Advertisement

60 ಡಬಲ್‌ ಡೆಕ್ಕರ್‌ ಬಸ್‌ಗಳ ಸೇವಾರಂಭ

05:42 PM Jul 14, 2020 | Suhan S |

ಮುಂಬಯಿ, ಜು. 13: ರಾಜ್ಯದ ಮಿಷನ್‌ ಬಿಗಿನ್‌ ಎಗೇನ್‌ ಅಭಿಯಾನದ ಅಡಿಯಲ್ಲಿ ಲಾಕ್‌ ಡೌನ್‌ ನಿರ್ಬಂಧಗಳೊಂದಿಗೆ ಹೆಚ್ಚಿದ ಪ್ರಯಾಣಿಕರ ಒತ್ತಡವನ್ನು ಕಡಿಮೆಗೊಳಿಸಲು ಸುಮಾರು 60 ಡಬಲ್‌ ಡೆಕ್ಕರ್‌ ಬಸ್ಸುಗಳು ಸೋಮವಾರದಿಂದ ನಗರದ ರಸ್ತೆಗಳಲ್ಲಿ ಸೇವಾರಂಭಗೊಂಡಿವೆ.

Advertisement

45 ಜನರೀಗೆ ಮಾತ್ರ ಪ್ರಯಾಣ ಬೆಸ್ಟ್‌ ಡಬಲ್‌ ಡೆಕ್ಕರ್‌ಗಳು 90 ಪ್ರಯಾಣಿಕರಿಗೆ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ ಸಾಮಾಜಿಕ ಅಂತರದ ನಿಯಮಗಳಿಂದಾಗಿ ಪ್ರತಿ ಬಸ್‌ನಲ್ಲಿ ಕೇವಲ 45 ಆಸನಗಳು ಪ್ರಯಾಣಿಕರಿಗೆ ಮಾತ್ರ ಅವಕಾಶವಿರುತ್ತದೆ. ಸಾಮಾನ್ಯ ಬೆಸ್ಟ್‌ ಬಸ್‌ಗೆ ಗರಿಷ್ಠ 25 ಆಸನಗಳು ಮತ್ತು ಐದು ಮಂದಿ ಪ್ರಯಾಣಿಕರನ್ನು ಸಾಗಿಸಲು ಅವಕಾಶವಿದೆ. ಬೆಸ್ಟ್‌ ಬಸ್‌ಗಳಲ್ಲಿನ ಪ್ರಯಾಣಿಕರ ಬಲವು ಒಂದೆರಡು ವಾರಗಳಲ್ಲಿ 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆಯಾಗಲಿದೆ. ಬೇಡಿಕೆಯನ್ನು ಪೂರೈಸಲು ನಮಗೆ ಹೆಚ್ಚಿನ ಬಸ್‌ಗಳು ಬೇಕಾಗುತ್ತವೆ. ನಾವು ಈಗಾಗಲೇ 3,200 ಸಾಮಾನ್ಯ ಬಸ್‌ಗಳನ್ನು ಸೇವೆಯಲ್ಲಿ ತೊಡಗಿಸಿದ್ದೇವೆ. ಇದೀಗ ಡಬಲ್‌ ಡೆಕ್ಕರ್‌ಗಳನ್ನು ನಿಯೋಜಿಸುವ ಸಮಯ ಬಂದಿದೆ ಎಂದು ಬೆಸ್ಟ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಎಸ್‌ಎಂಟಿ ಮತ್ತು ಚರ್ಚ್‌ಗೇಟ್‌ ನಿಲ್ದಾಣದ ಹೊರಗಿನ ಬಸ್‌ಗಳು ಸೇರಿದಂತೆ ಈ ವಾರದಿಂದ ಹಲವಾರು ಸ್ಟೇಷನ್‌ ಫೀಡರ್‌ ಮಾರ್ಗಗಳನ್ನು ಪ್ರಾರಂಭಿಸುವುದಾಗಿ ಬೆಸ್ಟ್‌ ಘೋಷಿಸಿದೆ. ಕಾರ್ಮಿಕರಿಗೆ ವಿವಿಧೆಡೆಗಳಿಗೆ ಸಂಪರ್ಕಕ್ಕಾಗಿ ಬಸ್‌ಗಳನ್ನು ಹತ್ತಲು ಅನುವು ಮಾಡಿಕೊಟ್ಟಂತಾಗುತ್ತದೆ. ಡಬಲ್‌ ಡೆಕ್ಕರ್‌ ಗಳ ಮಾರ್ಗಗಳಲ್ಲಿ ಸಿಎಸ್‌ಎಂಟಿಯಿಂದ ನಾರಿ ಮನ್‌ ಪಾಯಿಂಟ್‌, ಕಫ್ಪರೇಡ್‌, ಕೊಲಾಬಾ, ವರ್ಲಿ, ಅಂಧೇರಿಯವರೆಗಿನ ಫಿಟ್‌ನಲ್ಲಿರುವ 120 ಡಬಲ್‌ ಡೆಕ್ಕರ್‌ ಬಸ್‌ಗಳಲ್ಲಿ 60 ಬಸ್‌ ಗಳ ಸೇವೆಯನ್ನು ಪ್ರಾರಂಭಿಸಲಾಗುವುದು. ಉಳಿದವುಗಳನ್ನು ಪ್ರಯಾಣಿಕರ ಬೇಡಿಕೆಯಂತೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next