Advertisement

6ನೇ ವಾರ್ಷಿಕ ಯಕ್ಷಗಾನ ಸಪ್ತಾಹ ಸಮಾರೋಪ

05:26 PM Oct 21, 2019 | Team Udayavani |

ಮುಂಬಯಿ, ಅ. 20: ಕೆರೆಕಾಡು ಮೂಲ್ಕಿ ಶ್ರೀ ವಿನಾಯಕ ಯಕ್ಷಕಲಾ ತಂಡದ 6ನೇ ವಾರ್ಷಿಕ ಯಕ್ಷಗಾನ ಸಪ್ತಾಹದ ಸಮಾರೋಪ ಮತ್ತು ವಿ. ಕೆ. ಸುವರ್ಣ ಅಭಿಮಾನಿ ಬಳಗ ಇದರ ಸುವರ್ಣ ಕಲಾ ಸಂಭ್ರಮಾ ಚರಣೆಯು ಅ. 18ರಂದು ಅಪರಾಹ್ನ 4ರಿಂದ ನೆರೂಲ್‌ ಶ್ರೀ ಶನೀಶ್ವರಮಂದಿರದ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶನೀಶ್ವರ ಮಂದಿರ ನೆರೂಲ್‌ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ ವಹಿಸಿದ್ದರು. ನೆರೂಲ್‌ನ ಪುರೋಹಿತ ವಿದ್ವಾನ್‌ ದಿನೇಶ್‌ ಮತ್ತು ನೆರೂಲ್‌ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಸೂರಜ್‌ ಭಟ್‌ ಅವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಶ್ರೀ ಶನೀಶ್ವರ ಮಂದಿರ ನೆರೂಲ್‌ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ಆಗಮಿಸಿದ್ದರು.

ಗೌರವಾನ್ವಿತ ಅತಿಥಿಗಳಾಗಿ ಮಾಜಿ ನಗರ ಸೇವಕ ಸುರೇಶ್‌ ಜಿ. ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ವಿ. ಕೆ. ಪೂಜಾರಿ, ಶ್ರೀ ಶನೀಶ್ವರ ಮಂದಿರ ನೆರೂಲ್‌ ಜತೆ ಕೋಶಾಧಿಕಾರಿ ಆದ್ಯಪಾಡಿಗುತ್ತು ಕರುಣಾಕರ ಎಸ್‌. ಆಳ್ವ, ನೆರೂಲ್‌ ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್‌ ಟ್ರಸ್ಟ್‌ ಇದರ ಮಾಜಿ ಕಾರ್ಯಾಧ್ಯಕ್ಷ ಕೃಷ್ಣ ಎಂ. ಪೂಜಾರಿ, ರಂಗಭೂಮಿ ಫೈನ್‌ ಆರ್ಟ್ಸ್ ನವಿಮುಂಬಯಿ ಅಧ್ಯಕ್ಷ ತಾರಾನಾಥ ಶೆಟ್ಟಿ ಪುತ್ತೂರು, ಕಮಲಾ ಕಲಾ ವೇದಿಕೆಯ ಅಧ್ಯಕ್ಷ ಹರೀಶ್‌ ಕೋಟ್ಯಾನ್‌, ಸಮಾಜ ಸೇವಕ-ಉದ್ಯಮಿ ಜಯ ಶೆಟ್ಟಿ, ಉದ್ಯಮಿ-ಸಮಾಜ ಸೇವಕ ರಾಜೇಶ್‌ಗೌಡ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಹಿರಿಯ ರಂಗಕಲಾವಿದ, ಕಲಾಪೋಷಕ ಬೈಲೂರು ಬಾಲಚಂದ್ರ ರಾವ್‌ ಮತ್ತು ರಂಗತಜ್ಞ ಅನಿಲ್‌ ಕೆ. ಹೆಗ್ಡೆ ಅವರಿಗೆ ಸುವರ್ಣ ಕಲಾರತ್ನ ಬಿರುದನ್ನಿತ್ತು ಗೌರವಿಸಲಾಯಿತು. ಅಲ್ಲದೆ ಗಿರಿಜಾ ವೆಲ್ಫೆರ್‌ ಟ್ರಸ್ಟ್‌ ಖಾರ್‌ಘರ್‌ ಇದರ ನಿರ್ವಾಹಕ ವಸಂತ್‌ ಕುಂಜೂರು ಅವರನ್ನು ಸಮ್ಮಾನಿಸಲಾಯಿತು. ಮೇಳದ ವ್ಯವಸ್ಥಾಪಕ ಅಧ್ಯಕ್ಷ ಜಯಂತ್‌ ಅಮೀನ್‌, ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ ಮತ್ತು ಪ್ರಭಾಕರ ಎಸ್‌. ಹೆಗ್ಡೆ, ವಿ. ಕೆ. ಸುವರ್ಣ ಅಭಿಮಾನಿ ಬಳಗದ ಕಾರ್ಯದರ್ಶಿ ಜಗದೀಶ್‌ ಶೆಟ್ಟಿ ಪನ್ವೇಲ್‌ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನೃತ್ಯ ವಿದುಷಿ ಸಹನಾ ಭಾರದ್ವಾಜ್‌ ಮತ್ತು ಶಿಷ್ಯವೃಂದದವರಿಂದ ನೃತ್ಯ ವೈಭವ ಮತ್ತು ಶ್ರೀ ವಿನಾಯಕಯಕ್ಷಕಲಾ ತಂಡ ಇದರಕಲಾವಿದರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನಗೊಂಡಿತು. ಸಮಾರಂಭದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನುಮಾಡಲಾಗಿತ್ತು. ಶ್ರೀ ಶನೀಶ್ವರ

ಮಂದಿರ ನೆರೂಲ್‌ ಮತ್ತು ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್‌ ಟ್ರಸ್ಟ್‌ ನೆರೂಲ್‌ ಇವರ ಪ್ರಾಯೋಜಕತ್ವದಲ್ಲಿ ನಡೆದ ಸಮಾರಂಭದಲ್ಲಿ ಕಲಾಭಿಮಾನಿಗಳು,ತುಳು-ಕನ್ನಡಿಗರು ಪಾಲ್ಗೊಂಡುಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

 

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next