Advertisement

ಭವ್ಯ ರಾಮ ಮಂದಿರ ಶೇ.60ರಷ್ಟು ಪೂರ್ಣ

12:53 AM Jan 14, 2023 | Team Udayavani |

ಅಯೋಧ್ಯೆ: ಉ. ಪ್ರದೇಶದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಶೇ.60ರಷ್ಟು ಪೂರ್ಣಗೊಂಡಿದೆ. 2024ರ ಮಕರ ಸಂಕ್ರಾಂತಿ ಹಬ್ಬದಂದು ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಶುಕ್ರವಾರ ತಿಳಿಸಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ “ದೇಗುಲದ ಮೊದಲ ಹಂತಸ್ತಿನ ನಿರ್ಮಾಣ ಕಾರ್ಯವು ಅಕ್ಟೋಬರ್‌ಗೆ ಪೂರ್ಣಗೊಳ್ಳಲಿದೆ. ದೇಗುಲದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ವಿಗ್ರಹವನ್ನು 2024ರ ಮಕರ ಸಂಕ್ರಾಂತಿ ಹಬ್ಬದಂದು ಪ್ರತಿಷ್ಠಾಪಿಸಲಾಗುವುದು,’ ಎಂದು ವಿವರಿಸಿದರು.

ವಿಶೇಷತೆಗಳು:
ಗರ್ಭಗುಡಿ: 12 ಅಡಿ ಎತ್ತರದ ಪಾಯದ ಮೇಲೆ ಭವ್ಯವಾದ ಗರ್ಭಗುಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಎರಡು ವಿಗ್ರಹಗಳು:
ಪ್ರಭು ಶ್ರೀರಾಮನ ಎರಡು ವಿಗ್ರಹಗಳು ಇರಲಿದೆ. ದಶಕಗಳಿಂದ ಸ್ಥಾಪನೆಗೆ ಕಾಯುತ್ತಿರುವ ಮೂಲ ಶ್ರೀ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮತ್ತೊಂದು ಬೃಹತ್‌ ಶ್ರೀರಾಮನ ಪ್ರತಿಮೆಯನ್ನು ದೇಗುಲದ ಆವರಣದಲ್ಲಿ ಸ್ಥಾಪನೆಯಾಗಲಿದೆ. ಬಹುದೂರದಿಂದ ಈ ಪ್ರತಿಮೆ ಕಾಣಲಿದೆ.

3ಡಿ ಕೆತ್ತನೆ:
ಭಗವಾನ್‌ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ದೇವಾಲಯದ ಕೆಳ ಹಂತಸ್ತಿನ ಸ್ತಂಭಗಳಲ್ಲಿ 3ಡಿ ಯಲ್ಲಿ ಕೆತ್ತಲಾಗುತ್ತದೆ. ಇವು ಉಜ್ಜಯಿನಿಯ ಮಹಾಕಾಲ ದೇಗುಲದ ಲೋಕ ಕಾರಿಡಾರ್‌ ಮಾದರಿಯಲ್ಲಿ ಇರಲಿದೆ.

Advertisement

ಮೂರ್ತಿಗಳ ಸ್ಥಾಪನೆ:
ದೇಗುಲದ ಆವರಣದಲ್ಲಿ ಸೀತಾ ಮಾತೆ, ಲಕ್ಷ್ಮಣ ಪ್ರಭು, ಭರತ, ಶತ್ರುಘ್ನ, ಸುಗ್ರೀವ, ಶಬರಿ, ಪ್ರಭು ಹನುಮಂತ ಸೇರಿದಂತೆ ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖರ ಮೂರ್ತಿಗಳು ಸ್ಥಾಪನೆಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next