Advertisement

ದಿಟ್ಟೆ ವರ್ಣಿಕಾ: ಒಂದು ವಾರದಲ್ಲಿ 60 ಸಂದರ್ಶನ!

07:10 AM Aug 12, 2017 | |

ಚಂಡೀಗಢ: ಆಗಸ್ಟ್‌ 4ರ ಮಧ್ಯರಾತ್ರಿ. ಅಂದು ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದ ವರ್ಣಿಕಾ ಕುಂಡು ಎಂಬ ಯುವತಿಯನ್ನ ಬಿಜೆಪಿ ಮುಖಂಡರೊಬ್ಬರ 29ರ ಹರೆಯದ ಪುತ್ರ ಹಿಂಬಾಲಿಸಿ ಚುಡಾಯಿಸಿದ್ದಲ್ಲದೆ, ಆಕೆಯ ಅಪಹರಣಕ್ಕೆ ಯತ್ನಿಸಿದ್ದ. ಈ ಅನಿರೀಕ್ಷಿತ ಘಟನೆಯಿಂದ ಎದೆಗುಂದಿದರೂ ವರ್ಣಿಕಾ ಧೈರ್ಯಗೆಡಲಿಲ್ಲ.

Advertisement

ಮರು ದಿನ ಮಾಧ್ಯಮಗಳಲ್ಲಿ ವರ್ಣಿಕಾ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಾಣಿಸಿಕೊಂಡಿದ್ದರು. ಆದರೆ ನಂತರದ ದಿನ ತನ್ನ ಮುಖದ ಬಟ್ಟೆ ಕಳಚಿದ ದಿಟ್ಟ ಯುವತಿ, ಇಡೀ ದೇಶದ ಎದುರು ಕಾಣಿಸಿಕೊಂಡರು. ಘಟನೆ ನಡೆದಿರುವುದೇ ನಿಜವಾಗಿರುವಾಗ, ಚಾರಿತ್ರ್ಯ ಹಾಗೂ ಅವಮಾನಕ್ಕೆ ಅಂಜಿ ಮುಖ ಮುಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದರಿತ ವರ್ಣಿಕಾ, ಆ ರಾಜಕಾರಣಿಯ ಪುತ್ರನ ಬಂಡವಾಳವನ್ನ ಬಯಲಿಗೆಳೆದಿದ್ದರು.

ಹೀಗೆ ಎರಡೇ ದಿನದಲ್ಲಿ ದೇಶದಾದ್ಯಂತ ಮನೆಮಾತಾದ ವರ್ಣಿಕಾ, ಕೇವಲ ಒಂದು ವಾರದಲ್ಲಿ ಮಾಧ್ಯಮಗಳಿಗೆ 60 ಸಂದರ್ಶನ ನೀಡಿದ್ದಾರೆ. ಟ್ವಿಟರ್‌ನಲ್ಲಿ ಫಾಲೋ ಮಾಡುವವರ ಸಂಖ್ಯೆ ಹತ್ತಾರು ಸಾವಿರ ಮೀರಿದೆ. ಈ ಮೂಲಕ ದೇಶಕ್ಕೆ ದೇಶವೇ ನೊಂದ ಯುವತಿಯ ಬೆನ್ನಿಗೆ ನಿಂತು ಧೈರ್ಯ ತುಂಬಿದೆ. ಆದರೆ “ತನಗೆ ಸಿಕ್ಕ ಈ ಅದ್ಭುತ ಬೆಂಬಲ ನೆನೆದು ವರ್ಣಿಕಾ ಕೆಲವೊಮ್ಮೆ ಕಣ್ಣೀರಾಗುತ್ತಾರೆ. ಪತ್ರಿಕೆಗಳಲ್ಲಿ ಬಂದ ತನ್ನದೇ ವರದಿಗಳನ್ನ ಓದಿ ಮೂರು ಬಾರಿ ಕುಸಿದು ಬಿದ್ದಿದ್ದಾರೆ,’ ಎಂದು ಅವರ ತಂಗಿ ಸಾತ್ವಿಕಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next