Advertisement

ಕಳೆದ 5ವರ್ಷಗಳಲ್ಲಿ 657 ಭದ್ರತಾ ಸಿಬಂದಿಗಳು ಆತ್ಮಹತ್ಯೆಯಿಂದ ಸಾವು

04:14 PM Aug 03, 2022 | Team Udayavani |

ನವದೆಹಲಿ :ಕಳೆದ ಐದು ವರ್ಷಗಳಲ್ಲಿ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಸೇರಿದ 657 ಸಿಬಂದಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೇ ಬುಧವಾರ ಹೇಳಿದ್ದಾರೆ.

Advertisement

2021 ರಲ್ಲಿ 153, 2020 ರಲ್ಲಿ 149, 2019 ರಲ್ಲಿ 133, 2018 ರಲ್ಲಿ 97 ಮತ್ತು 2017 ರಲ್ಲಿ 125 ಸಿಬಂದಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಅಥವಾ ಅರೆಸೇನಾ ಪಡೆಗಳಲ್ಲಿ CRPF, BSF, CISF, ITBP, SSB, ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಸೇರಿವೆ. ಈ ಪಡೆಗಳ ಒಟ್ಟು ಬಲ ಸುಮಾರು 10 ಲಕ್ಷದಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next