ನವದೆಹಲಿ: ವಿದೇಶಿ ನಿಯಂತ್ರಿತ ಮೊಬೈಲ್ ಹ್ಯಾಂಡ್‌ಸೆಟ್ ಉತ್ಪಾದಕ ಕಂಪನಿ ಮತ್ತು ಅದಕ್ಕೆ ಸಂಬಂಧ ವಸ್ತುಗಳನ್ನು ಉತ್ಪಾದಿಸುವ ಸಂಸ್ಥೆಗಳ ಮುಖ್ಯಸ್ಥರ ನಿವಾಸಗಳ ಮೇಲೆ ಡಿ.21ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದೆ.
ಆ ಸಂದರ್ಭದಲ್ಲಿ 6,500 ಕೋಟಿ ರೂ. ದಾಖಲೆ ರಹಿತ ಆದಾಯ ಪತ್ತೆಹಚ್ಚಿದ್ದಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಶುಕ್ರವಾರ ತಿಳಿಸಿದೆ.
ಕರ್ನಾಟಕ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಮತ್ತು ದೆಹಲಿಯಲ್ಲಿನ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ:ಪಶ್ಚಿಮ ಬಂಗಾಲದ ವಾಯುಮಾಲಿನ್ಯಕ್ಕೆ ವಿದೇಶಗಳ ಗಾಳಿ ಕಾರಣ
ಎರಡು ಸಂಸ್ಥೆಗಳು ಸೌಮ್ಯಶುಲ್ಕ ನೆಪದಲ್ಲಿ ವಿದೇಶದಲ್ಲಿರುವ ತನ್ನ ಮೂಲ ಕಚೇರಿಗೆ 5,500 ರೂ.ಗೂ ಅಧಿಕ ಮೌಲ್ಯದ ಹಣ ರವಾನೆ ಮಾಡಿವೆ. ಅದಕ್ಕೆ ಸೂಕ್ತವಾದ ದಾಖಲೆಗಳಿಲ್ಲ. ಈ ಸಂಸ್ಥೆಗಳು ಮೊಬೈಲ್ ತಯಾರಿಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾವಸ್ತುಗಳಿಗೂ ಸರಿಯಾದ ದಾಖಲೆಗಳನ್ನು ಇಟ್ಟಿಲ್ಲ ಎಂದು ತಿಳಿಸಲಾಗಿದೆ.