Advertisement

ಮೊದಲ ಸ್ಟ್ಯಾಂಪ್ ಗೆ 62 ಕೋಟಿ ರೂ!

12:40 AM Oct 27, 2021 | Team Udayavani |

ಅಂಚೆ ಸ್ಟ್ಯಾಂಪ್ ಬೆಲೆ ಕಡಿಮೆಯಿರುತ್ತದೆ. ಆದರೆ ಇಲ್ಲಿರುವ ಅಂಚೆ ಸ್ಟ್ಯಾಂಪ್ ನ ಬೆಲೆ ಬರೋಬ್ಬರಿ 62 ಕೋಟಿ ರೂ. ವಿಶ್ವದ ಮೊದಲ ಸ್ಟ್ಯಾಂಪ್ ಅನ್ನು 60 ಕೋಟಿ ರೂ.ಗಳಿಗೂ ಅಧಿಕ ಬೆಲೆಗೆ ಹರಾಜು ಕೂಗಲಾಗುತ್ತಿದೆ.

Advertisement

“ಪೆನ್ನಿ ಬ್ಲಾಕ್‌ ಸ್ಟ್ಯಾಂಪ್ ‘ ಅನ್ನು 1840ರಲ್ಲಿ ಬಳಕೆ ಮಾಡಲಾಗಿತ್ತಂತೆ. ಸ್ಕಾಟ್‌ಲ್ಯಾಂಡ್‌ನ‌ ರಾಜಕಾರಣಿಯಾಗಿದ್ದ ರಾಬರ್ಟ್‌ ವೆಲ್ಲೇಸ್‌ ಹೆಸರಿನ ವ್ಯಕ್ತಿ, ದಾಖಲೆಯೊಂದರ ಮೇಲೆ ಈ ಸ್ಟಾಂಪ್‌ನ್ನು ಅಂಟಿಸಿ ಪೋಸ್ಟ್‌ ಮಾಡಿದ್ದರಂತೆ. ದಾಖಲೆ 1840ರ ಎಪ್ರಿಲ್‌ 10ನ್ನು ದಿನಾಂಕವಾಗಿ ನಮೂ ದಿಸಲಾಗಿದೆ.

ವಿಶ್ವದಲ್ಲಿ ಮೊದಲು ಮುದ್ರಣವಾದ ಸ್ಟಾಂಪ್‌ ಗ ಸ್ಟ್ಯಾಂಪ್ ಪೇಪರ್‌ ಶೀಟ್‌ನ 1 ಸ್ಟಾಂಪ್‌ ಇದೆಂದು ಹೇಳಲಾಗಿದೆ. ಅದೇ ಶೀಟ್‌ನ ಇನ್ನೆರೆಡು ಸ್ಟಾಂಪ್‌ಗಳು ಬ್ರಿಟಿಷ್‌ ಪೋಸ್ಟಲ್‌ ಮ್ಯೂಸಿಯಂನಲ್ಲಿವೆ. ಅಲನ್‌ ಹೆಸರಿನವರು ಮಾಲೀಕತ್ವದಲ್ಲಿರುವ ಸ್ಟಾಂಪ್‌ ನ್ನು ಡಿ.7ರಂದು ಲಂಡನ್‌ನಲ್ಲಿ ಸೂತ್‌ಬೆ ಹರಾಜು ಸಂಸ್ಥೆ ಮೂಲಕ ಹರಾಜು ನಡೆಸಲಾಗುತ್ತದೆ.

ಇದನ್ನೂ ಓದಿ:ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

Advertisement

Udayavani is now on Telegram. Click here to join our channel and stay updated with the latest news.

Next