Advertisement

ಅವಿಭಜಿತ ಕುಂದಾಪುರ ತಾ.: 69 ಕೆರೆಗಳಿಗೆ ಮರುಜೀವ

09:50 AM Feb 08, 2023 | Team Udayavani |

ಕುಂದಾಪುರ: ಗ್ರಾಮೀಣ ಜನರ ಜೀವನೋಪಾಯಕ್ಕಾಗಿ ವರದಾನವಾಗಿರುವ ನರೇಗಾ ಯೋಜನೆಯು, ಇದೇ ಗ್ರಾಮಾಂತರ ಪ್ರದೇಶಗಳ ಜೀವನಾಡಿಯಾಗಿರುವ ಹತ್ತಾರು ಕೆರೆಗಳಿಗೆ ಕಾಯಕಲ್ಪ ನೀಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. 2022ನೇ ಸಾಲಿನಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ 69 ಕೆರೆಗಳ ಪುನಶ್ಚೇತನಗೊಳಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಕಳೆದ ವರ್ಷವಿವಿಧ ಗ್ರಾಮಗಳ ಒಟ್ಟು 48 ಕೆರೆಗಳನ್ನು
ಹಾಗೂ ಬೈಂದೂರು ತಾಲೂಕಿನ 21 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 2021 ರಲ್ಲಿ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಒಟ್ಟು 82 ಕೆರೆಗಳಿಗೆ ಮರುಜೀವ ನೀಡಲಾಗಿದೆ.

Advertisement

ಕುಂದಾಪುರ ತಾ: 48 ಕೆರೆ ಕುಂದಾಪುರ ತಾಲೂಕಿನ ಆಲೂರಲ್ಲಿ ಗರಿಷ್ಠ 8 ಕೆರೆ ಅಭಿವೃದ್ಧಿಪಡಿಸಿದ್ದು, ಹಕ್ಲಾಡಿ 6, ಬೀಜಾಡಿ, ಕಟ್‌ಬೆಲ್ತೂರು ತಲಾ 4, ಕಾಳಾವರ, ಬಳ್ಕೂರು ತಲಾ 3, ವಂಡ್ಸೆ 2, ತಲ್ಲೂರು, ಹೆಮ್ಮಾಡಿ, 74 ಉಳ್ಳೂರು, ಆನಗಳ್ಳಿ, ಗುಜ್ಜಾಡಿ, ಚಿತ್ತೂರು, ಗೋಪಾಡಿ, ಹಾಲಾಡಿ, ಹಂಗಳೂರು, ಹಾರ್ದಳ್ಳಿ – ಮಂಡಳ್ಳಿ, ಹೊಂಬಾಡಿ- ಮಂಡಾಡಿ, ಹಟ್ಟಿಯಂಗಡಿ, ಹೆಮ್ಮಾಡಿ, ಹೆಂಗವಳ್ಳಿ, ಕಂದಾವರ, ಕೆದೂರು, ಕುಂಭಾಶಿ, ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೆರೆ ಸೇರಿದಂತೆ ಒಟ್ಟು 48 ಕೆರೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಮರುಜೀವ ನೀಡಲಾಗಿದೆ.

ಬೈಂದೂರು ತಾ: 21 ಕೆರೆ ಬೈಂದೂರು ತಾಲೂಕಿನ ಹೇರೂರಲ್ಲಿ ಗರಿಷ್ಠ 7 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ನಾಡ-4, ನಾವುಂದ -3,
ಶಿರೂರು 2, ಬಿಜೂರು, ಉಪ್ಪುಂದ, ಮರವಂತೆ, ಕೊಲ್ಲೂರು, ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೆರೆ ಸೇರಿದಂತೆ ಒಟ್ಟು 21 ಕೆರೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಮರುಜೀವ ನೀಡಲಾಗಿದೆ.

ಗ್ರಾ.ಪಂ.ಗಳಿಗೆ ಸೂಚನೆ
ನರೇಗಾದಡಿ ಬೈಂದೂರು ತಾಲೂಕಿನಲ್ಲಿ ಅನೇಕ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆ ಮಾತ್ರವಲ್ಲದೆ ನದಿ ಹೂಳೆತ್ತುವ ಕಾರ್ಯ, ಮಳೆ ನೀರು ಕೊಯ್ಲುಗಳನ್ನು ಅಳವಡಿಸಲಾಗಿದೆ. ಇದರಿಂದ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿಗೂ ಸಹಾಯವಾಗಲಿದೆ. ಮಳೆಗಾಲದವರೆಗೆ ಗರಿಷ್ಠ ಕೆರೆಗಳನ್ನು ಅಭಿವೃದ್ಧಿಪಡಿಸಲು ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ.
ಭಾರತಿ, ಕಾರ್ಯನಿರ್ವಹಣಾಧಿಕಾರಿ, ಬೈಂದೂರು ತಾ.ಪಂ.

 

Advertisement

40 ಸಾವಿರ ಮಾನವ ದಿನ ಸೃಜನೆ

ಉಭಯ ತಾಲೂಕಿನಲ್ಲಿ ಈ 69 ಕೆರೆಗಳ ಪುನಶ್ಚೇತನಕ್ಕಾಗಿ ಒಟ್ಟಾರೆ 40,990 ಮಾನವ ದಿನಗಳ ಸೃಜನೆ ಮಾಡಲಾಗಿದೆ. ಈ ಪೈಕಿ ಕುಂದಾಪುರದಲ್ಲಿ 31,014 ಮಾನವ ದಿನಗಳು ಹಾಗೂ ಬೈಂದೂರಲ್ಲಿ 9,976 ಮಾನವ ದಿನಗಳ ಸೃಜನೆ ಗುರಿ ಸಾಧಿಸಲಾಗಿದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next