ಜಕಾರ್ತಾ: ಇಂಡೋನೇಷ್ಯಾದ ಪೂರ್ವ ಪಪುವಾ ನ್ಯೂಗಿನಿಯಾದಲ್ಲಿ ಭಾನುವಾರ ಮುಂಜಾನೆ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮಡಂಗ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಭೂಕಂಪದ ಬಳಿಕ ಅಮೆರಿಕದ ಜಿಯೊಲಾಜಿಕಲ್ ಸರ್ವೇ ಸಂಸ್ಥೆಯು ಸುನಾಮಿ ಸಂಭವಿಸುವ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
ಕರಾವಳಿಯ ಸಮುದ್ರಗಳಲ್ಲಿ ಅಲೆಗಳ ಅಬ್ಬರ ಜೋರಾಗಲಿದೆ ಯಾರೂ ಸಮುದ್ರತೀರಕ್ಕೆ ತೆರಳದಂತೆ ಸೂಚನೆ ನೀಡಿದೆ. ಭೂಕಂಪನದಿಂದಾಗಿ ಪಪುವಾ ನ್ಯೂಗಿನಿಯಾದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ ಜೊತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿವೆ.
ಭೂಕಂಪನದ ಅನುಭವ ಸುಮಾರು 300 ಮೈಲಿಗಳು ದೂರದವರೆಗೂ ವ್ಯಾಪಿಸಿತ್ತು ಎನ್ನಲಾಗಿದೆ. ಕೆಲವು ಪ್ರದೇಶಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಭೂ ಕಂಪನದ ದೃಶ್ಯ ಸೆರೆಹಿಡಿಯಲಾಗಿದೆ.
ಇಂಡೋನೇಷ್ಯಾದ ವೆಸ್ಟ್ ಪಪುವಾ ಪ್ರಾಂತ್ಯದಲ್ಲಿ ನಿನ್ನೆಯಷ್ಟೇ (ಸೆ.10) 6.2 ಹಾಗೂ 5.5 ತೀವ್ರತೆಯ ಎರಡು ಭೂಕಂಪಗಳು ವರದಿಯಾಗಿದ್ದವು.
ಇದನ್ನೂ ಓದಿ : ಬಿರುಸಿನ ಮಳೆ : ಉಡುಪಿ ಜಿಲ್ಲೆಗಳಲ್ಲಿ ಇಂದು, ನಾಳೆ ಎಲ್ಲೋ ಅಲರ್ಟ್