Advertisement
ಪ್ರತಿ ರಾಜ್ಯೋತ್ಸವ ದಿನದಂದು ಕೋಟೆ ಮೇಲೆ ಮುಂಜಾವಿನಲ್ಲಿಯೇ ಕನ್ನಡಧ್ವಜಾರೋಹಣ ಮಾಡುವ ಸಂಪ್ರದಾಯವನ್ನು ಈ ಸಂಘಟನೆ ಮಾಡಿಕೊಂಡು ಬಂದಿದೆ. ಈ ಬಾರಿ 65ನೇ ರಾಜ್ಯೋತ್ಸವ ಆಗಿದ್ದರಿಂದ 65 ಅಡಿ ಉದ್ದದ ಧ್ವಜವನ್ನು ಸಂಘಟನೆ ಮುಖಂಡರು, ಯುವಕರುಸೇರಿ ಧ್ವಜಾರೋಹಣ ಮಾಡಿ ಕನ್ನಡತನ ಮೆರೆದಿದ್ದಾರೆ.
Related Articles
Advertisement
ಕುರುಗೋಡು: ನಾಡಿನ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಕನ್ನಡ ನಾಡಿನ ಪ್ರತಿಯೊಬ್ಬ ನಾಗರಿಕರು ಬದ್ಧರಾಗಬೇಕು ಅಂದಾಗ ಮಾತ್ರ ಕನ್ನಡಭಾಷೆ ಜೀವಂತವಾಗಿರಲು ಸಾಧ್ಯ ಎಂದು ಕುರುಗೋಡು ಪಿಎಸ್‌ಐ ಎಂ. ಕೃಷ್ಣಮೂರ್ತಿ ಹೇಳಿದರು.
ಅವರು ಭಾನುವಾರ ಪಟ್ಟಣದ ಮುಖ್ಯವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಕುರುಗೋಡು ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇತ್ತೀಚೆಗೆ ನಮ್ಮ ನಾಡಿನಲ್ಲಿ ಅನ್ಯಭಾಷೆಗಳ ಹಾವಳಿ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲರೂ ಭಾಷೆ ಉಳಿವಿಗಾಗಿ ಕನ್ನಡಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಕರೆ ನೀಡಿದರು. ಕರವೇ ಕುರುಗೊಡು ತಾಲೂಕು ಅಧ್ಯಕ್ಷ ಗುಡಿಸಿಲಿರಾಜ ಮತ್ತು ತಾಲೂಕು ಘಟಕದ ಉಪಾಧ್ಯಕ್ಷ ಕೆ. ಬಸವರಾಜ್ ಮಾತನಾಡಿ, ನಾಡಿನ ಇತಿಹಾಸ ಮತ್ತು ಪರಂಪರೆ ಬಗ್ಗೆ ವಿವರಿಸಿದರು.
10ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಪಡೆದ ವಿದ್ಯಾರ್ಥಿಗಳನ್ನು ಮತ್ತು ವಿಡಿಯೋ ಮೂಲಕ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಘಟಕದ ಗೌರವಾಧ್ಯಕ್ಷ ಹಂಪೆ ಬಸವರಾಜ್, ಕುರುಗೋಡು ಯುವ ಘಟಕ ಅಧ್ಯಕ್ಷ ಗೆಣಿಕೆಹಾಳು ವೀರೇಶ್, ಉಪಾಧ್ಯಕ್ಷ ಪಿ. ಸಿದ್ದಿಸಾಬ್, ಗಾಳೆಪ್ಪ, ಬ್ಲಾಕ್ ಅಧ್ಯಕ್ಷ ಬಂಗಿಮಲ್ಲಯ್ಯ, ಪುರಸಭೆ ಸದಸ್ಯ ನಾಗರಾಜ, ಸುಂಕಪ್ಪ, ಅಗಸರ ವೆಂಕಟೇಶ್, ಹೊನ್ನಪ್ಪ, ಸಿದ್ದಪ್ಪ, ರಾಮಣ್ಣ, ಸೇರಿದಂತೆ ಇತರೆ ಕರವೇ ಕಾರ್ಯಕರ್ತರು ಇದ್ದರು.