Advertisement

ಕಟ್ಟಡ ಕಾರ್ಮಿಕರಿಗೆ 619 ಕೋಟಿ ಪ್ಯಾಕೇಜ್‌

05:43 AM Jun 03, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಹಿನ್ನೆಲೆಯಲ್ಲಿಕಟ್ಟಡ ಕಾರ್ಮಿಕರಿಗೆ 619 ಕೋಟಿ ಪ್ಯಾಕೇಜ್‌ ಸಂಕಷ್ಟದಲ್ಲಿರುವ ವಿವಿಧ ಶ್ರಮಿಕ ವರ್ಗಗಳಿಗೆ ಮುಖ್ಯಮಂತ್ರಿಯವರು ಘೋಷಿಸಿರುವ ವಿಶೇಷ ಪ್ಯಾಕೇಜ್‌ ಪ್ರಕಾರ 12.39 ಲಕ್ಷ ಕಟ್ಟಡ  ಕಾರ್ಮಿಕರಿಗೆ ತಲಾ 5 ಸಾವಿರ ರೂ. ಪರಿಹಾರ ಹಣವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಈ ಕುರಿತು ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಸಲ್ಲಿಸಿರುವ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ಎ.ಎಸ್‌. ಓಕಾ ಹಾಗೂ ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ವಕೀಲರಾದ ವಿ.ಜಿ. ಭಾನುಪ್ರಕಾಶ್‌ ಲಿಖೀತ ಆಕ್ಷೇ   ಪಣಾ ಹೇಳಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅದರಂತೆ, “ಮುಖ್ಯಮಂತ್ರಿಯವರು ಘೋಷಿಸಿದ ಪ್ಯಾಕೇಜ್‌ ಪ್ರಕಾರ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ  ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ 21.80 ಲಕ್ಷ ಕಟ್ಟಡ ಕಾರ್ಮಿಕರ ಪೈಕಿ ಈವರೆಗೆ ಮಂಡಳಿ ಬಳಿ ಬ್ಯಾಂಕ್‌ ಖಾತೆಗಳ ವಿವರ ಲಭ್ಯವಿದ್ದ 12.39 ಲಕ್ಷ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಗಳನ್ನು ಅವರ ಬ್ಯಾಂಕ್‌  ಖಾತೆಗಳಿಗೆ ಜಮಾ ಮಾಡಲಾಗಿದೆ. ಇದರ ಒಟ್ಟು ಮೊತ್ತ 619 ಕೋಟಿ ರೂ. ಆಗಿದೆ.

ಉಳಿದ ಕಾರ್ಮಿಕರ ಬ್ಯಾಂಕ್‌ ಖಾತೆ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಲು ರಾಜ್ಯಾದ್ಯಂತ 41 ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಜವಾಬ್ದಾರಿ  ವಹಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ, ಕಟ್ಟಡ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್‌, ಸಾಬೂನು ಪೂರೈಸಲು 41 ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ತಲಾ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈವರೆಗೆ ಕಟ್ಟಡ ಕಾರ್ಮಿಕರಿಗೆ  78.21 ಲಕ್ಷ ತಯಾರಿಸಿದ ಆಹಾರ ಕಿಟ್‌, 81 ಸಾವಿರ ಒಣ ಆಹಾರ ಪದಾರ್ಥಗಳ ಕಿಟ್‌ ಗಳನ್ನು ವಿತರಿಸಲಾಗಿದೆ. ರಾಜ್ಯಾದ್ಯಂತ ಅದರ ವಿತರಣೆ ಪ್ರಗತಿಯಲ್ಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ ಅರ್ಜಿದಾರರ ಪರ ವಕೀಲ  ಎಸ್‌.ಎಸ್‌. ರವಿಶಂಕರ್‌ ವಾದ ಮಂಡಿಸಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟ್‌ ನಿರ್ದೇಶನಗಳನ್ನು ಉಲ್ಲಂ ಸಲಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗುರುತಿನ  ಚೀಟಿ ನೀಡಲಾಗಿಲ್ಲ. ಬ್ಯಾಂಕ್‌ ಖಾತೆ ಇಲ್ಲದೇ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲಾಗಿದೆ ಇದು ನಿಯಮ ಬಾಹಿರ ಎಂದು ಆರೋಪಿಸಿದರು.

Advertisement

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರ ಹೇಳಿರುವ ಪ್ರಕಾರ 21.80 ಲಕ್ಷ  ಕಾರ್ಮಿಕರ ಪೈಕಿ 12.39 ಲಕ್ಷ ಕಾರ್ಮಿಕರಿಗಷ್ಟೇ ಪರಿಹಾರ ತಲುಪಿದೆ. ಹಾಗಾದರೆ, ಉಳಿದ ಕಾರ್ಮಿಕರಿಗೆ ಪರಿಹಾರ ಯಾವಾಗ ನೀಡಲಾಗುತ್ತದೆ? ಬ್ಯಾಂಕ್‌ ಖಾತೆ ಇಲ್ಲದ ಕಾರ್ಮಿಕರನ್ನು ನೋಂದಾಯಿಸಿ  ಕೊಂಡಿದ್ದು ಹೇಗೆ?  ಮಾನದಂಡಗಳ ವಿವರಣೆ ನೀಡುವಂತೆ ಸೂಚಿದ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next