Advertisement

ಭೋಪಾಲ್‌ನಲ್ಲಿ 64 ತಬ್ಲಿಘಿಗಳ ಬಂಧನ ; ಮಧ್ಯಪ್ರದೇಶ ಪೊಲೀಸರ ಕಾರ್ಯಾಚರಣೆ

02:55 AM May 17, 2020 | Team Udayavani |

ಭೋಪಾಲ್‌: ವಿದೇಶೀಯರ ಕಾಯಿದೆ ಉಲ್ಲಂಘಿಸಿ, ವಿವಿಧ ಧಾರ್ಮಿಕ ಸಮಾವೇಶಗಳಲ್ಲಿ ಪಾಲ್ಗೊಂಡ ತಬ್ಲಿಘಿ ಜಮಾಅತ್‌ನ 64 ವಿದೇಶೀಯರನ್ನು ಭೋಪಾಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಇದಕ್ಕೂ ಮುನ್ನ ವೀಸಾ ನಿಯಮ ಉಲ್ಲಂಘನೆ ಆರೋಪದಡಿ ಭೋಪಾಲ್‌ನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಇವರ ವಿರುದ್ಧ 7 ಪ್ರಕರಣಗಳು ದಾಖಲಾಗಿದ್ದವು.

ಇವರು ದಿಲ್ಲಿಯ ನಿಜಾಮುದ್ದೀನ್‌ ನಲ್ಲಿ ನಡೆದಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದರೆ, ಇಲ್ಲವೇ ಎಂಬುದು ತಿಳಿದು ಬಂದಿಲ್ಲ. ಆದರೆ, ಪ್ರವಾಸಿ ವೀಸಾದಡಿ ಭಾರತಕ್ಕೆ ಆಗಮಿಸಿರುವ ಇವರು, ಧಾರ್ಮಿಕ ಸಮಾವೇಶಗಳಲ್ಲಿ ಪಾಲ್ಗೊಳ್ಳುವಂತಿಲ್ಲ.

ಸ್ಥಳೀಯ ನ್ಯಾಯಾಲಯ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಶುಕ್ರವಾರ ಇವರನ್ನು ಬಂಧಿಸಲಾಗಿದೆ.
ಕಿರ್ಗಿಸ್ಥಾನ್‌, ಉಜ್ಬೇಕಿಸ್ಥಾನ್‌, ಕಜಕಿಸ್ಥಾನ್‌, ತಾಂಜಾನಿಯಾ, ದಕ್ಷಿಣ ಆಫ್ರಿಕಾ, ಮ್ಯಾನ್ಮಾರ್‌ ಹಾಗೂ ಇತರ ದೇಶಗಳಿಂದ ಇವರು ಆಗಮಿಸಿದ್ದಾರೆ.

ಬಂಧಿತರಲ್ಲಿ ಕೆಲವರಿಗೆ ಈ ಹಿಂದೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಬಂಧಿತರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

66 ಮಂದಿಗೆ ಮಾತ್ರ ಕೋವಿಡ್ ಸೋಂಕು
ಈ ಮಧ್ಯೆ, ದಿಲ್ಲಿಯಲ್ಲಿ ಮಾತನಾಡಿದ ಜಮಾಯತ್‌ ಉಲೆಮಾ-ಎ- ಹಿಂದ್‌ನ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ, ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ನಡೆದಿದ್ದ ಸಮಾವೇಶದ ವೇಳೆ 47 ರಾಷ್ಟ್ರಗಳಿಂದ ಆಗಮಿಸಿದ್ದ ಸುಮಾರು 1,640ಕ್ಕೂ ಹೆಚ್ಚು ವಿದೇಶಿ ತಬ್ಲಿಘಿ ಜಮಾಯತ್‌ನ ಸದಸ್ಯರು ಭಾರತದಲ್ಲಿದ್ದರು.

ಆ ಪೈಕಿ, ಕೇವಲ 64 ಮಂದಿಯಲ್ಲಿ ಮಾತ್ರ ಕೋವಿಡ್ ಸೋಂಕು ದೃಢಪಟ್ಟಿದೆ. ಇನ್ನಿಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next