Advertisement
ನವೆಂಬರ್ 20ರಿಂದ ಡಿಸೆಂಬರ್ 14ರ ವರೆಗೆ ನಡೆಯುವ ಚಳುವಳಿಯನ್ನು ಕಾಸರಗೋಡು ಹೊಸ ಬಸ್ಸು ನಿಲ್ದಾಣ ಸಮೀಪದ ಸಹಿಮರದಡಿಯಲ್ಲಿ ಲೇಖಕ ರಹ್ಮಾನ್ ತಾಯಲಂಗಾಡಿ ನಿರ್ವಹಿಸಿ ಮಾತನಾಡಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಕಾಸರಗೋಡಿನ ಅಭಿಮಾನವಾಗಿರುವ ಮೆಡಿಕಲ್ ಕಾಲೇಜನ್ನು ಕೇವಲ ಪ್ರದರ್ಶನದ ವಸ್ತುವಾಗಿಸುವ ಪ್ರಯತ್ನ ಖಂಡನೀಯ. 6ವರ್ಷಗಳಲ್ಲಿ ನಿರ್ಮಾಣ ಕಾರ್ಯ ಅರ್ಧದಷ್ಟೂ ಪೂರ್ತಿಯಾಗಿಲ್ಲ ಎನ್ನುವುದು ವಿಷಾಧನೀಯ. ಮಾತ್ರವಲ್ಲದೆ ಕಾಸರಗೋಡಿನ ಕಡೆಗಿನ ಕಡೆಗಣನೆಗೆ ಸಾಕ್ಷಿ. ಆದುದರಿಂದ ಜನರು ಒಟ್ಟಾಗಿ ಸರಕಾರವನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿ ಆದಷ್ಟು ಬೇಗ ನಿರ್ಮಾಣಕಾರ್ಯ ಪೂರ್ಣಗೊಂಡು ಜನರಿಗೆ ಅದರ ಪ್ರಯೋಜನ ದೊರಕುವಂತಾಗಬೇಕು ಎಂದರು.
Related Articles
Advertisement
ಕಾಸರಗೋಡು, ಬದಿಯಡ್ಕ, ಪೆರ್ಲ, ಸೀತಾಂಗೋಳಿ, ಕುಂಬಾxಜೆ ಮೊದಲಾದ ಕಡೆಗಳಲ್ಲಿ ಸಮರ ನಡೆಯಲಿದೆ. ಜನಕೀಯ ಸಮಿತಿ ಅಧ್ಯಕ್ಷ ಮಾಹಿನ್ ಕೇಳ್ಳೋಟ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೀವನ್ ಥೋಮಸ್, ಅಬ್ದುಲ್ ನಾಸಿರ್, ಸಿ.ಎನ್.ಹಮೀದ್, ಶ್ಯಾಮ ಪ್ರಸಾದ್ ಮಾನ್ಯ ಜಲೀಲ್, ಟಿ.ಎ.ಶಾಫಿ, ರಹೀಮ್, ಹಿರಿಯ ಸಾಹಿತಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ಕೆ.ನಾಗೇಶ್, ಪೊÅ.ಗೋಪಿನಾಥನ್, ಪ್ರೋ.ಶ್ರೀನಾಥ್, ನಾರಾಯಣನ್ ಪುಷ್ಪರಾಜನ್ ಬಂಡಿಚ್ಚಾಲ್, ಕುಂಜಾರ್ ಮುಹಮ್ಮದ್, ಗಿರೀಶ್, ರಾಜಗೋಪಾಲ ಕೈಪಂಗಳ, ರವೀಂದ್ರನ್ ಪಾಡಿ, ಅಜಯನ್, ಕರುಣಾಕರನ್, ನಾರಾಯಣನ್ ನಾಯರ್, ನಾಯರ್, ಪ್ರಭ, ಅಶೋಕ, ರವಿ, ದಿನಕರ ಭಟ್, ಮಧು, ಅಶ್ರಫಾಲಿ ಚೇರಂಗೆ„, ಉಷಾ ಟೀಚರ್, ಎ.ಬಂಡಿಚ್ಚಾಲ್. ಪಿ.ವಿಕೆ.ಅರಮಂಗಾನ, ರೌಫ್, ನಜೀಬ್, ಮೊಯೀªನ್ ಕುಟ್ಟಿ, ಮುಂತಾದವರು ಮಾತನಾಡಿದರು. ಶ್ಯಾಮ ಪ್ರಸಾದ್ ಸ್ವಾಗತಿಸಿ ವಂದಿಸಿದರು.ಚಿತ್ರಗಾರರಾದ ರವಿ ಪಿಲಿಕ್ಕೋಡ್, ಆಶೋಕನ್ ಚಿತ್ರಲೇಖ, ಪ್ರಭನ್ ಪಿಲಿಕ್ಕೋಡ್, ದಿನಕರಲಾಲ್ ಪಿಲಿಕ್ಕೋಡ್, ಮಧು ಪಿಲಿಕ್ಕೋಡ್ ಚಿತ್ರಗಳನ್ನು ರಚಿಸಿ ಸೂಚಿಸಿದರು.
ಹೆಚ್ಚಿನ ಹೋರಾಟ2013 ನ.30. ಉಮ್ಮನ್ ಚಾಂಡಿ (ಅಂದಿನ ಮುಖ್ಯಮಂತ್ರಿ) ಶಿಲಾನ್ಯಾಸಗೈದ ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿಯು ಆರಂಭದಿಂದಲೇ ಆಮೆಗತಿಯಲ್ಲಿ ಸಾಗುತ್ತಿದ್ದು 6ವರ್ಷಗಳ ಬಳಿಕವೂ ಅರ್ಧದಷ್ಟೂ ಕೆಲಸ ಪೂರ್ತಿಯಾಗದೆ ಜನರನ್ನು ಅಣಕಿಸುತ್ತಿದೆ. ಕಾಸರಗೋಡಿನ ಜನತೆ ಉತ್ತಮ ಚಿಕಿತ್ಸೆಗಾಗಿ ನೆರೆರಾಜ್ಯವನ್ನೋ, ಇತರ ಜಿಲ್ಲೆಗಳನ್ನೋ ಅವಲಂಭಿಸಬೇಕಾದ ಅನಿಒವಾರ್ಯತೆ ಇದೆ. ಈ ಸಮಸ್ಯೆಗೆ ಪರಿಹಾರವಾಗಿ ಆದಷ್ಟು ಬೇಗ ಮೆಡಿಕಲ್ ಕಾಲೇಜಿನ ಕೆಲಸ ಪೂರ್ತಿಗೊಳಿಸುವಂತೆ ಒತ್ತಾಯಿಸಿ ಈ ಚಳುವಳಿಗೆ ಮುಂದಾಗಿದ್ದೇವೆ. ಕಡೆಗಣನೆ ಕೊನೆಯಾಗಬೇಕು.
– ಮಾಹಿನ್ ಕೇಳ್ಳೋಟ್,
ಜನಪರ ಸಮರ ಸಮಿತಿ ಅಧ್ಯಕ್ಷ -ಅಖೀಲೇಶ್ ನಗುಮುಗಂ