Advertisement
ಜಿಲ್ಲಾ ಕೇಂದ್ರ ಗ್ರಂಥಾಲಯಗಳು ಈಗಾಗಲೇ ಆಧುನಿಕರಣಗೊಂಡಿದ್ದರೆ, ತಾಲೂಕುಮಟ್ಟದ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳು ಅಗತ್ಯ ಮೂಲ ಭೂತ ಸೌಲಭ್ಯ ಗಳಲ್ಲದೇ ಸೊರಗುತ್ತಿವೆ. ನಗರದ ನಿಲ್ದಾಣದ ಹತ್ತಿರ ಹಳೆ ನಗರ ಸಭೆಯ ಮೊದಲನೇ ಮಹಡಿಯಲ್ಲಿರುವ ಸಾರ್ವಜನಿಕ ಗ್ರಂಥಾಲಯ ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಅಲ್ಲದೆ, ಕಟ್ಟ ಡದ ಮೇಲ್ಛಾವ ಣಿ ಶಿಥಿ ಲ ಗೊಂಡು, ಆರ್‌ಸಿಸಿ ಉದುರಿ ಬೀಳುವ ಹಂತದಲ್ಲಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಒಳಪಡುವ ಇಲ್ಲಿನ ನಗರ ಕೇಂದ್ರ
Related Articles
Advertisement
ಓದುಗರು ಅಧಿಕ: ನಿತ್ಯ ಮುನ್ನೂರಕ್ಕೂ ಹೆಚ್ಚು ಓದು ಗರು ಸ್ಥಳ ದಲ್ಲಿ ಓದುವುದು ಸೇರಿದಂತೆ ಪುಸ್ತಕ ಗಳನ್ನು ಎರವಲು ಪಡೆಯುವುದು ಮಾಡುತ್ತಾರೆ. ಗ್ರಂಥಾಲಯ ಬಸ್ ನಿಲ್ದಾಣಕ್ಕೆ ಹತ್ತಿರ ಇರುವುದರಿಂದ ಶಾಲಾ-ಕಾಲೇಜ್ ವಿದ್ಯಾ ರ್ಥಿ ಗಳು ಸೇರಿ ದಂತೆ ಹಿರಿಯ ನಾಗರಿಕರು, ಯುವಕರು, ಗ್ರಂಥಾಲಯದ ಲಾಭ ಪಡೆಯುತ್ತಿದ್ದಾರೆ. ವಿಶೇಷವಾಗಿ ತಾಲೂಕಿನ ನಾನಾ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಬಂದು ಓದು ವುದು ಹಾಗೂ ಪುಸಕ್ತ ಎರವಲು ಪಡೆಯುವು ದಕ್ಕೆ ತುಂಬ ಅನುಕೂಲವಾಗುತ್ತಿದೆ. ಈ ಕಾರಣಕ್ಕಾಗಿ ಪ್ರಸ್ತುತ ಇರುವ ಕಟ್ಟಡದ ಪಕ್ಕದ ಲ್ಲಿ ಅಗತ್ಯ ಸೌಲಭ್ಯ ಹೊಂದಿರುವ ಸುಸಜ್ಜಿತ ಗ್ರಂಥಾಲಯ ತೆರೆಯಬೇಕು ಎಂಬುದು ಜಿಲ್ಲಾಧಿಕಾರಿಗಳ ಸೂಚನೆಯಾಗಿದೆ.
ಶಾಖಾ ಗ್ರಂಥಾಲಯಗ ಳು: ನಗರ ಕೇಂದ್ರಗ್ರಂಥಾಲಯದ ಅಡಿಯಲ್ಲಿ ನ ರದ ವಿವಿಧಡೆ ಒಟ್ಟು 6 ಶಾಖಾ ಗ್ರಂಥಾಲಯಗಳು ತಲೆ ಎತ್ತಿವೆ. ನಗ ರದ ಮಾರ್ಕಂಡೇಯ ದೇವಸ್ಥಾನದ ಬಳಿ ಇರುವ ಸಮುದಾಯ ಭವನ, ನಗರದ ಚಪ್ಪರದಳ್ಳಿ ಕಬ್ಬೇರು ಪೇಟೆ ಶಾಲೆ ಯಲ್ಲಿ ಹತ್ತಿರ, ಆರ್‌ಟಿಓ ಕಚೇರಿ ಹಿಂಭಾಗ, ಸಂಕ್ಲಾ ಪುರ, ಕೊಂಡನಾ ಯಕ ಹಳ್ಳಿ ಹಾಗೂ ಟಿ.ಬಿ. ಡ್ಯಾಂನಲ್ಲಿ ಒಟ್ಟು ಆರು ಶಾಖಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವು ಗಳಿಗೆ ಅಗತ್ಯ ಮೂಲ ಭೂತ ಸೌಲ ಭ್ಯಗಳ ಕೊರತೆ ಕಾಡುತ್ತಿದೆ.
-ಪಿ.ಸತ್ಯ ನಾರಾಯಣ