ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಶೇ.50 ರಿಯಾಯ್ತಿ ನೀಡಿದ್ದ ಬೆನ್ನಲ್ಲೇ ನಾಲ್ಕನೇ ದಿನವಾದ ಸೋಮವಾರ ಬರೋಬ್ಬರಿ ಏಳೂವರೆ ಕೋಟಿ ರೂ. ದಂಡ ಸಂಗ್ರಹವಾಗಿದೆ. ಕಳೆದ ನಾಲ್ಕುದಿನಗಳಲ್ಲಿ 10,62,210 ಕೇಸ್‌ಗಳಲ್ಲಿ 30,96,17,921 ರೂ. ದಂಡ ಸಂಗ್ರಹವಾಗಿದೆ.
ಸೋಮವಾರ 2,59,558 ಪ್ರಕರಣಗಳಿಗೆ ಸಂಬಂಧಿಸಿದಂತೆ 7,45,53,310 ರೂ. ದಂಡ ಸಂಗ್ರಹವಾಗಿದೆ. ಪಿಡಿಎ, ಪೇಟಿಎಂ, ಬೆಂಗಳೂರು ಒನ್ ಹಾಗೂ ಟಿಎಂಸಿ (ಸಂಚಾರ ನಿರ್ವಹಣಾಕೇಂದ್ರ)ದಲ್ಲಿ ದಂಡ ಸಂಗ್ರಹಿಸಲಾಗುತ್ತಿದೆ. ಹೀಗೆ ಇದುವರೆಗೂಒಟ್ಟಾರೆ 10,62,210 ಕೇಸ್‌ಗಳಲ್ಲಿ 30,96,17,921 ದಂಡ ಸಂಗ್ರ ಹವಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಯಾವ ನಿಯಮಗಳ ಉಲ್ಲಂಘನೆಗೆ ಎಷ್ಟು ರಿಯಾಯ್ತಿ ಎಂಬ ಕುರಿತು ಬೆಂಗಳೂರು ಸಂಚಾರ ವಿಭಾಗದ ಪೊಲೀಸರು 44 ತರಹದ ನಿಯಮ ಉಲ್ಲಂಘಟನೆ ಪಟ್ಟಿ ಬಿಡುಗಡೆ ಮಾಡಿದ್ದರು.ಇದೇ ವೇಳೆ ಮಹಿಳೆಯೊಬ್ಬರು ಸಂಚಾರ ಠಾಣೆಯಲ್ಲಿ ದಂಡ ಪಾವತಿಸಲು ಹೋದಾಗ, ತಮ್ಮ ವಾಹನದ ನಂಬರ್ ಪ್ಲೇಟ್ ಹೆಸರಿನಲ್ಲಿ ಬೇರೊಂದು ವಾಹನ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ. ಆದರೆ, ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ನಿಮ್ಮ ನಂಬರ್ ಬಳಸಿದ್ದರಿಂದ ಎರಡು ದಂಡವನ್ನು ಪಾವತಿಸುವಂತೆ ಹೇಳಿದ್ದಾರೆ. ಹೀಗಾಗಿ ಆಕೆ ಸಂಚಾರನಿರ್ವಹಣಾ ಕೇಂದ್ರದಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ದೂರು ನೀಡಿದ್ದಾರೆ.