Advertisement

ಕಾಗಿಣಾ ಚತುಷ್ಪಥ ಹೆದ್ದಾರಿಗೆ 65 ಕೋಟಿ

03:00 PM Mar 17, 2022 | Team Udayavani |

ಶಹಾಬಾದ: ನಗರದ ಕಾಗಿಣಾ ಸೇತುವೆ ಮೇಲೆ ಹಾಳಾದ ರಸ್ತೆ, ಮುರಿದು ಬಿದ್ದ ತಡೆಗೋಡೆ, ಕಿರಿದಾದ ರಸ್ತೆ ಮೇಲೆ ನೀರಿನ ಪೈಪ್‌, ರಸ್ತೆ ಮಧ್ಯೆ ಗುಂಡಿಗಳಿಗೆ ಈಗ ಶಾಶ್ವತ ಪರಿಹಾರ ದೊರಕಿದೆ.

Advertisement

ತಾಲೂಕಿನ ಶಹಾಬಾದ-ವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-150ಕ್ಕೆ ಸಂಬಂಧಿ ಸಿದಂತೆ ಶಂಕರವಾಡಿ ಸಮೀಪ ನಿರ್ಮಿಸಲಾಗಿರುವ ಸೇತುವೆಗೆ ಹೊಸ ಸೇತುವೆ, ಅದಕ್ಕೆ ಹೊಂದಿಕೊಂಡಿರುವಂತೆ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್‌ ಗಡ್ಕರಿ 65 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ.

ಕಾಗಿಣಾ ಸೇತುವೆಗೆ 1968ರಲ್ಲಿ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ವೀರೇಂದ್ರ ಪಾಟೀಲ ಅವರ ಅವ ಧಿಯಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ನಿರ್ವಹಣೆ ಕೊರತೆಯಿಂದ ಸೇತುವೆ ಸಾರ್ವಜನಿಕರ ಜೀವಕ್ಕೆ ಕುತ್ತಾಗಿ ಪರಿಣಮಿಸಿತ್ತು. ಐವತ್ತು ಅಡಿ ಅಗಲದ ರಾಷ್ಟ್ರೀಯ ಹೆದ್ದಾರಿಗೆ ಹತ್ತಡಿ ಅಗಲದ ಸೇತುವೆ ಇದ್ದು, ಮಧ್ಯದಲ್ಲಿ ಕಂದಕಗಳು, ನೀರಿನ ಪೈಪ್‌ ಗಳು, ಅಲ್ಲದೇ ತಡೆಗೋಡೆ ಇಲ್ಲದೆ ಸೇತುವೆ ಅಪಾಯಕ್ಕೆ ಆಹ್ವಾನಿಸುವಂತಿತ್ತು. ಪ್ರವಾಹ ಬಂದಾಗ ಸಂಪರ್ಕ ಕಡಿತಗೊಳ್ಳುತ್ತಿತ್ತು. ಈಗ ಇದಕ್ಕೆಲ್ಲಾ ಮುಕ್ತಿ ಸಿಕ್ಕಂತಾಗಿದೆ.

ಈಗಾಗಲೇ ಈ ಸೇತುವೆ ಮೇಲಿಂದ ಹಲವಾರು ವಾಹನಗಳು ನದಿಗೆ ಬಿದ್ದಿವೆ. ಹಲವಾರು ಸಾವು, ನೋವುಗಳು ಉಂಟಾಗಿವೆ. ಈಗ ರಾಷ್ಟ್ರೀಯ ಹೆದ್ದಾರಿಯ ಸುರ್ಪದಿಗೆ ಬಂದರೂ ಯಾವುದೇ ಕ್ರಮ ಕೈಗೊಳ್ಳದ್ದಕ್ಕೆ ಸಾರ್ವಜನಿಕರು ಅಸಮಾಧಾನಗೊಂಡಿದ್ದರು. ಈ ಕುರಿತು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಈಗ ಇದಕ್ಕೆ ಮುಕ್ತಿ ಸಿಕ್ಕಂತಾಗಿದೆ.

ಶಾಸಕರು ಮುತುವರ್ಜಿ ವಹಿಸಿ ನಿತೀನ್‌ ಗಡ್ಕರಿ, ಡಾ| ಸಂಸದ ಉಮೇಶ ಜಾಧವ ಗಮನಕ್ಕೆ ತಂದು ಸುಮಾರು 65 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಇದರಿಂದ ನಗರದ ಕಾಗಿಣಾ ನದಿಗೆ ಹೊಸ ಸೇತುವೆ ಹಾಗೂ ಚತುಷ್ಪತ ಹೆದ್ದಾರಿ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ನಡೆಯಲಿದ್ದು, ಬಹುದಿನಗಳ ಕನಸು ನನಸಾಗಲಿದೆ.

Advertisement

ಹದಗೆಟ್ಟ ರಸ್ತೆ ಮತ್ತು ತಡೆ ಗೋಡೆಯಿಲ್ಲದ ಸೇತುವೆ ಸಂಚಾರಕ್ಕೆ ನಾಗರಿಕರು ಜೀವಭಯದಿಂದಲೇ ಪ್ರಯಾಣಿಸುವಂತೆ ಆಗಿತ್ತು. ಈ ಬಗ್ಗೆ ಹಲವಾರು ಜನರು ದೂರು ಸಲ್ಲಿಸುತ್ತಿದ್ದರು. ಇದನ್ನು ಮನಗಂಡು ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆ. ಇದನ್ನು ಮನಗಂಡು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್‌ ಗಡ್ಕರಿ ಅನುದಾನ ಒದಗಿಸಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. -ಬಸವರಾಜ ಮತ್ತಿಮಡು, ಶಾಸಕ

ನದಿಗೆ ನಿರ್ಮಿಸಿದ ಸೇತುವೆ ಹಳೆಯದಾಗಿ ಅಭದ್ರತೆಯಿಂದ ಕೂಡಿತ್ತು. ಈಗ ಹೊಸ ಸೇತುವೆ ಇದಕ್ಕೆ ಹೊಂದಿ ಕೊಂಡಿರುವಂತೆ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ಒದಗಿಸಲು ಕಾರಣರಾದ ಕೇಂದ್ರ ಸಚಿವ ನಿತೀನ್‌ ಗಡ್ಕರಿ, ಸಂಸದ ಉಮೇಶ ಜಾಧವ ಹಾಗೂ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಕೃತಜ್ಞತೆ ಸಲ್ಲಿಸುತ್ತೆವೆ. -ಅಣವೀರ ಇಂಗಿನಶೆಟ್ಟಿ ಅಧ್ಯಕ್ಷ, ಬಿಜೆಪಿ ಮಂಡಲ, ಶಹಾಬಾದ

Advertisement

Udayavani is now on Telegram. Click here to join our channel and stay updated with the latest news.

Next