ರಾಮನಗರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುತ್ತಿರುವ ಕಾರಣ ಸೋಂಕಿತರ ಚಿಕಿತ್ಸೆಗೆ ಹೆಚ್ಚುವರಿ 660 ಬೆಡ್ ಸಜ್ಜುಗೊಳಿಸಲಾಗುತ್ತಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದರು. ಈ ಸಂಬಂಧ ತಾವು ಕೆಂಗೇರಿ ಬಳಿಯಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಕನಕಪುರ ತಾಲೂಕು ಹಾರೋಹಳ್ಳಿ ಸಮೀಪವಿರುವ ದಯಾನಂದ ಸಾಗರ್ ಆಸ್ಪ ತ್ರೆಗಳಲ್ಲಿ ಹೆಚ್ಚುವರಿ ಬೆಡ್ ಕಾದಿರಿಸುವಂತೆ ಆಸ್ಪತ್ರೆಗಳ ಮುಖ್ಯಸ್ಥರ ಬಳಿ ಚರ್ಚಿಸಿರುವು ದಾಗಿ ತಿಳಿಸಿದರು.
ಎರಡೂ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ರಾಮನಗರದ ಡೀಸಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆ ಯಲ್ಲಿ ಮಾತನಾಡಿ, ರಾಜರಾಜೇಶ್ವರಿ ಮೆಡಿ ಕಲ್ ಕಾಲೇಜು ಆಸ್ಪತ್ರೆಯಲ್ಲಿ 1,600 ಬೆಡ್ ಗಳ ಪೈಕಿ 600 ಬೆಡ್‌ಗಳನ್ನು ಜಿಲ್ಲೆಯ ಕೋವಿಡ್-19 ರೋಗಿಗಳಿಗೆ ಮೀಸಲಿಡಲು ಆಡಳಿತ ಒಪ್ಪಿದೆ. ಐಸಿಯು ವಾರ್ಡಿನಲ್ಲೂ 110 ಬೆಡ್‌ಗಳನ್ನು ಜಿಲ್ಲೆಯ ಸೋಂಕಿತರಿಗೆ ಮೀಸಲಿಡಲಾಗುವುದು.
ಅಲ್ಲಿ ವೆಂಟಿಲೇಟರ್ ಗಳ ವ್ಯವಸ್ಥೆಯೂ ಇದೆ. ರಾಜರಾಜರಾಜೇ ಶ್ವರಿ ಕಾಲೇಜು ಆಸ್ಪತ್ರೆ ಪ್ರಾಂಶುಪಾಲ ಡಾ.ನವೀನ್ ತಮ್ಮಲ್ಲಿರುವ ವೈದ್ಯರು, ನರ್ಸ್ ಗಳನ್ನು ನಿಯೋಜಿಸುವುದಾಗಿ ಭರವಸೆ ನೀಡಿ ದ್ದಾರೆ ಎಂದರು. ಹಾರೋಹಳ್ಳಿ ಬಳಿಯಿರುವ ದಯಾನಂದ ಸಾಗರ್ ಆಸ್ಪತ್ರೆ ಅಧ್ಯಕ್ಷ ಡಾ.ಹೇಮಚಂದ್ರ ಸಾಗರ್ ಅವರೊಂದಿಗೆ ತಾವು ಚರ್ಚೆ ನಡೆಸಿರು ವುದಾಗಿ, ಆ ಆಸ್ಪತ್ರೆಯಲ್ಲಿ ತಕ್ಷಣಕ್ಕೆ ಲಭ್ಯವಿರುವ 60 ಬೆಡ್ ಜಿಲ್ಲೆಯ ಕೋವಿಡ್-19 ಸೋಂಕಿತ ರೋಗಿಗಳಿಗೆ ಮೀಸಲಿಡಲು ಅವರ ಒಪ್ಪಿದ್ದಾರೆ ಎಂದು ಸಚಿವರು ತಿಳಿಸಿ ದರು. ಅಲ್ಲಿರುವ ಎಲ್ಲ ರೀತಿ ಸೌಲಭ್ಯ ಸೋಂಕಿತರ ಚಿಕಿತ್ಸೆಗೆ ವಿಸ್ತರಿಸುವುದಾಗಿ ಭರವಸೆ ದೊರೆತಿದೆ ಎಂದರು.
ಉಚಿತ ಚಿಕಿತ್ಸೆ ಸರ್ಕಾರದೊಂದಿಗೆ ಒಪ್ಪಂದ: ರಾಜರಾಜೇಶ್ವರಿ ಮತ್ತು ದಯಾನಂದ ಸಾಗರ್ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಜಿಲ್ಲೆಯ ಕೋವಿಡ್ 19 ಸೋಂಕಿತರಿಗಾಗಿ ದೊರೆಯುವ ಚಿಕಿತ್ಸೆ ಉಚಿತವಾಗಿದ್ದು, ಸರ್ಕಾರ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿ ಕೊಳ್ಳಲಿದೆ ಎಂದರು. ಜಿÇÉೆಯಲ್ಲಿರುವ ಗಂಭೀರ ಹಂತದ ರೋಗಿಗಳನ್ನು ಕೂಡಲೇ ಈ ಆಸ್ಪತ್ರೆಗಳಿಗೆ ಸ್ಥಳಾಂತರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದ್ದು, ಗಂಭೀರ ದಿನಗಳು ಎದುರಾದರೆ ಆಶ್ಚರ್ಯವಿಲ್ಲ. ಹೀಗಾಗಿ ಎಲ್ಲದಕ್ಕೂ ಸಜ್ಜಾಗಿರಿ ಎಂದು ಅಧಿ ಕಾರಿಗಳಿಗೆ ಸಲಹೆ ನೀಡಿದರು. ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಆಧ್ಯತೆ ಕೊಡಿ, ಅವಶ್ಯವಿದ್ದರೆ ಪೊಲೀಸ್ ಔಟ್‌ಪೋಸ್ಟ್ ತೆರೆಯಿರಿ ಎಂದು ಸೂಚನೆ ಕೊಟ್ಟರು.
ನಿಮ್ಮ ಸುರಕ್ಷತೆ ಮುಖ್ಯ, ಮೈ ಮರೆಯಬೇಡಿ: ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೈ ಮರೆಯಬಾರದು, ಕಾರಣ ನಿಮ್ಮ ಸುರಕ್ಷತೆ ಮುಖ್ಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಕ್ವಾರಂಟೈನ್ ಸಲುವಾಗಿ ಅಗತ್ಯ ಬಿದ್ದರೆ ಹೋಟೆಲ್ ಮತ್ತು ರೆಸಾಟ್ಗಳಲ್ಲಿಯೂ ವ್ಯವಸ್ಥೆ ಮಾಡಿ ಎಂದು ಡಿಸಿಎಂ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ತಕ್ಷಣಕ್ಕೆ 4 ಆ್ಯಂಬುಲೆನ್ಸ್‌ಗಳ ಅಗತ್ಯವಿದ್ದು, ಅದನ್ನು ಖರೀದಿ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.