Advertisement

South Korea: ಮಕ್ಕಳನ್ನು ಹಡೆದರೆ 60 ಲಕ್ಷ ನಗದು! ದಕ್ಷಿಣ ಕೊರಿಯಾದ ಖಾಸಗಿ ಕಂಪೆನಿ ಘೋಷಣೆ

08:15 AM Feb 12, 2024 | Pranav MS |

ಹೊಸದಿಲ್ಲಿ: ಭಾರತದಂತಹ ದೇಶಗಳಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರಗಳು ಕಸರತ್ತು ನಡೆಸುತ್ತಿದ್ದರೆ, ಜನನ ಪ್ರಮಾಣ ಕುಂಠಿತವಾಗಿರುವ ದಕ್ಷಿಣ ಕೊರಿಯಾದಲ್ಲಿ ಮಕ್ಕಳನ್ನು ಹೆರುವ ಉದ್ಯೋಗಿಗಳಿಗೆ ತಲಾ 60 ಲಕ್ಷ ರೂ.ಗಳನ್ನು ನೀಡುವುದಾಗಿ ಖಾಸಗಿ ಕಂಪೆನಿಯೊಂದು ಘೋಷಿಸಿದೆ.

Advertisement

ಮಕ್ಕಳನ್ನು ಹೆತ್ತ ತನ್ನ ಉದ್ಯೋಗಿಗಳಿಗೆ ಹಣಕಾಸಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ನೇರ ಹಣಕಾಸು ಬೆಂಬಲ ನೀಡುವುದಾಗಿ ಕಟ್ಟಡ ನಿರ್ಮಾಣ ಕಂಪೆನಿ ಬೂಯಂಗ್‌ ಗ್ರೂಪ್‌ನ ಅಧ್ಯಕ್ಷ ಲೀ ಜೋಂಗ್‌ ಕ್ಯೂನ್‌ ಘೋಷಿಸಿದ್ದಾರೆ. ದ. ಕೊರಿಯಾದಲ್ಲಿ ಫ‌ಲವತ್ತತೆ ದರ 2022ರಲ್ಲಿ ಶೇ. 0.81ರಿಂದ 0.78ಕ್ಕೆ ಇಳಿಕೆಯಾಗಿ, ಜನನ ಪ್ರಮಾಣ 2.60 ಲಕ್ಷದಿಂದ 2.49 ಲಕ್ಷಕ್ಕೆ ಕುಸಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next