ಉತ್ತರಪ್ರದೇಶ : ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದೆ ಇದನ್ನು ಕಂಡು ಸ್ವತಃ ಆಸ್ಪತ್ರೆಯ ವೈದ್ಯರೇ ದಂಗಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ವೈದ್ಯರೇ ಮೂಗಿನ ಮೇಲೆ ಕೈ ಇಟ್ಟುಕೊಂಡಿದ್ದಾರೆ.
ಭೋಪಾಡ ರಸ್ತೆಯ ಇವಾನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಹೊಟ್ಟೆಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 63 ಸ್ಟೀಲ್ ಚಮಚ ಪತ್ತೆಯಾಗಿದೆ, ಇದನ್ನು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಘಟನೆಯ ವಿವರ : ಮನ್ಸೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಅಂದ ಹಾಗೆ ವಿಜಯ್ ಮನ್ಸೂರ್‌ಪುರ ಪ್ರದೇಶದ ಬೋಪಾಡಾ ಗ್ರಾಮದ ನಿವಾಸಿ ವಿಜಯ್ ಡ್ರಗ್ ವ್ಯಸನಿಯಾಗಿದ್ದರು, ಮನೆಯವರು ಎಷ್ಟೇ ಪ್ರಯತ್ನ ಪಟ್ಟರೂ ವಿಜಯ್ ನನ್ನು ಡ್ರಗ್ಸ್ ನಿಂದ ದೂರ ಮಾಡಲು ಸಾಧ್ಯವಾಗಲಿಲ್ಲ, ಕೊನೆಗೆ ಮನೆಯವರು ವಿಜಯ ನನ್ನು ಶಾಮ್ಲಿ ಜಿಲ್ಲೆಯಲ್ಲಿರುವ ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಿದ್ದಾರೆ ಅಲ್ಲಿ ಸುಮಾರು ಐದು ತಿಂಗಳು ಚಿಕಿತ್ಸೆ ಪಡೆದ ವೇಳೆ ವಿಜಯ್ ನ ಆರೋಗ್ಯ ಹದಗೆಡಲು ಆರಂಭವಾಗಿದೆ ವಿಪರೀತ ಹೊಟ್ಟೆನೋವು, ಹೀಗೆ ನಾನಾ ಸಮಸ್ಯೆಗಳು ಕಾಡಲಾರಂಭಿಸಿದೆ.
ಈ ವೇಳೆ ಕುಟುಂಬಸ್ಥರು ವಿಜಯ್ ನನ್ನು ಮುಜಾಫರ್‌ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ವಿಜಯ್ ನನ್ನು ಎಲ್ಲಾ ರೀತಿಯಲ್ಲೂ ತಪಾಸಣೆ ನಡೆಸಿದ್ದಾರೆ ಆದರೆ ಯಾವುದೇ ಸಮಸ್ಯೆ ಕಾಣಲಿಲ್ಲ ಕೊನೆಗೆ ಹೊಟ್ಟೆಯ ಸ್ಕ್ಯಾನಿಂಗ್ ಮಾಡಿ ರಿಪೋರ್ಟ್ ನೋಡಿದಾಗ ವೈದ್ಯರೇ ಒಮ್ಮೆ ದಂಗಾಗಿದ್ದಾರೆ, ಯಾಕೆಂದರೆ ವಿಜಯ್ ನ ಹೊಟ್ಟೆಯಲ್ಲಿ ಕಂಡುಬಂದದ್ದು ಸ್ಟೀಲ್ ಚಮಚಗಳು, ಇನ್ನೇನು ಶಸ್ತ್ರ ಚಿಕಿತ್ಸೆ ಮಾಡಿ ಚಮಚ ಹೊರತೆಗೆಯಬೇಕಾದರೆ ವೈದ್ಯರೇ ಸುಸ್ತು ಆಗಿದ್ದಾರೆ.
ಅಂದಹಾಗೆ ಈತನ ಹೊಟ್ಟೆಯಲ್ಲಿದ್ದದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 63 ಚಮಚ.. ವೈದ್ಯರಿಗೆ ಒಂದು ಕಡೆ ಅಚ್ಚರಿ, ಇನ್ನೊಂದು ಕಡೆ ಇಷ್ಟೊಂದು ಚಮಚ ಹೊಟ್ಟೆಯೊಳಗೆ ಹೇಗೆ ಬಂತೆಂಬ ಯಕ್ಷ ಪ್ರಶ್ನೆ,
ಇವೆಲ್ಲದರ ನಡುವೆ ಕುಟುಂಬಸ್ಥರು ವ್ಯಸನಮುಕ್ತ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ನನ್ನ ಮಗನಿಗೆ ಸರಿಯಾದ ಆಹಾರ ನೀಡದೆ ಬಲವಂತವಾಗಿ ಸ್ಟೀಲ್ ಚಮಚ ಬಾಯಿಗೆ ತುರುಕಿಸಿ ಹಿಂಸೆ ನೀಡಿದ್ದಾರೆ ಹೀಗಾಗಿ ನನ್ನ ಮಗನ ಅರೋಗ್ಯ ಹದಗೆಟ್ಟಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಕುರುಗೋಡು: ಪ್ರತಿಯೊಬ್ಬರೂ ಸಂವಿಧಾನತ್ಮಕ ಹಕ್ಕು ಪಡೆಯಲು ಮುಂದಾಗಿ: ನಾಗಪ್ಪ
ವ್ಯಕ್ತಿಯ ಸ್ಥಿತಿ ಗಂಭೀರ :
ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಚಮಚ ಹೊರತೆಗೆದರೂ ಅರೋಗ್ಯ ಸ್ಥಿತಿ ಮಾತ್ರ ಗಂಭೀರವಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೇಳಿದ್ದಾರೆ.
ಶಸ್ತ್ರ ಚಿಕಿತ್ಸೆ ಮೂಲಕ ಸ್ಟೀಲ್ ಚಮಚ ಹೊರಬಂದಿದೆ ಸರಿ ಆದರೆ ಹೊಟ್ಟೆಯೊಳಗೆ ಹೋಗಿರುವ ವಿಚಾರ ಮಾತ್ರ ಇನ್ನೂ ನಿಗೂಢ, ಅದನ್ನು ಕೇಳುವ ಎಂದರೆ ವ್ಯಕ್ತಿ ಮಾತನಾಡುವ ಸ್ಥಿತಿಯಲ್ಲಿಲ್ಲ , ಇನ್ನೇನಿದ್ದರೂ ವ್ಯಕ್ತಿ ಚೇತರಿಸಿಕೊಂಡ ಬಳಿಕವಷ್ಟೇ ವಿಷಯ ಬೆಳಕಿಗೆ ಬರಬೇಕಷ್ಟೆ.