ದೇವನಹಳ್ಳಿ: ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಜಕಾರ್ತ, ದೋಹಾ, ಕೌಲಾಲಂಪುರ, ಮಾಲೆ ದೇಶಗಳಿಂದ ಸುಮಾರು 656 ಪ್ರಯಾಣಿಕರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಇಬ್ಬರಿಗೆ ಸೋಂಕು ಕಂಡು ಬಂದಿದೆ. ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಮಾಲ್ಡೀವ್ಸ್‌ನ ಮಾಲೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನ ನಿಲ್ದಾಣದಲ್ಲಿ ಗರ್ಭಿಣಿಯರು ಮಕ್ಕಳು ಸೇರಿ ದಂತೆ 152 ಮಂದಿ ಅನಿವಾಸಿ ಭಾರತೀ ಯರು ಬಂದಿದ್ದಾರೆ. 152 ಪ್ರಯಾಣಿಕರಲ್ಲಿ 2 ಗರ್ಭಿಣಿ ಯರು ಮತ್ತು 10 ವರ್ಷದ ಒಂದು ಮಗು ಸೇರಿದಂತೆ 132 ಪುರುಷರು ಮತ್ತು 20 ಮಹಿಳೆ ಯರು ಇದ್ದಾರೆ.
ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಪ್ರಯಾಣಿಕರ ತಪಾಸಣೆ ನಡೆಸಿದ್ದು, ಅದರಲ್ಲಿ ಇಬ್ಬರಿಗೆ ಕೋವಿಡ್ 19 ಸೋಂಕು ಕಂಡು ಬಂದ ಹಿನ್ನೆಲೆ ಯಲ್ಲಿ ಅವರನ್ನು ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಗೆ ಕ್ವಾರಂಟೈನ್‌ಗೆ ಕಳಿಸಲಾಗಿದೆ. ಕತಾರ್‌ನ ದೋಹಾದಿಂದ 10ನೇ ಏರ್ ಇಂಡಿಯಾ ವಿಮಾನದಲ್ಲಿ ಗರ್ಭಿಣಿಯರು ಮಕ್ಕಳೂ ಸೇರಿದಂತೆ 182 ಅನಿವಾಸಿ ಭಾರತೀ ಯರು ಬಂದಿದ್ದಾರೆ.
ಒಟ್ಟು 182 ಪ್ರಯಾಣಿಕರಲ್ಲಿ 10 ವರ್ಷದ ಒಳಗಿನ ಮಕ್ಕಳು 16, 127ಪುರುಷರು ಮತ್ತು 39 ಮಹಿಳೆಯರು ಇದ್ದಾರೆ. ಪ್ರಯಾಣಿಕರಲ್ಲಿ ಕೋವಿಡ್ 19 ಸೋಂಕು ಲಕ್ಷಣಗಳು ಕಂಡು ಬಂದಿಲ್ಲ. ಮಲೇಷ್ಯಾದ ಕೌಲಾಲಂಪುರನಿಂದ 11ನೇ ವಿಮಾನದಲ್ಲಿ 108 ಮಂದಿ ಅನಿ ವಾಸಿ ಭಾರತೀಯರು ಬಂದಿದ್ದಾರೆ. ಒಟ್ಟು 108 ಪ್ರಯಾಣಿಕರಲ್ಲಿ ಒಬ್ಬ ಗರ್ಭಿಣಿ ಇಬ್ಬರು ಮಕ್ಕಳು ಸೇರಿದಂತೆ ಪುರುಷರು 80, 28 ಮಹಿಳೆಯರಿದ್ದಾರೆ.
ಇಂಡೋನೇಷ್ಯಾದ ಜಕಾರ್ತ ದಿಂದ 12ನೇ ವಿಮಾನದಲ್ಲಿ 214 ಅನಿವಾಸಿ ಭಾರತೀಯರು ಇದ್ದಾರೆ. ತಜ್ಞ ವೈದ್ಯರು ಮತ್ತು ಸಿಬ್ಬಂದಿ 214 ಪ್ರಯಾಣಿಕರ ಅರೋಗ್ಯ ತಪಾಸಣೆ ನಡೆಸಿದ್ದು, ಪ್ರಯಾಣಿಕ ರಲ್ಲಿ ಕೋವಿಡ್ 19 ಸೋಂಕು ಲಕ್ಷಣಗಳು ಕಂಡು ಬಂದಿರುವುದಿಲ್ಲ. ಡೀಸಿ ಪಿ.ಎನ್.ರವೀಂದ್ರ ಮಾತನಾಡಿ, 4 ದೇಶಗಳಿಂದ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 656 ಪ್ರಯಾ ಣಿಕರು ಬಂದಿದ್ದಾರೆ.
ಎಲ್ಲ ಪ್ರಯಾಣಿಕರು 14 ದಿನಗಳ ಕ್ವಾರಂಟೈನ್‌ಗೆ ಹೋಟೆಲ್‌ಗಳಿಗೆ ಕಳಿಸಿಕೊಡಲಾಗಿದೆ. ಸರ್ಕಾರದ ಆದೇಶದಂತೆ ಪ್ರತಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು. ಅಪರ ಜಿಲ್ಲಾಧಿ ಕಾರಿ ಜಗದೀಶ ಕೆ. ನಾಯ್ಕ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ಪುರಸಭೆ ಮುಖ್ಯಾಧಿ ಕಾರಿ ಎ.ಎಚ್.ನಾಗ ರಾಜ್ ಮತ್ತಿತರರಿದ್ದರು.