Advertisement

Air India Loaders 600 ಹುದ್ದೆಗೆ 25,000 ಅಭ್ಯರ್ಥಿಗಳು, ನೂಕುನುಗ್ಗಲು:ಕಾಲ್ತುಳಿತದ ಭೀತಿ!

11:38 AM Jul 17, 2024 | Team Udayavani |

ಮುಂಬೈ: 600 ಉದ್ಯೋಗಾವಕಾಶಕ್ಕಾಗಿ(Airport Loaders) ಬರೋಬ್ಬರಿ 25,000 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆಗಮಿಸಿದ ಪರಿಣಾಮ ಏರ್‌ ಇಂಡಿಯಾ ಸಿಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟ ಘಟನೆ ನಡೆದಿದ್ದು, ಒಂದು ಹಂತದಲ್ಲಿ ಕಾಲ್ತುಳಿತದ ಭೀತಿ ಹುಟ್ಟಿಸಿರುವುದಾಗಿ ವರದಿ ತಿಳಿಸಿದೆ.

Advertisement

ವಿಮಾನ ನಿಲ್ದಾಣದ ಲೋಡರ್ಸ್ ಉದ್ಯೋಗದ ಅರ್ಜಿ ಪಡೆಯಲು ಅಭ್ಯರ್ಥಿಗಳು ಒಬ್ಬರನ್ನೊಬ್ಬರು ತಳ್ಳಾಡುತ್ತಾ ಕೌಂಟರ್‌ ನತ್ತ‌ ನುಗ್ಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಭ್ಯರ್ಥಿಗಳು ಊಟೋಪಚಾರ ಇಲ್ಲದೇ ಗಂಟೆಗಟ್ಟಲೇ ಸಾಲಿನಲ್ಲಿ ನಿಂತ ಪರಿಣಾಮ ಹಲವಾರು ಮಂದಿ ಅಸ್ವಸ್ಥರಾದಂತೆ ಕಂಡು ಬಂದಿರುವುದಾಗಿ ವರದಿಯಾಗಿದೆ.

ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಲಗೇಜ್‌ ಲೋಡಿಂಗ್‌ ಮತ್ತು ಅನ್‌ ಲೋಡಿಂಗ್‌ (ಲಗೇಜ್‌ ಇಳಿಸುವ) ಮಾಡುವ ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಪ್ರತಿ ಕಾರ್ಗೋ ಮತ್ತು ಫುಡ್‌ ಸರಬರಾಜು ವಿಮಾನಗಳಿಗೆ ಕನಿಷ್ಠ ಐವರು ಲೋಡರ್ಸ್‌ ಗಳ ಅಗತ್ಯವಿದೆ ಎಂದು ವರದಿ ತಿಳಿಸಿದೆ.

ವಿಮಾನ ನಿಲ್ದಾಣ ಲೋಡರ್ಸ್‌ ಗಳ ಪ್ರತಿ ತಿಂಗಳ ಸಂಬಳ 20,000 ರಿಂದ 25 ಸಾವಿರ ರೂಪಾಯಿ ಇದೆ. ಆದರೆ ಓವರ್‌ ಟೈಮ್‌ ಭತ್ಯೆ ಮೂಲಕ 30,000ಕ್ಕೂ ಅಧಿಕ ಸಂಬಳ ಪಡೆಯುವವರು ಇದ್ದಾರೆ. ಈ ಕೆಲಸಕ್ಕೆ ಪ್ರಾಥಮಿಕ ಶಿಕ್ಷಣದ ಅರ್ಹತೆ ಇದ್ದು, ಅಭ್ಯರ್ಥಿಗಳು ದೈಹಿಕವಾಗಿ ಬಲಾಢ್ಯರಾಗಿರಬೇಕು.

Advertisement


400 ಕಿಲೋ ಮೀಟರ್‌ ದೂರದ ಬುಲ್ದಾನಾ ಜಿಲ್ಲೆಯಿಂದ ಮುಂಬೈಗೆ ಸಂದರ್ಶನಕ್ಕಾಗಿ ಆಗಮಿಸಿದ್ದ ಉದ್ಯೋಗದ ಆಕಾಂಕ್ಷಿ ಪ್ರಥಮೇಶ್ವರ್‌, ನಾನು ವಿಮಾನ ನಿಲ್ದಾಣದ ಹಮಾಲಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದೆ. ತಿಂಗಳಿಗೆ 22,500 ರೂ. ಸಂಬಳ ನೀಡುವುದಾಗಿ ಹೇಳಿರುವುದಾಗಿ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ನಾನು ವಿದ್ಯಾಭ್ಯಾಸವನ್ನು ಬಿಟ್ಟರೂ ಕೂಡಾ ನನಗೆ ಉದ್ಯೋಗ ದೊರೆಯುತ್ತದೆ. ಬೇರೆ ದಾರಿ ಇಲ್ಲ ನಿರುದ್ಯೋಗ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಕೆಲಸ ಸಿಕ್ಕಿದ್ದೆ ದೊಡ್ಡ ಭಾಗ್ಯ ಎಂದು ಪ್ರಥಮೇಶ್‌ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next