Advertisement

Tragedy: ಆಟವಾಡುತ್ತಾ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ; ರಕ್ಷಣೆಗೆ ಹರಸಾಹಸ

09:28 AM Apr 13, 2024 | Team Udayavani |

ಮಧ್ಯಪ್ರದೇಶ: ಕಳೆದ ಒಂದು ವಾರದ ಹಿಂದೆ ಕರ್ನಾಟಕದ ವಿಜಯಪುರ ತಾಲೂಕಿನ ಇಂಡಿಯಲ್ಲಿ ಎರಡು ವರ್ಷದ ಮಗುವೊಂದು ಆಟವಾಡುವ ವೇಳೆ ಕೊಳವೆ ಬಿದ್ದ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಆರು ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದಿದ್ದಾನೆ.

Advertisement

ಬಾಲಕ ಕೊಳವೆ ಬಾವಿಗೆ ಬಿದ್ದಿರುವ ವಿಚಾರ ತಿಳಿಯುತ್ತಲೇ ಬಾಲಕನ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಶುಕ್ರವಾರ ಮಧ್ಯಾಹ್ನ ಆರು ವರ್ಷದ ಬಾಲಕ ಮಯೂರ್ ತನ್ನ ಇತರ ಸ್ನೇಹಿತರ ಜೊತೆ ಗದ್ದೆಯಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದಾನೆ ಈ ವಿಚಾರವನ್ನು ಆತನ ಜೊತೆಗಿದ್ದ ಇತರ ಬಾಲಕರು ಪೋಷಕರ ಬಳಿ ತಿಳಿಸಿದ್ದಾರೆ.

ಅಲ್ಲೇ ಇದ್ದ ಪೋಷಕರು ಬಂದು ನೋಡುವಷ್ಟರಲ್ಲಿ ಮಯೂರ್ ಸುಮಾರು ಅರುವತ್ತು ಅಡಿ ಆಳಕ್ಕೆ ಜಾರಿ ಹೋಗಿರುವುದು ಗೊತ್ತಾಗಿದೆ ಕೂಡಲೇ ಎಚ್ಚೆತ್ತ ಅಲ್ಲಿದ್ದ ಜನ ಪೊಲೀಸರಿಗೆ ಹಾಗೂ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಬಂದ ತಂಡ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದೆ.

ಕಾರ್ಯಾಚರಣೆಗೆ ಅಡ್ಡಿಯಾದ ಮಳೆ:
ಒಂದೆಡೆ ಜಿಸಿಬಿ ಮೂಲಕ ಬಾಲಕನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೆ ಇನ್ನೊಂದೆಡೆ ಸುರಿಯುತ್ತಿರುವ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ತಂಡದಿಂದ ಬಾಲಕನಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದ್ದು ಎರಡು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Temple: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಐತಿಹಾಸಿಕ ಹಿಂದೂ ದೇವಾಲಯವನ್ನೇ ನೆಲಸಮ ಮಾಡಿದ ಪಾಕ್

Advertisement
Advertisement

Udayavani is now on Telegram. Click here to join our channel and stay updated with the latest news.

Next