Advertisement

8 ವರ್ಷಗಳಲ್ಲಿ 6 ವಿಶ್ವಕಪ್‌: ಆಸ್ಟ್ರೇಲಿಯ ವಿರೋಧ

10:58 PM Oct 29, 2019 | Team Udayavani |

ಹೊಸದಿಲ್ಲಿ: ಐಸಿಸಿಯ ಭವಿಷ್ಯದ 8 ವರ್ಷಗಳ ವೇಳಾಪಟ್ಟಿಗೆ ಇದೀಗ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ (ಎಸಿಬಿ) ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೂ ಮುನ್ನ ಬಿಸಿಸಿಐ ಆಕ್ಷೇಪಿಸಿತ್ತು.

Advertisement

“2023ರಿಂದ 2031ರ ವರೆಗಿನ 8 ವರ್ಷಗಳ ಅವಧಿಯಲ್ಲಿ 6 ವಿಶ್ವಕಪ್‌ ಪಂದ್ಯಾವಳಿಗಳನ್ನು ಆಡಿಸುವುದು ಐಸಿಸಿ ಲೆಕ್ಕಾಚಾರ. ಇದು ವಿಪರೀತವಾಗುತ್ತದೆ. ಹೀಗಾದರೆ ವಿಶ್ವಕಪ್‌ ಮತ್ತು ಇತರೆ ಕ್ರಿಕೆಟ್‌ ನಡುವೆ ಸಮನ್ವಯ ಸಾಧಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಚರ್ಚೆ ನಡಸಲೇಬೇಕಾಗುತ್ತದೆ’ ಎಂದು ಎಸಿಬಿ ಹೇಳಿದೆ.

ಹಿಂದಿನ 8 ವರ್ಷಗಳ ವೇಳಾಪಟ್ಟಿಯಲ್ಲಿ 6 ವಿಶ್ವ ಕೂಟಗಳು ನಡೆದಿದ್ದವು. ಅದಕ್ಕೂ ಹಿಂದೆ ಚಾಂಪಿಯನ್ಸ್‌ ಟ್ರೋಫಿಯೂ ಸೇರಿ ವರ್ಷಕ್ಕೊಂದರ ಲೆಕ್ಕದಲ್ಲಿ ವಿಶ್ವಕೂಟಗಳು ನಡೆದಿದ್ದವು. 2023-31ರ ಅವಧಿಯಲ್ಲಿ 8 ವಿಶ್ವಕೂಟಗಳನ್ನು ನಡೆಸಲು ಐಸಿಸಿಯ ನೂತನ ಸಿಇಒ ಮನು ಸಾಹಿ° ಸಲಹೆ ನೀಡಿದ್ದಾರೆ. ಇದರಲ್ಲಿ 2 ಏಕದಿನ, 4 ಟಿ20 ವಿಶ್ವಕಪ್‌ಗ್ಳು ಸೇರಿವೆ. ಇದು ವಿಪರೀತವಾಗುತ್ತದೆ ಎನ್ನುವುದು ವಿರೋಧಕ್ಕೆ ಕಾರಣ.

ವಿಶ್ವಕಪ್‌ಗ್ಳ ಜತೆಗೆ ಇತರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು, ಐಪಿಎಲ್‌, ಬಿಬಿಎಲ್‌ನಂತಹ ಟಿ20 ಲೀಗ್‌ಗಳು, ದೇಶಿ ಕ್ರಿಕೆಟ್‌, ವಿಶ್ವ ಟೆಸ್ಟ್‌ ಕೂಟ ಇವೆಲ್ಲವನ್ನೂ ನಡೆಸಬೇಕಾಗುತ್ತದೆ. ವಿಶ್ವ ಕೂಟಗಳು ಹೆಚ್ಚಾದರೆ ಇತರ ಪಂದ್ಯಗಳ ಮೇಲೆ ಹಿಡಿತ ಸಾಧಿಸಲು ಆಗುವುದಿಲ್ಲ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಸಿಇಒ ಕೆವಿನ್‌ ರಾಬರ್ಟ್ಸ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next