Advertisement
ರಾಜ್ಯ ಸರಕಾರ ಈಗಾಗಲೇ ತಿಳಿಸಿರುವಂತೆ ಈ ವರ್ಷದಿಂದ ಆರಂಭವಾಗಿರುವ ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ಕಾಲೇಜುಗಳಲ್ಲಿ ತಲಾ 150 ಸೀಟುಗಳು ಲಭ್ಯವಾಗಲಿವೆ. ಜತೆಗೆ ಇತರ ಖಾಸಗಿ ಕಾಲೇಜುಗಳು ತನ್ನ ಇನ್‌ಟೇಕ್ (ಸೀಟು) ಹೆಚ್ಚಿಸಿದ್ದು, ಅದರಲ್ಲಿ 200 ಸೀಟುಗಳು ದೊರೆಯಲಿದ್ದು, ಒಟ್ಟಾರೆ 650 ಸೀಟುಗಳು ಹೆಚ್ಚಳವಾಗಿವೆ. ಸ್ನಾತಕೋತ್ತರ ಪದವಿಯಲ್ಲಿ 216 ಸೀಟುಗಳು ಹೆಚ್ಚುವರಿಯಾಗಿ ದೊರೆಯುತ್ತಿವೆ.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10 ಶುಲ್ಕ ಹೆಚ್ಚಳ ಸಂಬಂಧ ಶುಕ್ರವಾರ ಖಾಸಗಿ ಕಾಲೇಜುಗಳು ಮತ್ತು ಸರಕಾರ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ ಸರಕಾರ ಮತ್ತು ಖಾಸಗಿ ಕಾಲೇಜುಗಳು ಇನ್ನೂ ಒಮ್ಮತಕ್ಕೆ ಬಾರದ ಕಾರಣ ಸಹಿಯಾಗಿಲ್ಲ. ಖಾಸಗಿ ಕಾಲೇಜುಗಳು ಶೇ.15 ಹೆಚ್ಚಳಕ್ಕೆ ಪಟ್ಟು ಹಿಡಿದಿರುವ ಕಾರಣ ವಿಳಂಬವಾಗುತ್ತಿದೆ. ಹೀಗಾಗಿ ಶುಲ್ಕ ವಿಚಾರವಾಗಿ ಹಗ್ಗಜಗ್ಗಾಟ ಮುಂದುವರಿದಿದೆ. ಇಂದು ಪಿಜಿಇಟಿ ದಾಖಲಾತಿ ಪರಿಶೀಲನೆ
ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿ ಈ ವರೆಗೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳದ ವಿದ್ಯಾರ್ಥಿಗಳಿಗಾಗಿ ದಿನಾಂಕವನ್ನು ವಿಸ್ತರಿಸಿದೆ. ಅ.1 ಮತ್ತು 3ರಂದು ಕೆಇಎ ಬೆಂಗಳೂರು ಕಚೇರಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 4.15ರ ವರೆಗೆ ದಾಖಲಾತಿ ಪರಿಶೀಲನೆ ನಡೆಸಲಿದೆ ಎಂದು ಕೆಇಎ ಪ್ರಕಟನೆ ತಿಳಿಸಿದೆ.