Advertisement

60 ವಾರ್ಡ್‌ಗಳಲ್ಲಿ 65 ಸಾವಿರ ಎಲ್‌ಇಡಿ ಬೀದಿದೀಪ

11:20 PM Mar 11, 2020 | Team Udayavani |

ಮಹಾನಗರ: ನಗರದ 60 ವಾರ್ಡ್‌ಗಳಲ್ಲಿ 65 ಸಾವಿರ ಎಲ್‌ಇಡಿ ಬೀದಿದೀಪಗಳ ಅಳವಡಿಕೆಗೆ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ತಯಾರಿ ನಡೆಸಲಾಗುತ್ತಿದೆ. ಸರಕಾರಿ-ಖಾಸಗಿ ಸಹಭಾಗಿತ್ವದಡಿಯಲ್ಲಿ 62.5 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಆರು ತಿಂಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಹಂತಹಂತವಾಗಿ ನಗರದಲ್ಲಿ ಹೊಸ ಕಾಮಗಾರಿಗಳು ನಡೆಯುತ್ತಿವೆ.
ಉತ್ತಮ ರಸ್ತೆಯೊಂದಿಗೆ ರಾತ್ರಿ ಹೊತ್ತಿ ನಲ್ಲಿ ರಸ್ತೆಯಲ್ಲಿ ಸಂಚರಿಸಲು ಪ್ರಖರವಾದ ಬೆಳಕೂ ಅಗತ್ಯ. ಅದಕ್ಕಾಗಿಯೇ ರಾತ್ರಿ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ಸ್ಮಾರ್ಟ್‌ ಸಿಟಿಯಡಿ ಯೋಜನೆ ರೂಪಿಸಲಾಗಿದೆ.

ನಗರದಲ್ಲಿ ರಾತ್ರಿ ಸಂಚಾರಕ್ಕೆ ಹೆಚ್ಚು ಪ್ರಕಾಶಮಾನವಾದ ಬೆಳಕು ಸಿಗುವ ಮತ್ತು ವಿದ್ಯುತ್‌ ಉಳಿತಾಯದ ಉದ್ದೇಶದಿಂದ ಎಲ್ಲ 60 ವಾರ್ಡ್‌ಗಳಲ್ಲಿಯೂ ಎಲ್‌ಇಡಿ ಬಲ್ಬ್ಗಳ ಅಳವಡಿಕೆಗೆ ಸ್ಮಾರ್ಟ್‌ ಸಿಟಿ ಪ್ರಮುಖರು ಮುಂದಾಗಿದ್ದಾರೆ. ಈಗಾಗಲೇ ಇದರ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಸ್ಮಾರ್ಟ್‌ಸಿಟಿ ಮಂಡಳಿಗೆ ಕಳುಹಿಸಿಕೊಡಲಾಗಿದೆ. ಕೆಲಸ ಆರಂಭಕ್ಕೆ ಮಂಡಳಿಯಿಂದ ವರ್ಕ್‌ ಆರ್ಡರ್‌ ಸಿಕ್ಕಿದ ಅನಂತರ ಕಾಮಗಾರಿ ಆರಂಭವಾಗಲಿದೆ. ಒಟ್ಟು ಪ್ರಕ್ರಿಯೆಗೆ ಆರು ತಿಂಗಳು ಬೇಕಾಗಬಹುದು ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

5 ಸಾವಿರ ಎಲ್‌ಇಡಿ ಬಲ್ಬ್ ಅಳವಡಿಕೆ
65 ಸಾವಿರ ಎಲ್‌ಇಡಿ ಬಲ್ಬ್ಗಳ ಪೈಕಿ 5 ಸಾವಿರ ಬಲ್ಬ್ಗಳನ್ನು ಈ ಹಿಂದೆಯೇ ಅಳವಡಿಸಲಾಗಿದ್ದು, ಪ್ರಸ್ತುತ 60 ವಾರ್ಡ್‌ನ ಅಲ್ಲಲ್ಲಿ ಈ ಬಲ್ಬ್ಗಳು ಬೆಳಗುತ್ತಿವೆ. ಈ 5 ಸಾವಿರ ಬಲ್ಬ್ಗಳನ್ನು ಹೊರತುಪಡಿಸಿ ಉಳಿದ ಈಗಿರುವ ಹಳೆಯ ಬಲ್ಬ್ಗಳನ್ನು ಸಂಪೂರ್ಣ ತೆಗೆದು ಹೊಸ ಎಲ್‌ಇಡಿ ಬಲ್ಬ್ಗಳನ್ನು ಹಾಕಲಾಗುತ್ತದೆ. ಹೊಸ ಬಲ್ಬ್ಗಳು ಶೇ. 50ರಷ್ಟು ಕಡಿಮೆ ವ್ಯಾಟ್‌ ಸಾಮರ್ಥ್ಯ ಹೊಂದಿದ್ದು, ಹಳೆಯ ಬಲ್ಬ್ಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿ ಬೆಳಕು ನೀಡಲಿವೆ.

ಶೇ. 50ರಷ್ಟು ವಿದ್ಯುತ್‌ ಉಳಿತಾಯ
ಎಲ್‌ಇಡಿ ಬಲ್ಬ್ಗಳನ್ನು ಬೀದಿದೀಪಗಳಾಗಿ ಅಳವಡಿಕೆ ಮಾಡುವುದರಿಂದ ಸಾಮಾನ್ಯವಾಗಿ ಶೇ. 50ರಷ್ಟು ವಿದ್ಯುತ್‌ ಉಳಿತಾಯ ವಾಗುತ್ತದೆ. ಆದರೆ ನಗರದ ಹವಾಗುಣ ಸ್ವಲ್ಪ ಮಟ್ಟಿನ ವ್ಯತಿರಿಕ್ತತೆ ಹೊಂದಿರುವುದರಿಂದ ಸ್ವಲ್ಪ ಕಡಿಮೆ ವಿದ್ಯುತ್‌ ಉಳಿತಾಯ ಆಗಬಹುದು ಎನ್ನುತ್ತಾರೆ ಅಧಿಕಾರಿಗಳು. ವಿದ್ಯುತ್‌ ಉಳಿತಾಯ ಮತ್ತು ರಾತ್ರಿ ಹೊತ್ತಿನಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಬೆಳಕು ನೀಡುವುದು ಎಲ್‌ಇಡಿ ಅಳವಡಿಕೆಯ ಉದ್ದೇಶವಾಗಿದೆ.

Advertisement

6 ತಿಂಗಳಲ್ಲಿ ಪೂರ್ಣ
ಸ್ಮಾರ್ಟ್‌ಸಿಟಿಯಡಿಯಲ್ಲಿ 60 ಸಾವಿರ ಎಲ್‌ಇಡಿ ಬಲ್ಬ್
ಗಳನ್ನು ಪಾಲಿಕೆಯ 60 ವಾರ್ಡ್‌ಗಳಲ್ಲಿ ಅಳವಡಿಸಲಾಗುತ್ತಿದೆ. ಈ ಕೆಲಸವು ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಎಲ್‌ಇಡಿ ಬಲ್ಬ್ ಅಳವಡಿಕೆ ಸಂಬಂಧ ಈಗಾಗಲೇ ಟೆಂಡರ್‌ ಆಗಿದ್ದು, ಮಂಡಳಿಗೆ ಕಳುಹಿಸಿಕೊಡಲಾಗಿದೆ. ಕೆಲವೇ ಸಮಯದ ವರ್ಕ್‌ ಆರ್ಡರ್‌ ದೊರಕಲಿದೆ. ಮುಂದಿನ ಆರು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ.
– ಮೊಹಮ್ಮದ್‌ ನಝೀರ್‌, ಸ್ಮಾರ್ಟ್‌ಸಿಟಿ ನಿರ್ದೇಶಕರು

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next