ಮಾಗಡಿ: ನರಭಕ್ಷಕ ಚಿರತೆ ದಾಳಿಗೆ ಬಲಿಯಾಗಿದ್ದ ಕೊತ್ತಗಾನಹಳ್ಳಿ ವೃದ್ಧೆ ಗಂಗಮ್ಮರ ಮನೆಗೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 7.5 ಲಕ್ಷ ರೂ. ಪರಿಹಾರ ಧನ ಘೋಷಿಸಿದರು. ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಹಾಗೂ ಮಾಗಡಿ ಶಾಸಕ ಎ.ಮಂಜುನಾಥ್ ಇದ್ದರು. ಸಚಿವ ಆನಂದ್ ಸಿಂಗ್, ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ರೈತರು, ಗ್ರಾಮಸ್ಥರು ತಮ್ಮ ಕಷ್ಟವನ್ನು ಸಚಿವರಲ್ಲಿ ತೋಡಿಕೊಂಡರು. ಬಳಿಕ ಸಚಿವರು ಮಾತನಾಡಿ, ನಿಮ್ಮ ನೋವು ನಿವಾರಿಸಲು ಸರ್ಕಾರ ಬದಟಛಿವಾಗಿದೆ. ಕಾಡು ಅಕ್ರಮಿಸಿದ್ದು, ಹೀಗಾಗಿಯೇ ಕಾಡುಪ್ರಾಣಿ ಗಳು ಕಾಡಂಚಿನ ಗ್ರಾಮಗಳತ್ತ ಬರುತ್ತಿವೆ. ರೈತರು ಬಹಳ ಎಚ್ಚರಿಕೆಯಿಂದ ತಮ್ಮ ಹೊಲ ಗದ್ದೆ, ತೋಟಗಳಿಗೆ ತೆರಳಬೇಕು. ರಾತ್ರಿವೇಳೆ ಸಂಚಾರ ಬೇಡ. ಅನಿವಾರ್ಯವಾದರೆ ಹೆಚ್ಚಿನ ಜನಸಂಖ್ಯೆಯಲ್ಲಿ ಸಂಚರಿಸಿ ಎಂದರು.
ನರಭಕ್ಷಕ ಚಿರತೆ ಹಿಡಿಯಲು ಕ್ಯೂ-8 ವಿಂಗ್ ತಂಡ ರಚಿಸಲಾಗಿದೆ. ಡ್ರೋನ್ ಕ್ಯಾಮರಾದಿಂದ ಚಿರತೆ ಕಾರಿಡಾರ್ ಗುರುತಿ ಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಂಡಿ ದ್ದಾರೆ. ಹಿಡಿದ ಚಿರತೆಗಳಿಗೆ ಮೈಕ್ರೋಚಿಪ್ ಅಳವಡಿಕೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಗ್ರಾಮಸ್ಥರಿಂದ ಸಲಹೆ ಪಡೆದಿದ್ದೇನೆ. ಡಿಸಿಸಿಎಫ್ ಅವರನ್ನು ಕರೆಸಿ ಕೊಂಡು ನೇರವಾಗಿ ವಾಸ್ತವಾಂಶ ತಿಳಿಸಿದ್ದೇವೆ.
ಇನ್ನು ಮುಂದೆ ಕಾಡಂಚಿನ ಗ್ರಾಮಗಳಲ್ಲಿ ಗ್ರಾಮ ಪ್ರತಿನಿಧಿ ನೇಮಿಸಲಾಗುವುದು. ಕಾಡುಪ್ರಾಣಿಗಳ ರಕ್ಷಣೆಗೆ ಶಾಶ್ವತ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರಲಾಗುವುದು. ಕಾಡುಪ್ರಾಣಿಗಳ ರಕ್ಷಣೆಗೆ ಕಾಡುಗಳಲ್ಲಿ ನೀರಿನ ಹೊಂಡ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ನೀರಿನ ಕೊರತೆ ಇರುವೆಡೆ ಸೋಲರ್ ವ್ಯವಸ್ಥೆ ಮೂಲಕ ಹೊಂಡ ತುಂಬಿಸಲು ಕ್ರಮಕೈಗೊಳ್ಳಲಾಗುವುದು. ಜೊತೆಗೆ ಕಾಡಂಚಿನ ಬದಿಯಲ್ಲಿ ಎಚ್ಚರಿಕೆ ನಾಮಫಲಕ ಹಾಕಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್. ಗಂಗರಾಜು, ಜಿಪಂ ಸದಸ್ಯ ನಾಜಿಯಾ ಖಾನ್ ಜವಹರ್, ಮಾಜಿ ಅಧ್ಯಕ್ಷ ಸಿ.ಆರ್. ಗೌಡ, ಭೃಂಗೇಶ್, ಸಾಗರ್, ವೆಂಕಟೇಶ್, ರಾಜು, ಮೃತಗಂಗಮ್ಮ ಮೊಮ್ಮಗ ರವಿ, ಡಿಆರ್‌ಒ ಎಸ್.ಎನ್. ಹೆಗಡೆ, ವನ್ಯಜೀವಿ ಮುಖ್ಯ ವಿಭಾಗದ ಅಜಯ್ ಮಿಶ್ರ, ಸಾಮಾಜಿಕ ಅರಣ್ಯ ಉಪಸಂರಕ್ಷಣಾಧಿಕಾರಿ ಗೋಪಿನಾಥ್, ಡಿಎಫ್ಒ ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಕೆ.ಪುಷ್ಪಲತಾ, ಸಿಪಿಐ ಮಂಜುನಾಥ್, ಪಿಎಸ್‌ಐಗಳಾದ ವೆಂಕಟೇಶ್ ಸುರೇಶ್ ಹಾಗೂ ಅರಣ್ಯ ಸಿಬ್ಬಂದಿಯಿದ್ದರು.