Advertisement

6ರಿಂದ 10ನೇ ತರಗತಿ: ಇನ್ನು ದಿನವಿಡೀ ಶಾಲೆ

02:13 AM Oct 03, 2021 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 1 ವರ್ಷ 9 ತಿಂಗಳುಗಳ ಬಳಿಕ 6ರಿಂದ 10ನೇ ತರಗತಿ ತನಕ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳು ಅ. 4ರಂದು ಆರಂಭಗೊಳ್ಳಲಿವೆ.

Advertisement

ಇದುವರೆಗೆ ಕೋವಿಡ್‌ ಕಾರಣದಿಂದ ಮಧ್ಯಾಹ್ನದ ವರೆಗೆ ಅಥವಾ ಕೆಲವು ತರಗತಿಗಳು ಅಪರಾಹ್ನ ಮಾತ್ರ ನಡೆಯುತ್ತಿದ್ದವು.

ಕೋವಿಡ್‌ ಸೋಂಕು ತಡೆಯಲು ಸರಕಾರ ಹೊರಡಿಸಿದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ತರಗತಿಗಳನ್ನು ನಡೆಸ ಬೇಕು ಎಂದು ರಾಜ್ಯ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ, ಕರ್ನಾಟಕದ ಉಪಾಧ್ಯಕ್ಷ ಮಂಜುನಾಥ ಅವರು ಪ್ರತಿಕ್ರಿಯಿಸಿ, 6ರಿಂದ 10ನೇ ತರಗತಿ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗಿರುವುದರಿಂದ ಶಾಲಾ ಆಡಳಿತ ಮಂಡಳಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ಸಮುದಾಯಕ್ಕೆ ಅನುಕೂಲವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಬಹಳ ಅಗತ್ಯವಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅ. 18: ಕಾಲೇಜು ಆರಂಭ
ಕಾಸರಗೋಡು: ಅ. 18ರಿಂದ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಎಲ್ಲ ತರಗತಿಗಳು ಆರಂಭಗೊಳ್ಳಲಿವೆ. ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ಗಳನ್ನು ತೆರೆಯಬಹುದು. ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಎರಡು ಡೋಸ್‌ವ್ಯಾಕ್ಸಿನ್‌ ಕಡ್ಡಾಯ. ವಿವಾಹ ಕಾರ್ಯಕ್ರಮ ಗಳಲ್ಲಿ 50 ಮಂದಿಗೆ ಭಾಗವಹಿಸಬಹುದು. ಗ್ರಾಮ ಸಭೆಗಳಲ್ಲಿ 50 ಮಂದಿ ಭಾಗವಹಿಸಬಹುದು ಎಂದು ಕೋವಿಡ್‌ ಅವಲೋಕನ ಸಭೆ ತೀರ್ಮಾನ ತೆಗೆದುಕೊಂಡಿದೆ.

Advertisement

ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸುವಂತೆ ಸರಕಾರದ ಆದೇಶ ಬಂದಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಆರಂಭಿಸಲು ಉದ್ದೇಶಿಸಲಾಗಿದೆ. 1ರಿಂದ 5ನೇ ತರಗತಿ ಆರಂಭ ಹಾಗೂ ಅಪರಾಹ್ನದ ಬಿಸಿಯೂಟ ನೀಡುವ ಯೋಜನೆ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
– ಮಲ್ಲೇಸ್ವಾಮಿ ಮತ್ತು
ಎನ್‌.ಎಚ್‌. ನಾಗೂರ,
ದ.ಕ., ಉಡುಪಿ ಜಿಲ್ಲಾ ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next