ಭೋಪಾಲ್: ಕ್ಷೌರ (ಹೇರ್ ಕಟ್) ಮಾಡಿಸಿಕೊಳ್ಳಲೆಂದು ಸಲೂನ್ ಗೆ ತೆರಳಿದ 6 ಮಂದಿ ವ್ಯಕ್ತಿಗಳಿಗೆ ಕೋವಿಡ್ -19 ಸೋಂಕು ತಗುಲಿರುವ ಘಟನೆ ಮಧ‍್ಯಪ್ರದೇಶದ ಗ್ರಾಮವೊದರಲ್ಲಿ ನಡೆದಿದೆ. ಇದೀಗ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,
ಎನ್ ಡಿಟಿವಿ ವರದಿಯ ಪ್ರಕಾರ ಕ್ಷೌರ ಮಾಡುವಾತ ಎಲ್ಲಾ ಆರು ಜನರಿಗೂ ಹೇರ್ ಕಟ್ ಮತ್ತು ಶೇವಿಂಗ್ ಮಾಡುವಾಗ ಒಂದೇ ಬಟ್ಟೆಯನ್ನು ಉಪಯೋಗಿಸಿದ್ದಾನೆ.
ಇದಕ್ಕೂ ಮೊದಲು ಇಂದೋರ್ ನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಖಾರಾಗೋನ್ ಗ್ರಾಮಕ್ಕೆ ಬಂದು ಹೇರ್ ಕಟ್ ಮಾಡಿಸಿಕೊಂಡಿದ್ದು ತದನಂತರದಲ್ಲಿ ಈತನಿಗೆ ಕೋವಿಡ್ 19 ಸೋಂಕು ಇರುವುದು ಪತ್ತೆಯಾಗಿತ್ತು. ಈತನಿಗೆ ಉಪಯೋಗಿಸಿದ್ದ ಬಟ್ಟೆಯನ್ನೇ ಕ್ಷೌರಿಕ ಇತರ 6 ಮಂದಿಗೂ ಬಳಸಿದ್ದು ಆರು ಜನರಿಗೂ ಕೋವಿಡ್ -19 ಪಾಸಿಟಿವ್ ವರದಿ ಬಂದಿದೆ.
ಆದರೆ ಇದೇ ಕ್ಷೌರದಂಗಡಿಯಲ್ಲಿ ಇನ್ನೂ 12 ಜನರು ಹೇರ್ ಕಟ್ ಮಾಡಿಸಿಕೊಂಡಿದ್ದು ಇನ್ನಷ್ಟೇ ವರದಿ ಬರಬೇಕಾಗಿದೆ. ಆಶ್ಚರ್ಯವೆಂದರೇ ಕ್ಷೌರ ಮಾಡಿದಾತನಿಗೆ ನೆಗೆಟಿವ್ ವರದಿ ಬಂದಿದೆ.
ಖಾರಗೋನ್ ಗ್ರಾಮದಲ್ಲಿ 60 ಮಂದಿಗೆ ಸೋಂಕು ತಗುಲಿದ್ದು ಇದರಲ್ಲಿ 6 ಜನರು ಸಾವನ್ನಪ್ಪಿದ್ದಾರೆ.