ಗುರುವಾರ ನಿಯಮ ಉಲ್ಲಂಘಿಸಿ ಗಲೀಜು ನೀರನ್ನು ರಸ್ತೆಗೆ ಚೆಲ್ಲುತ್ತಾ ಕಾರ್ಯಾಚರಿಸಿದ 6 ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
Advertisement
ಕೇರಳದಲ್ಲಿ ಕಟ್ಟು ನಿಟ್ಟಾಗಿ ಜಾರಿಕೇರಳದಲ್ಲಿ ಮೀನು ಸಾಗಿಸುವ ಲಾರಿಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ದ ದಕ್ಷಿಣ ವಲಯ ಪೀಠವು 2015ರಲ್ಲಿಯೇ ಆದೇಶವೊಂದನ್ನು ಕೇರಳ ಸರಕಾರಕ್ಕೆ ನೀಡಿದ್ದು, ಕೇರಳ ಸರಕಾರ ಈ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದ್ದರಿಂದ ಅಲ್ಲಿ ಮೀನು ಸಾಗಾಟ ವಾಹನಗಳಿಂದ ಪರಿಸರ ಮಾಲಿನ್ಯಕ್ಕೆ ಕಡಿವಾಣ ಬಿದ್ದಿದೆ. ಹಾಗಾಗಿ ಅದೇ ಆದೇಶವನ್ನು ಮಂಗಳೂ ರಿನಲ್ಲಿಯೂ ಜಾರಿಗೊಳಿಸಲು ತೀರ್ಮಾ ನಿಸಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮೇ 6ರಂದು ಆದೇಶ ಹೊರಡಿಸಿದ್ದರು.
ಎನ್‌ಜಿಟಿ ಆದೇಶವನ್ನು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡುವುದನ್ನು ಖಾತರಿಪಡಿಸುವಂತೆ ಪೊಲೀಸ್ ಆಯುಕ್ತರು ನಗರ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಫೋನ್ ಇನ್‌ನಲ್ಲಿ ದೂರು
ಮೀನು ಸಾಗಾಟ ವಾಹನಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಪ್ರತಿ ಶುಕ್ರವಾರ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಸಾರ್ವ ಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಎ. 29ರಂದು ಪೊಲೀಸ್ ಕಮಿಷನರ್ ಸಭೆಯೊಂದನ್ನು ನಡೆಸಿದ್ದರು. ಮೀನು ಸಾಗಾಟ ಲಾರಿಗಳ ಮಾಲಕರು ಮತ್ತು ಚಾಲಕರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಸಮಸ್ಯೆಯ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗಿತ್ತು. ಈ ಸಂದರ್ಭ ಕೇರಳ ಸರಕಾರ ಜಾರಿಗೆ ತಂದಿರುವ ಕಾನೂನಿನ ಬಗ್ಗೆ ಪ್ರಸ್ತಾವವಾಗಿತ್ತು. ಹಾಗಾಗಿ ಬಳಿಕ ಪೊಲೀಸರು ಎನ್‌ಜಿಟಿ ಕೇರಳ ಸರಕಾರಕ್ಕೆ ನೀಡಿದ ಆದೇಶದ ಬಗ್ಗೆ ಅಧ್ಯಯನ ನಡೆಸಿ ಅದನ್ನು ಮಂಗಳೂರಿಗೂ ಅನ್ವಯಿಸಲು ನಿರ್ಣಯ ಕೈಗೊಂಡಿದ್ದರು. ಅದರಂತೆ ಮೇ 6ರಿಂದ ಅನ್ವಯವಾಗುವಂತೆ ಎನ್‌ಜಿಟಿ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೊಳ್ಳುವುದನ್ನು ಖಾತರಿ ಪಡಿಸು ವಂತೆ ಪೊಲೀಸ್ ಆಯುಕ್ತರು ಪೊಲೀ ಸರಿಗೆ ನೋಟಿಸ್ ಜಾರಿ ಮಾಡಿದ್ದರು.
ಆ ಪ್ರಕಾರ ಪೊಲೀಸರು ಕ್ರಮ ಜರ ಗಿಸಲು ಗುರುವಾರ ಆರಂಭಿಸಿದ್ದು, ನಿರಂತರವಾಗಿ ಮುಂದುರಿಸಲು ತೀರ್ಮಾನಿಸಿದ್ದಾರೆ.
Related Articles
ಎನ್‌ಜಿಟಿ ದಕ್ಷಿಣ ವಲಯ ನ್ಯಾಯಾಲಯವು ಕೇರಳದಲ್ಲಿನ ಮೀನಿನ ಲಾರಿಗಳ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ 2015 ಜುಲೈ 2ರಂದು ನೀಡಿದ ಆದೇಶದ ವಿವರ:
– ಮೀನು ಸಾಗಿಸುವ ಎಲ್ಲ ವಾಹನಗಳಿಂದ ತ್ಯಾಜ್ಯ ನೀರು ಸೋರಿಕೆ ಆಗದಂತೆ ಸೂಕ್ತ ವ್ಯವಸ್ಥೆ (ಲೀಕ್ ಪ್ರೂಫ್) ಮಾಡ ಬೇಕು.
– ಮಂಜುಗಡ್ಡೆ ಕರಗಿ ರಸ್ತೆಗೆ ಸೋರಿಕೆ ಆಗುವುದನ್ನು ತಡೆಯಲು ಮೀನುಗಳನ್ನು ಕ್ರೇಟ್‌ಗಳಲ್ಲಿ ತುಂಬಿಸಿ ಸಾಗಿಸ ಬೇಕು.
– ಮಂಜುಗಡ್ಡೆ ಕರಗಿ ಕ್ರೇಟ್‌ನಲ್ಲಿ ತುಂಬಿ ಹೊರಗೆ ಬರುವ ತ್ಯಾಜ್ಯ ನೀರು ರಸ್ತೆಗೆ ಬೀಳದಂತೆ ಅದನ್ನು ಸಂಗ್ರಹಿಸಲು ಸೂಕ್ತ ಟ್ಯಾಂಕನ್ನು (ಒಂದು ಟನ್ ಸಾಮರ್ಥ್ಯದ ಲಾರಿಗೆ 50 ಲೀ. ಸಾಮರ್ಥ್ಯದ ಟ್ಯಾಂಕ್) ವಾಹನಕ್ಕೆ ಕಡ್ಡಾಯವಾಗಿ ಜೋಡಿಸಿರಬೇಕು.
Advertisement