Advertisement

6.10 ಎಕ್ರೆ ನಿರಾಕ್ಷೇಪಣಕ್ಕೆ ಜಂಟಿ ಸರ್ವೆ: ನಿರ್ಧಾರ

03:10 PM Dec 29, 2017 | |

ಸುಳ್ಯ: ಸುಳ್ಯ ಅಕಾಡೆಮಿ ಆಫ್ ಲಿಬರಲ್‌ ಎಜುಕೇಶನ್‌ ಅಧ್ಯಕ್ಷರು ನಗರ ಪಂಚಾಯತ್‌ಗೆ ಕಸಬಾ ಗ್ರಾಮದಲ್ಲಿ 6.10
ಎಕ್ರೆ ಮಂಜೂರು ಮಾಡಲು ನಿರಾಕ್ಷೇಪಣ ಪತ್ರ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಕಂದಾಯ ಇಲಾಖೆ, ನ.ಪಂ. ಹಾಗೂ ಸಂಬಂಧಿತರ ಸಮ್ಮುಖ ಜಂಟಿ ಸರ್ವೆ ನಡೆಸಲು ಗುರುವಾರ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸುಳ್ಯ ನ.ಪಂ. ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ.

Advertisement

ಆಡಳಿತ ಪಕ್ಷದ ಸದಸ್ಯ ಎನ್‌.ಎ. ರಾಮಚಂದ್ರ, ನ.ಪಂ. ಮುಖ್ಯಾಧಿಕಾರಿಗಳು, ಎಂಜಿನಿಯರ್‌ ಸ್ಥಳ ಪರಿಶೀಲನೆ ನಡೆಸಿ
ನಿರಾಕ್ಷೇಪಣ ಪತ್ರ ನೀಡುವಂತೆ ತಿಳಿಸಿದಾಗ ವಿಪಕ್ಷ ಸದಸ್ಯ ಶಿವಕುಮಾರ್‌ ಆಕ್ಷೇಪಿಸಿದರು. ಎಸ್‌ಡಿಪಿಐ ಸದಸ್ಯ ಉಮ್ಮರ್‌, ನಿರಾಕ್ಷೇಪಣ ಪತ್ರ ಕೋರಿ ಅರ್ಜಿ ಸಲ್ಲಿಸಿ ಎಷ್ಟು ಸಮಯವಾಗಿದೆ, ಪಂ. ಏನು ಕ್ರಮಕೈಗೊಂಡಿದೆ, ಪರಿಶೀಲನೆಗೆ ಬಂದಿದ್ದು ಮಾತ್ರವೇ ಅಥವಾ ನಿರಕ್ಷೇಪಣ ಪತ್ರ ನೀಡಲು ನಿರ್ಧರಿಸಲಾಗಿದೆಯೇ?  ಎಂದು ಕೇಳಿ, ವಿವರಣೆಗೆ ಪಟ್ಟು ಹಿಡಿದರು. ನಗರದಲ್ಲಿ 300 ಬಡವರು ಒಂದೆರಡು ಸೆಂಟ್ಸ್‌ ಜಾಗಕ್ಕೆ ನಿರಕ್ಷೇಪಣ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ ಎಂದರು.

ಎನ್‌.ಎ. ರಾಮಚಂದ್ರ ಅವರು, 300 ಮಾತ್ರವಲ್ಲ ಸಾಕಷ್ಟು ಮಂದಿ ಬಡವರಿಗೆ ಎನ್‌ಒಸಿ ಅಗತ್ಯವಿದೆ. ಕುರುಂಜಿಯವರು
ಅನೇಕ ಶಿಕ್ಷಣ ಸಂಸ್ಥೆಗಳನ್ನು ನೀಡಿದ್ದಾರೆ ಎಂದಾಗ, ಉಮ್ಮರ್‌ ನಗರದಲ್ಲಿ ಎಲ್ಲ ಬಡವರಿಗೂ ಕಟ್ಟಡಕ್ಕೆ ನಿರಕ್ಷೇಪಣ ಪತ್ರ ನೀಡಿ
ಎಂದರಲ್ಲದೆ, ಕೆವಿಜಿ ಸಂಸ್ಥೆಯವರು ತಮ್ಮ ಕಟ್ಟಡಗಳಿಗೆ ಎಷ್ಟು ತೆರಿಗೆ ನೀಡುತ್ತಿದ್ದಾರೆ ಎಂದು ವಿವರಿಸುವಂತೆ ಆಗ್ರಹಿಸಿದರು.
ಎನ್‌.ಎ. ರಾಮಚಂದ್ರ, ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಇದೆ. ಕೆವಿಜಿ ಸಂಸ್ಥೆಯಿಂದ ತಾಲೂಕಿನ ಕಡುಬಡವರಿಗೆ
ಸಹಾಯವಾಗಿದೆ. ಅಂದಾಜು 35 ಲಕ್ಷ ರೂ. ತೆರಿಗೆ ಪಾವತಿಸುತ್ತಿದ್ದಾರೆ ಎಂದರು. ಬಳಿಕ ಆಡಳಿತ ಪಕ್ಷದ ಸದಸ್ಯ ಗೋಪಾಲ ನಿರಾಕ್ಷೇಪಣ ಪತ್ರಕ್ಕಾಗಿ ಪರಿಶೀಲನೆ ನೀಡಲು ಕಾಲಾವಕಾಶ ನೀಡುವಂತೆ ಸಲಹೆ ನೀಡಿದರು.

ಎರಡು ದಿನ ಗಡವು
ನಾವು ಯಾರ ವಿರೋಧವೂ ಇಲ್ಲ, ಹೆದರುವುದೂ ಇಲ್ಲ. ಕಾನೂನು ದೃಷ್ಟಿಯಲ್ಲಿ ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕಾದ್ದು ಸದಸ್ಯರ ಕರ್ತವ್ಯ, ಡಾ| ಕುರುಂಜಿಯವರನ್ನು ನಾನು ಗೌರವಿಸುತ್ತೇವೆ. ಎರಡು ದಿನಗಳೊಳಗಾಗಿ ಈ ಬಗ್ಗೆ ತಹಶೀಲ್ದಾರ್‌ ಅವರಿಗೆ ಪತ್ರ ಬರೆಯಬೇಕು, ತಪ್ಪಿದಲ್ಲಿ ಲೋಕಾಯುಕ್ತಕ್ಕೆ ದೂರು ನೀಡುವುದು ನಿಶ್ಚಿತ. ಸದಸರ್ಯಾರು ತಪ್ಪಿನಲ್ಲಿ ಸಿಲುಕುವುದು
ಬೇಡವೆಂದು ಉಮ್ಮರ್‌ಎಚ್ಚರಿಸಿದರು.

ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸದಸ್ಯ ಗೋಕುಲ್‌ದಾಸ್‌, ಸಾರ್ವಜನಿಕ ರಸ್ತೆ
ಗುರುತಿಸಬೇಕು. ಅದಕ್ಕಾಗಿ ಜಂಟಿ ಸರ್ವೆ ಸೂಕ್ತ ಎಂದು ಸಲಹೆ ನೀಡಿದಾಗ ಸಭೆಯಲ್ಲಿ ಒಪ್ಪಿಗೆ ದೊರೆಯಿತು. ನ.ಪಂ. ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್‌ಕುರುಂಜಿ ಉಪಸ್ಥಿತರಿದ್ದರು.

Advertisement

ಸುಳ್ಯ ಜಾತ್ರೆ ಅವ್ಯವಸೆಯದ್ದು
ಸುಳ್ಯ ಜಾತ್ರೋತ್ಸವ ಸಮಿತಿ ಸಂತೆ ಅಂಗಡಿ ಏಲಂ ಕುರಿತಂತೆ ಚರ್ಚೆ ನಡೆಯಿತು. ಜಾತ್ರೋತ್ಸವ ಸಂದರ್ಭ ನ.ಪಂ. ಶುಚಿತ್ವ, ನೀರು ಪೂರೈಕೆ ಹೊಣೆ ನಿರ್ವಹಿಸುತ್ತಿದೆ. ಆದರೆ ಅಲ್ಲಿ ಸಂತೆ ಅಂಗಡಿಗಳಿಂದ ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದು ಪಂಚಾಯತ್‌ ಅಧಿಕಾರಿಗಳು ವಿವರಿಸಿದರು. ಕಳೆದ ಬಾರಿ ನ.ಪಂ.ಗೆ ಸ್ವಚ್ಛತೆಯ ಖರ್ಚು ತೆರಿಗೆ ಮೊತ್ತಕ್ಕಿಂತ ಹೆಚ್ಚಿತ್ತು. ಏಲಂನ್ನು ದೇವಸ್ಥಾನದವರೇ ನಿರ್ವಹಿಸುತ್ತಾರೆ. ಆದರೆ ಪೂರ್ವಭಾವಿ ಸಭೆಗೆ ನ.ಪಂ. ಸದಸ್ಯರನ್ನಾಗಲಿ ಅಥವಾ ಅಧಿಕಾರಿಗಳನ್ನಾಗಲಿ ಕರೆದಿಲ್ಲ. ಗೌರವಿಸುತ್ತಿಲ್ಲ. ಅವ್ಯವಸ್ಥೆಯಿಂದ ಕೂಡಿದ ಜಾತ್ರೆ, ಅಲ್ಲಿ ಆಗುತ್ತಿರುವುದು ಕೇವಲ ಸುಲಿಗೆ ಎಂದು ನ.ಪಂ. ಸದಸ್ಯ ಗೋಕುಲ್‌ದಾಸ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next