಹಾರ ಕೊಡುವಾಗ ಯಾವುದೇ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಒಬ್ಬ ನೋಡೆಲ್ ಅಧಿಕಾರಿ ಅಗತ್ಯ ಎಂಬ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಿದ್ದೇವೆ ಎಂದ ಹೆಬ್ಟಾರ್, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ 57186 ರೈತರು, ಹವಾಮಾನ ಆಧರಿತದಲ್ಲಿ 37221 ರೈತರು ಕಂತ ಕಟ್ಟಿದ್ದಾರೆ ಎಂದೂ ತಿಳಿಸಿದರು.
ಬ್ಯಾಂಕ್ ಇದ್ದ ಹಣವನ್ನು ದುಡಿಸಲು ಕೇವಲರೈತರಿಗೆ ಸಾಲ ಕೊಟ್ಟರೆ ಆಗದು. ಔದ್ಯೋಗಿಕವಾಗಿಕೂಡ ನೀಡಲೇಬೇಕು. ಈ ಕಾರಣದಿಂದ 24 ಹೊಸ ಘಟಕಗಳಿಗೆ 1122.92 ಲ.ರೂ ನೀಡಲಾಗಿದೆ. ಮನೆನಿರ್ಮಾಣಕ್ಕೂ ಕ್ರಿಯಾ ಯೋಜನೆಯ ಶೇ.75ರಷ್ಟು ಹಾಗೂ 30 ಲ.ರೂ. ತನಕದ ಸಾಲ ನೀಡಲಾಗುತ್ತಿದೆ. 80 ಜನರಿಗೆ 1262 ಲ.ರೂ. ಸಾಲ ಕೊಡಲಾಗಿದೆ.ಫಾರ್ಮ್ ಹೌಸ್‌ಗೆ 27 ಜನರಿಗೆ ಗರಿಷ್ಠ 20 ಲ.ರೂ.ತನಕ 296 ಲ.ರೂ. ನೀಡಲಾಗಿದೆ. ಹೊಸತಾದ 210 ಸ್ವ ಸಹಾಯ ಸಂಘಗಳೂ ಸೇರಿ 5277 ಸಂಘಗಳಿವೆ. 61017 ಜನರು ಸದಸ್ಯರಿದ್ದಾರೆ. ಬ್ಯಾಂಕ್ ಈವರ್ಷವೂ ಅ ವರ್ಗದ ಅಡಿಟ್‌ನಲ್ಲಿದೆ ಎಂದರು.
ಉಪಾಧ್ಯಕ್ಷ ಮೋಹನದಾಸ್ ನಾಯಕ,ನಿರ್ದೇಶಕರಾದ ಶ್ರೀಕಾಂತ ಘೋಕ್ಲೃಕರ್, ಜಿ.ಆರ್.ಹೆಗಡೆ ಸೋಂದಾ, ರಾಮಕೃಷ್ಣ ಹೆಗಡೆ ಕಡವೆ,ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಲ್.ಟಿ.ಪಾಟೀಲ,ಗಜು ಕತಗಾಲ, ವ್ಯವಸ್ಥಾಪಕ ಎಸ್.ಪಿ. ಚೌಹಾಣ ಸೇರಿದಂತೆ ಇತರರು ಇದ್ದರು.
ಆಸಾಮಿ ಖಾತೆ ಸಾಲ ಮನ್ನಾಕ್ಕೆ ಸಾಕಷ್ಟುಸಲ ಪ್ರಯತ್ನಿಸಿದರೂ ತಾಂತ್ರಿಕವಾಗಿಕೂಡ ಇದು ಸಾಧುವಾಗುತ್ತಿಲ್ಲ. ಬಹುತೇಕಶೇ.55 ರಷ್ಟು ಈ ಸಾಲ ಬಾಧೆಯಿಂದ ಹೊರಗೆಬಂದಿದ್ದಾರೆ. ಕೃಷಿ ಸಾಲಗಳ ಮೂಲಕವೇ ರೈತರ ಅಭಿವೃದ್ಧಿಗೆ ನೆರವಾಗುತ್ತಿದ್ದೇವೆ.
–ಶಿವರಾಮ ಹೆಬ್ಟಾರ್, ಸಚಿವ, ಅಧ್ಯಕ್ಷ