Advertisement
ಮಾ. 18 ರಂದು ಮಲಾಡ್ ಪಶ್ಚಿಮದ ಬಜಾಜ್ ಹಾಲ್‌ನಲ್ಲಿ ನಡೆದ ಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವದ ಉದ್ಘಾಟನೆ ಮತ್ತು ವಾರ್ಷಿಕ ನಾಡಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಇವರು, ಸಂಸ್ಕೃತವು ಸುಂದರ ಭಾಷೆಯಾಗಿದ್ದು ಕನ್ನಡ ಭಾಷೆ ಮತ್ತು ಅದರ ಶ್ರೇಷ್ಠತೆಯೆ ಅತೀ ಅಮೂಲ್ಯ. ಲಿಪಿಗಳ ರಾಣಿ ಕನ್ನಡ. ಈ ಸುಂದರವಾದ ಲಿಪಿಯನ್ನು ಹೊಂದಿದ ಭಾಷೆಯನ್ನು ಆಡುವವರು ನಾವು. ಅತೀ ಅಧಿಕ ಜ್ಞಾನಪೀಠ ಪ್ರಶಸ್ತಿಯು ಕನ್ನಡ ಭಾಷೆಯ ಸಾಹಿತಿಗಳಿಗೆ ಸಿಕ್ಕಿದೆ. ಅರುವತ್ತು ತುಂಬಿದ ಈ ಕನ್ನಡ ಸಂಘವನ್ನು ಮೇಲೆತ್ತುವಲ್ಲಿ ನಿಮ್ಮೆಲ್ಲರ ಪಾತ್ರ ಹಿರಿದಾದದ್ದು. ಇದನ್ನು ಇನ್ನೂ ಮೆಲಕ್ಕೆತ್ತಬೇಕಾದುದು ನಿಮ್ಮೆಲ್ಲರ ಕರ್ತವ್ಯ ಎಂದರು.
Related Articles
Advertisement
ಈ ಸಮಾರಂಭಕ್ಕೆ ಆಗಮಿಸಲು ನಾನು ಬಹಳ ಅಭಿಮಾನದಿಂದ ಒಪ್ಪಿರುವೆನು. ಹಿಂದೆ ನನ್ನ ತಾಯಿ ಈ ಸಂಘದಲ್ಲಿ ಕ್ರಿಯಾಶೀಲರಾಗಿದ್ದರು. ಆದುದರಿಂದ ನನಗೂ ಗೋರೆಗಾಂವ್ ಕರ್ನಾಟಕ ಸಂಘಕ್ಕೂ ನಿಕಟ ಸಂಬಂಧವಿದೆ. ಮಹಿಳೆಯರಿಗೆ ಪುರುಷರಂತೆ ಉತ್ತಮ ಶಿಕ್ಷಣವನ್ನು ನೀಡುವುದರೊಂದಿಗೆ ಸಮಾನತೆಯನ್ನು ಕಾಪಾಡಬೇಕಾಗಿದೆ. ವಿದೇಶದಲ್ಲಿನ ಮಹಿಳೆಯರಂತೆ ಇಲ್ಲಿನ ಮಹಿಳೆಯರು ಕೂಡ ಇನ್ನೂ ಶ್ರಮಜೀವಿಗಳಾಗಬೇಕು. ಕೆಲವು ಸಂಘಟನೆಗಳು ಹುಟ್ಟಿ ಅಲ್ಪಾವಧಿಯÇÉೇ ನಿಂತು ಹೋಗುತ್ತಿದ್ದು, ಈ ಸಂಘವು 60 ವರ್ಷಗಳನ್ನು ಪೂರೈಸಿದ್ದು ಅಭಿಮಾನದ ಸಂಗತಿಯಾಗಿದೆ – ಸುಚಿತ್ರಾ ಸಂತೋಷ್ ಪುತ್ರನ್ (ಕಾರ್ಯಾಧ್ಯಕ್ಷೆ : ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ). ಚಿತ್ರ-ವರದಿ:ಈಶ್ವರ ಎಂ. ಐಲ್