Advertisement

Zika Virus: ಪುಣೆಯಲ್ಲಿ 66 ಝಿಕಾ ಸೋಂಕು ಪ್ರಕರಣ ದೃಢ… ಸೋಂಕಿತರಲ್ಲಿ 26 ಗರ್ಭಿಣಿಯರು

03:59 PM Aug 07, 2024 | Team Udayavani |

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 66 ಮಂದಿಯಲ್ಲಿ ಝಿಕಾ ವೈರಸ್ ಇರುವುದು ದೃಢಪಟ್ಟಿದೆ. ಇದುವರೆಗೆ ನಾಲ್ವರು ರೋಗಿಗಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Advertisement

ಮೃತ ನಾಲ್ವರು ಅರವತ್ತೆಂಟರಿಂದ ಎಂಭತ್ತರ ನಡುವಿನ ವಯಸ್ಸಿನವರಾಗಿದ್ದು ಪ್ರಮುಖ ವಿಷಯವೆಂದರೆ ಮೃತಪಟ್ಟ ನಾಲ್ವರು ಕೇವಲ ಝಿಕಾ ಸೋಂಕಿನಿಂದ ಮೃತಪಟ್ಟಿಲ್ಲ ಬದಲಾಗಿ ವಯೋಸಹಜ ಕಾಯಿಲೆಯಿಂದ ನಾಲ್ವರು ಬಳಲುತ್ತಿದ್ದುದಾಗಿ ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಸದ್ಯ 66 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ 26 ಮಂದಿ ಗರ್ಭಿಣಿಯಾರೂ ಸೇರಿದ್ದಾರೆ ಎನ್ನಲಾಗಿದೆ, ಅವರನ್ನು ಹೆಚ್ಚಿನ ನಿಗಾದಲ್ಲಿ ಇರಿಸಲಾಗಿದೆ ಜೊತೆಗೆ ಉಳಿದ ರೋಗಿಗಳು ಗುಣಮುಖರಾಗುತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜೊತೆಗೆ ರೋಗ ಹರಡುವ ಹಿನ್ನೆಲೆಯಲ್ಲಿ ಪುಣೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಏನಿದು ಝಿಕಾ ವೈರಸ್ ?
ಝಿಕಾ ವೈರಸ್ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾವನ್ನು ಹರಡುವ ಅದೇ ಈಡಿಸ್ ಜಾತಿಯ ಸೊಳ್ಳೆಯಿಂದ ಹರಡುವ ರೋಗವಾಗಿದೆ. 1947 ರಲ್ಲಿ ಉಗಾಂಡಾದ ಕೋತಿಗಳಲ್ಲಿ ಝಿಕಾ ವೈರಸ್ ಅನ್ನು ಮೊದಲು ಪತ್ತೆಹಚ್ಚಲಾಗಿತ್ತು. ಆದರೆ ಇದು ಆಫ್ರಿಕಾ, ಏಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ದಕ್ಷಿಣ ಮತ್ತು ಮಧ್ಯ ಅಮೆರಿಕದ ಜನರ ಮೇಲೆ ಪರಿಣಾಮ ಬೀರುತಿತ್ತು.

Advertisement

ಲಕ್ಷಣಗಳು:
ಜ್ವರ, ದೇಹದ ಮೇಲೆ ಕೆಂಪು ಕಲೆಗಳು, ತಲೆನೋವು, ವಾಂತಿ ಮತ್ತು ಸಂಧಿವಾತ. ರೋಗಕಾರಕವು ದೇಹಕ್ಕೆ ಪ್ರವೇಶಿಸಿದ ನಂತರ ಮೂರನೇ ದಿನದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಗರ್ಭಿಣಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕಿಗೆ ಒಳಗಾಗುತ್ತಾರೆ. ಝಿಕಾ ವೈರಸ್ ಮಕ್ಕಳು ಮತ್ತು ವಯಸ್ಕರಲ್ಲಿ ನರದ ಸಮಸ್ಯೆಗಳಿಗೆ ಕಾರಣವಾಗಬಹುದು. ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ.

ಮುಂಜಾಗ್ರತ ಕ್ರಮ
ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸಬೇಕು. ಮನೆ ಒಳಾಂಗಣ ಹಾಗೂ ಹೊರಾಂಗಣ ಸ್ವಚ್ಛತೆ ಕಾಪಾಡುವುದು, ನೀರು ಸಂಗ್ರಹಣ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚುವುದು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next