Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭಾದ ಶತಮಾನೋತ್ಸವದ ವರ್ಷಾಚರಣೆಯ ಅಂಗವಾಗಿಜಿಲ್ಲಾದ್ಯಂತ ಅನೇಕ ಸ್ಥಳಗಳಲ್ಲಿ ವರ್ಷಪೂರ್ತಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಪೂರೈಸಲಾಗಿದೆ ಎಂದರು.
ಮುಖಂಡರಿಂದಾಗಲೀ, ಸರ್ಕಾರದಿಂದಾಗಲೀ ಪಡೆಯದೆ ಜಿಲ್ಲೆಯ ಸಮಾಜ ಬಾಂಧವರಿಂದಲೇ ಸಂಗ್ರಹಿಸಿ ಖರ್ಚು ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಿಂದ ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ಸುಮಾರು 20 ಸಾವಿರಕೂ ಹೆಚ್ಚು ಸಮಾಜ ಬಾಂಧವರನ್ನು ಭೇಟಿ ಮಾಡಿದ್ದೇವೆ ಎಂದರು. ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಸಮಾಜದ 150 ಬಡ ಕುಟುಂಬಗಳಿಗೆ ಮಾಸಾಶನ ನೀಡುತ್ತಿದ್ದು, ಬಡ ಕುಟುಂಬದವರ ಆರೋಗ್ಯದ ಚಿಕಿತ್ಸೆಗೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ವರ್ಷಕ್ಕೆ ಸುಮಾರು 25 ಲಕ್ಷ ರೂ. ನೀಡಲಾಗುತ್ತಿದೆ ಎಂದರು.
ಏ7ರ ಬೆಳಗ್ಗೆ 7.30 ರಿಂದ ಶ್ರೀ ರಾಮಕಾರಕ ಮಹಾಯಂತ್ರ ಹೋಮ ಆರಂಭವಾಗಲಿದ್ದು, ಇದರಲ್ಲಿ 1 ಸಾವಿರ ಮಹಿಳೆಯರು ಭಾಗವಹಿಸಲಿದ್ದಾರೆ. 9.30ಕ್ಕೆ ಪೂರ್ಣಾಹುತಿ ನಡೆಯಲಿದೆ. 10ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಎನ್.ಕುಮಾರ್ ಉದ್ಘಾಟಿಸಲಿದ್ದು, ಕೆನರಾ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ಎಂ.ಎಸ್. ಮಹಾಬಲೇಶ್ವರ್ ಸ್ವರ್ಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಹಿರಿಯ ಅಡ್ವೋಕೇಟ್ ಅಶೋಕ್ ಹಾರ್ನಳ್ಳಿ, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ, ಶ್ರೀ ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಚ್.ವಿ. ಸುಬ್ರಹ್ಮಣ್ಯ ಉಪಸ್ಥಿತರಿರುವರು ಎಂದರು.
Related Articles
Advertisement
1918ರ ಮಾ. 1ರಂದು ಆರಂಭವಾದ ಶತಮಾನೋತ್ಸವ ಸಂಭ್ರಮವನ್ನು 2018ರ ಏ. 8ರಿಂದ ವಿಜೃಂಭಣೆಯಿಂದ ಆರಂಭಿಸಿದ್ದು, 1037 ದಂಪತಿಗಳ ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಆರಂಭವಾದ ಶತಮಾನೋತ್ಸವ ಕಾರ್ಯಕ್ರಮವನ್ನು ಮಾ. 31ರವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಸೇರಿ ಒಟ್ಟು 125 ಕಾರ್ಯಕ್ರಮವನ್ನು ನೆರವೇರಿಸಲಾಗಿದೆ.